Coronavirus Origin Investigation: ಕೊರೋನಾದ ಉತ್ಪತ್ತಿಯ ಕುರಿತಾದ ತನಿಖೆಯಲ್ಲಿ WHOಗೆ ಸಹಕರಿಸುವಂತೆ ಚೀನಾಗೆ ಸೂಚಿಸಿದ UN

Coronavirus Origin Investigation: ಕರೋನಾ ವೈರಸ್ (Covid-19) ಉತ್ಪತ್ತಿಯ ಕುರಿತು ನಡೆಸಲಾಗುತ್ತಿರುವ ತನಿಖೆಗೆ ಚೀನಾ (China) ಮೊದಲಿನಿಂದಲೂ ಹಿಂದೇಟು ಹಾಕುತ್ತಿದೆ. ಆದರೆ, ಇದೀಗ ಚೀನಾ, ವಿಶ್ವ ಆರೋಗ್ಯ ಸಂಸ್ಥೆಯ (World Health Organization) ತನಿಖೆಯ ಎರಡನೇ ಹಂತದ ಬಗ್ಗೆ ಪ್ರಶ್ನೆ ಎತ್ತುತ್ತಿದೆ.

Written by - Nitin Tabib | Last Updated : Jul 24, 2021, 04:40 PM IST
  • Covid-19 ಉತ್ಪತ್ತಿಯ ತನಿಖೆಯ ಕುರಿತು ಚೀನಾಗೆ ಸೂಚನೆ ನೀಡಿದ UN.
  • ಎರಡನೇ ಹಂತದ ನ್ಯಾಯಯುತ ತನಿಖೆಗೆ ಸಹಕರಿಸುವಂತೆ ಸೂಚನೆ.
  • ಎರಡನೇ ಹಂತದ ತನಿಖೆ ಆಮಾನಕಾರಿ ಎಂದು ಬಣ್ಣಿಸಿರುವ ಚೀನಾ ತನಿಖೆಗೆ ಹಿಂದೇಟು ಹಾಕುತ್ತಿದೆ.
Coronavirus Origin Investigation: ಕೊರೋನಾದ ಉತ್ಪತ್ತಿಯ ಕುರಿತಾದ ತನಿಖೆಯಲ್ಲಿ WHOಗೆ ಸಹಕರಿಸುವಂತೆ ಚೀನಾಗೆ ಸೂಚಿಸಿದ UN title=
Coronavirus Origin Investigation (File Photo)

Coronavirus Origin Investigation: ಕರೋನಾ ವೈರಸ್ (Covid-19) ಉತ್ಪತ್ತಿಯ ಕುರಿತು ನಡೆಸಲಾಗುತ್ತಿರುವ ತನಿಖೆಗೆ ಚೀನಾ (China) ಮೊದಲಿನಿಂದಲೂ ಹಿಂದೇಟು ಹಾಕುತ್ತಿದೆ. ಆದರೆ, ಇದೀಗ ಚೀನಾ, ವಿಶ್ವ ಆರೋಗ್ಯ ಸಂಸ್ಥೆಯ (World Health Organization) ತನಿಖೆಯ ಎರಡನೇ ಹಂತದ ಬಗ್ಗೆ ಪ್ರಶ್ನೆ ಎತ್ತುತ್ತಿದೆ. ತನಿಖೆಯ ಎರಡನೇ ಹಂತವನ್ನು ಚೀನಾ "ರಾಜಕೀಯ ಕುಶಲತೆಯ ಉತ್ಪನ್ನ" ಎಂದು ಬಣ್ಣಿಸಿದೆ. ಎರಡನೇ ಹಂತದ ತನಿಖೆ ನಡೆಸುವ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಯನ್ನು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿರಸ್ಕರಿಸಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳು ಚೀನಾದ ಈ ಕ್ರಮವನ್ನು ಟೀಕಿಸಿವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ, ಕರೋನಾ ವೈರಸ್‌ನ ಮೂಲವನ್ನು ಕಂಡುಹಿಡಿಯುವಲ್ಲಿ ಸಹಕಾರ ನೀಡುವಂತೆ ವಿಶ್ವಸಂಸ್ಥೆ ಚೀನಾ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವಸಂಸ್ಥೆಯ (United Nations) ಉಪ ವಕ್ತಾರ ಫರ್ಹಾನ್ ಹಕ್, 'ಚೀನಾ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ನಾವು ಕೋರುತ್ತೇವೆ. ಇದಕ್ಕಾಗಿ ಹೆಚ್ಚಿನ ಮಾಹಿತಿ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾವಿಸುತ್ತಿದ್ದರೆ, ಎಲ್ಲಾ ಸದಸ್ಯ ರಾಷ್ಟ್ರಗಳು ಸಹಕರಿಸಲಿವೆ ಎಂದು ನಾವು ಭಾವಿಸುತ್ತೇವೆ'. ಎಂದಿದ್ದಾರೆ. 

ಈ ತನಿಖೆಯನ್ನು ಅವಮಾನಕಾರಿ ಎಂದ ಚೀನಾ
ಜುಲೈ ತಿಂಗಳ ಆರಂಭದಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ಚೀನಾದಲ್ಲಿ ಕರೋನಾ ವೈರಸ್‌ನ ಮೂಲದ ಎರಡನೇ ಹಂತದ ಅಧ್ಯಯನದ ಕುರಿತು ಪ್ರಸ್ತಾಪಿಸಿತ್ತು. ಇದರ ಅಡಿಯಲ್ಲಿ ಚೀನಾದ ಅಧಿಕಾರಿಗಳಿಂದ ಪಾರದರ್ಶಕತೆ ಕೋರಲಾಗಿತ್ತು. ಇದರಲ್ಲಿ, ವುಹಾನ್ (Wuhan Lab) ನಗರದ ಲ್ಯಾಬ್‌ಗಗಳು, ಮಾರುಕಟ್ಟೆಗಳ ತನಿಖೆಯೇ ಬಗ್ಗೆ ಉಲ್ಲೇಖಿಸಲಾಗಿದೆ. ನಂತರ ಜುಲೈ 22 ರಂದು, ವಿಶ್ವ ಆರೋಗ್ಯ ಸಂಸ್ಥೆಯ ಈ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಯ ಮಾನದಂಡಗಳು "ಅವಮಾನಕಾರಿಯಾಗಿವೆ" ಎಂದು ಚೀನಾ ಹೇಳಿತ್ತು.

ಇದನ್ನೂ ಓದಿ-Nuclear Plant Leakage Alert! ಮತ್ತೆ ಸಂಚು ರೂಪಿಸುತ್ತಿದೆಯೇ China? Corona ಬಳಿಕ ಇದೀಗ Nuclear Disaster ಅಪಾಯ!

ನ್ಯಾಯಯುತ ತನಿಖೆಗೆ ಚೀನಾ ಸಹಕರಿಸುತ್ತಿಲ್ಲ
ಇತ್ತೀಚಿನ ದಿನಗಳಲ್ಲಿ, ಕರೋನಾ ವೈರಸ್‌ನ ಪ್ರಯೋಗಾಲಯ ಸೋರಿಕೆ ಸಿದ್ಧಾಂತದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯುಎಸ್ ಅಧ್ಯಕ್ಷ ಜೋ ಬಿಡನ್ (US President Joe Biden) ಕೂಡ ಈ ಲ್ಯಾಬ್-ಲೀಕ್ (Coronavirus Lab-Leak Theory) ಥಿಯರಿ ಆಂಗಲ್ ತನಿಖೆಯ ಬಗ್ಗೆ ಮಾತನಾಡಿದ್ದರು. ವೈರಸ್ ಮೂಲವನ್ನು ಕಂಡುಹಿಡಿಯಲು ಅವರು ಯುಎಸ್ ತನಿಖಾ ಸಂಸ್ಥೆಗಳನ್ನು (US Investigation Agencies) ಸಹ ಕೋರಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Corona Pandemic ಕುರಿತು ಚೀನಾಗೆ ಮೊದಲೇ ಗೊತ್ತಿತ್ತು! ಭಾರತೀಯ ವೈರಾಲಾಜಿಸ್ಟ್ ಗಂಭೀರ ಹೇಳಿಕೆ ಇದು

ಕರೋನಾ ವೈರಸ್‌ನ ಮೂಲವನ್ನು ಕಂಡುಹಿಡಿಯಲು ವಿಶ್ವ ಆರೋಗ್ಯ ಸಂಸ್ಥೆ (WHO Team) ತಂಡವು 2021 ರ ಆರಂಭದಲ್ಲಿ ಚೀನಾವನ್ನುತಲುಪಿತ್ತು. ಆದರೆ, ಈ ತಂಡಕ್ಕೆ ನ್ಯಾಯಯುತ ತನಿಖೆ ಮಾಡಲು ಚೀನಾ ಸಹಕರಿಸದಿದ್ದ ಕಾರಣ ತನಿಖಾ ತಂಡ ಸಾಕಷ್ಟು ತೊಂದರೆಗಳನ್ನು ಅನುಭವಿಸಿತ್ತು.

ಇದನ್ನೂ ಓದಿ-ಕೊರೊನಾದ ಮೂಲ ಕಂಡು ಹಿಡಿಯಲು ಡೆಡ್ ಲೈನ್ ನಿಗದಿಪಡಿಸಿದ ಯುಎಸ್ ಅಧ್ಯಕ್ಷ ಜೋ ಬಿಡೆನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News