Corona ಹೊಸ ರೂಪಾಂತರಿ ಯಾವಾಗ ವಕ್ಕರಿಸಲಿದೆ, WHO ಹೇಳಿದ್ದೇನು?

Corona Alpha Variant - ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಇಡೀ ವಿಶ್ವವನ್ನೇ ಬದಲಾಯಿಸಿದೆ. ಪ್ರತಿ ಬಾರಿ ಅದರ ಅಲೆ ಕಡಿಮೆಯಾಗುತ್ತಲೇ, ಇನ್ನೇನು ಈ ಸಾಂಕ್ರಾಮಿಕ ಅಂತ್ಯವಾಯಿತು (Covid Cases In India) ಎಂದು ನಿರೀಕ್ಷಿಸುತ್ತಾರೆ.

Written by - Nitin Tabib | Last Updated : Feb 11, 2022, 06:04 PM IST
  • ಕೊರೋನಾ ವೈರಸ್ ಮುಂದಿನ ರೂಪಾಂತರಿ ಯಾವಾಗ ಬರಲಿದೆ?
  • WHOನಲ್ಲಿ ತಜ್ಞೆ ಮಾರಿಯಾ ಹೇಳಿದ್ದೇನು?
  • ತುಂಬಾ ವೇಗವಾಗಿ ಮತ್ತು ಅಪಾಯಕಾರಿಯಾಗಿರಲಿದೆಯಾ?
Corona ಹೊಸ ರೂಪಾಂತರಿ ಯಾವಾಗ ವಕ್ಕರಿಸಲಿದೆ, WHO ಹೇಳಿದ್ದೇನು? title=
Corona Alpha Variant (File Photo)

Corona Alpha Variant - ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಇಡೀ ವಿಶ್ವವನ್ನೇ ಬದಲಾಯಿಸಿದೆ. ಪ್ರತಿ ಬಾರಿ ಅದರ ಅಲೆ ಕಡಿಮೆಯಾಗುತ್ತಲೇ, ಇನ್ನೇನು ಈ ಸಾಂಕ್ರಾಮಿಕ ಅಂತ್ಯವಾಯಿತು (Covid Cases In India) ಎಂದು ನಿರೀಕ್ಷಿಸುತ್ತಾರೆ. ಆದರೆ, ಅದುವರೆಗೆ ಹೊಸ ರೂಪಾಂತರಿಯ ಆಗಮನವಾಗಿರುತ್ತದೆ. Omicron ಕೊರೊನಾ ವೈರಸ್ ನ ಇತ್ತೀಚಿನ ರೂಪಾಂತರಿಯಾಗಿದೆ ಮತ್ತು ಇದು ಕೊನೆಯ ರೂಪಾಂತರಿ ಅಲ್ಲ ಎಂಬುದು WHO ವಾದ. ಆದರೆ ಇದೀಗ ಮತ್ತೊಮ್ಮೆ WHO ಕೊರೊನಾ ವೈರಸ್ ನ ಹೊಸ ರೂಪಾಂತರಿ ಯಾವಾಗ ವಕ್ಕರಿಸಲಿದೆ ಎಂಬುದರ ಕುರಿತು ಹೇಳಿಕೆ ನೀಡಿದೆ. ತಜ್ಞರು (WHO Expert) ಹೇಳುವ ಪ್ರಕಾರ ಹೊಸ ರೂಪಾಂತರಿ ಯಾವಾಗ ಬೇಕಾದರೂ ಬರಬಹುದು. ಆದರೆ, ಮುಂದಿನ ರೂಪಾಂತರಿ ಬರಲು ಸಾಕಷ್ಟು ಸಮಯಾವಕಾಶ ಬೇಕಾಗಲಿದೆ. ಈ ಕುರಿತು ಮಾತನಾಡಿರುವ ವೈದ್ಯೆ ಮಾರಿಯಾ ವಾನ್ ಕರ್ಕೊಫ್, ಓಮಿಕ್ರಾನ್ ಕೊನೆಯ ಚಿಂತೆಗೀಡು ಮಾಡುವ ರೂಪಾಂತರಿಯಲ್ಲ ಮತ್ತು UN ಇದರ ನಾಲ್ಕು ವಿಭಿನ್ನ ತಳಿಗಳ ಕುರಿತು ಸಂಶೋಧನೆ ನಡೆಸಿದೆ ಎಂದಿದ್ದಾರೆ. 

ಮ್ಯೂಟೆಶನ್ ಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ
ಮುಂದಿನ ಕೊವಿಡ್ ರೂಪಾಂತರಿಯ ಕುರಿತು ಮಾತನಾಡಿರುವ ಮಾರಿಯಾ, ಈ ರೂಪಾಂತರಿ ವೈರಸ್ ಬಗ್ಗೆ ನಮಗೆ ಸಾಕಷ್ಟು ಸಂಗತಿಗಳು ತಿಳಿದಿವೆ ಆದರೆ, ಎಲ್ಲವೂ ತಿಳಿದಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ, ಈ ರೂಪಾಂತರಿ ವೈಲ್ಡ್ ಕಾರ್ಡ್ ನಂತಿದೆ. ಬದಲಾಗುತ್ತಿದ್ದು, ಮ್ಯೂಟೆಟ್ ಆಗುತ್ತಿದೆ ಮತ್ತು ನಾವು ಅದನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದಿದ್ದಾರೆ. 

ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್

ಹರಡುವ ಸ್ಪೀಡ್ ಜಾಸ್ತಿ ಇರಲಿದೆ
ಅಂಗ್ಲ ಮಾಧ್ಯಮವೊಂದು ಪ್ರಕಟಿಸಿರುವ ವರದಿಯ ಪ್ರಕಾರ ಓಮಿಕ್ರಾನ್ ಲೇಟೆಸ್ಟ್ ವೇರಿಯಂಟ್ ಆಫ್ ಕನ್ಸರ್ನ್ ಆಗಿದ್ದು, ಇದು ಅಂತಿಮ ರೂಪಾಂತರಿ ಅಲ್ಲ ಎಂದು ಮಾರಿಯಾ ಹೇಳಿದ್ದಾರೆ. ಮುಂದಿನ ರೂಪಾಂತರವು ಬರಲು ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳಲಿದೆ. ಆದರೆ, ಬರುವ ರೂಪಾಂತರಿಗಳ ಸಾಂಕ್ರಾಮಿಕವಾಗಿ ಅತಿ ವೇಗವಾಗಿರಲಿವೆ. ಅದಕ್ಕಾಗಿಯೇ ನಾವು ವ್ಯಾಕ್ಸಿನೇಷನ್ ಅನ್ನು ವೇಗಗೊಳಿಸಲು ಮಾತ್ರವಲ್ಲದೆ, ಹರಡುವಿಕೆಯನ್ನು ಸೀಮಿತಗೊಳಿಸಲು ಕಾಳಜಿ ವಹಿಸುವುದರ ಮೇಲೆ ಹೆಚ್ಚು ಗಮನಹರಿಸಿದ್ದೇವೆ ಎಂದು ಮಾರಿಯಾ ಹೇಳಿದ್ದಾರೆ. 

ಇದನ್ನೂ ಓದಿ-Hijab Congroversy: 'ಅಲ್ಲಾಹ್ ಹು ಅಕ್ಬರ್' ಘೋಷಣೆ ಕೂಗಲು ಕಾರಣ ಹೇಳಿದ Muskaan Khan

ಹೆಚ್ಚು ಅಪಾಯಕಾರಿಯಾಗಿರಲಿದೆಯೇ?
ಮುಂದಿನ ರೂಪಾಂತರವು ಓಮಿಕ್ರಾನ್‌ಗಿಂತ ವೇಗವಾಗಿರುತ್ತದೆ ಎಂದು ಡಾ ಮಾರಿಯಾ ಕಳೆದ ತಿಂಗಳು ಹೇಳಿದ್ದರು. ಆದರೆ ಇದೇ ವೇಳೆ ಅದು ಅಪಾಯಕಾರಿಯಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡು ಹಿಡಿಯಬೇಕಾಗಿದೆ ಎಂದಿದ್ದರು.  Omicron ರೂಪಾಂತರವು ಇದುವರೆಗೆ ಬಹುತೇಕ ಹೆಚ್ಚಿನ ದೇಶಗಳಲ್ಲಿ ಕಂಡುಬಂದಿದೆ. ಹಲವು ದೇಶಗಳಲ್ಲಿ ಇದರ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಬಾಲಿವುಡ್ ನಿರ್ದೇಶಕ ರವಿ ಟಂಡನ್ ಇನ್ನಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News