ಭಾರತದ ವಿರುದ್ಧ ಸೈಬರ್ ಸಮರಕ್ಕೆ ಸದ್ದಿಲ್ಲದೆ ಚೀನಾ ತಯಾರಿ

ಭಾರತದೊಂದಿಗೆ ಗಡಿ ತಗಾದೆ ತೆಗೆದಿರುವ ಚೀನಾ (China) ಈಗ ಟಿಬೆಟ್ ನಲ್ಲಿ(Tibet) ಇನ್ನೊಂದು ರಣ ತಂತ್ರ ರೂಪಿಸುತ್ತಿದೆ.ಸಮುದ್ರ ಮಟ್ಟದಿಂದ 3656 ಮೀಟರ್ ಎತ್ತರದಲ್ಲಿರುವ ಟಿಬೆಟ್ ನಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಕೇಂದ್ರವನ್ನು ನಿರ್ಮಿಸುತ್ತಿದೆ. ಹೈ ಅಲ್ಟಿಟ್ಯುಡ್ ಇಲಾಖೆಯಲ್ಲಿ ನಿರ್ಮಿಸುತ್ತಿರುವ ಪ್ರಪಂಚದ ಅತಿ ದೊಡ್ಡ  ಕ್ಲೌಡ್ ಕಂಪ್ಯೂಟಿಂಗ್ ಸೆಂಟರ್ ಇದಾಗಲಿದೆ.

Last Updated : Oct 31, 2020, 10:24 AM IST
ಭಾರತದ ವಿರುದ್ಧ ಸೈಬರ್ ಸಮರಕ್ಕೆ ಸದ್ದಿಲ್ಲದೆ ಚೀನಾ ತಯಾರಿ title=
ಸಾಂದರ್ಭಿಕ ಚಿತ್ರ

ನವದೆಹಲಿ : ಭಾರತದೊಂದಿಗೆ ಗಡಿ ತಗಾದೆ ತೆಗೆದಿರುವ ಚೀನಾ (China) ಈಗ ಟಿಬೆಟ್ ನಲ್ಲಿ(Tibet) ಇನ್ನೊಂದು ರಣ ತಂತ್ರ ರೂಪಿಸುತ್ತಿದೆ.ಸಮುದ್ರ ಮಟ್ಟದಿಂದ 3656 ಮೀಟರ್ ಎತ್ತರದಲ್ಲಿರುವ ಟಿಬೆಟ್ ನಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಕೇಂದ್ರವನ್ನು ನಿರ್ಮಿಸುತ್ತಿದೆ. ಹೈ ಅಲ್ಟಿಟ್ಯುಡ್ ಇಲಾಖೆಯಲ್ಲಿ ನಿರ್ಮಿಸುತ್ತಿರುವ ಪ್ರಪಂಚದ ಅತಿ ದೊಡ್ಡ  ಕ್ಲೌಡ್ ಕಂಪ್ಯೂಟಿಂಗ್ ಸೆಂಟರ್ ಇದಾಗಲಿದೆ.

ಚೀನಾ ಈಗಾಗಲೇ ಗಡಿಯಲ್ಲಿ ಉದ್ದಟತನ ಪ್ರದರ್ಶಿಸಿ ಯುದ್ದಕ್ಕೆ ಕಾಲು ಕೆರೆದು ನಿಂತಿರುವ ಈ ಸಂದರ್ಭದಲ್ಲಿ (Indo China stand off) ಚೀನಾ ನಿರ್ಮಿಸುತ್ತಿರುವ ಕ್ಲೌಡ್  ಕಂಪ್ಯೂಟಿಂಗ್ ಸೆಂಟರ್ ಭಾರತೀಯ ಸೇನೆಗೆ (Indian Army) ಸವಾಲಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳಿವೆ.

ಚೀನಾದ ಸಂಸ್ಥೆಯ 470 ಕೋಟಿ ರೂ.ಗಳ ಒಪ್ಪಂದ ರದ್ದುಗೊಳಿಸಿದ ಭಾರತೀಯ ರೈಲ್ವೆ

ಸೈಬರ್ ಸಮರಕ್ಕಾಗಿ ಚೀನಾ ತಯಾರಿ..!

ಚೀನಾವು 180 ಕೋಟಿ ಡಾಲರ್ ವೆಚ್ಚದಲ್ಲಿ ಟಿಬೆಟ್ ನ ಲಾಸಾದಲ್ಲಿ ಈ  ಕೇಂದ್ರವನ್ನು ನಿರ್ಮಿಸುತ್ತಿದೆ.  ಇದು ಸಂಪೂರ್ಣ ಟಿಬೆಟ್ ನ್ನು ಅಂತಾರಾಷ್ಟ್ರೀಯ ಐಟಿ ಹಬ್ ರೂಪದಲ್ಲಿ ಬದಲಿಸಲಿದೆ ಎಂದು ಹೇಳುತ್ತಿದೆ ಚೀನಾ.. ಲಾಸಾದ ಹೈಟೆಕ್ ವಲಯದಲ್ಲಿ   ಈ ಯೋಜನೆಯ ಎರಡನೇಯ ಚರಣ ರೂಪುಗೊಳ್ಳುತ್ತಿದೆ. 2021ರ ಹೊತ್ತಿಗೆ ಇದು ಪೂರ್ಣಗೊಳ್ಳಲಿದೆ.

ಇದನ್ನೂ ಓದಿ: 4G ಅಪ್‌ಗ್ರೇಡ್‌ಗಾಗಿ ಯಾವುದೇ ಚೀನೀ ಉತ್ಪನ್ನ ಬಳಸುವಂತಿಲ್ಲ - ಬಿಎಸ್‌ಎನ್‌ಎಲ್‌ಗೆ ಕೇಂದ್ರದ ಆದೇಶ

 ಇದೊಂದು ಅಭಿವೃದ್ಧಿ ಯೋಜನೆಯೆಂದು ಚೀನಾ ಹೇಳಿಕೊಳ್ಳುತ್ತಿದೆ. ಅದರೆ, ನಿಜ ಏನಂದ್ರೆ, ಈ ಕೇಂದ್ರದ ಮೂಲಕ ದಕ್ಷಿಣ ಏಷ್ಯಾದ ಪಾಕಿಸ್ತಾನ, ನೇಪಾಳ ಮತ್ತು ಬಂಗ್ಲಾದೇಶದ ಡಾಟಾ ಸ್ಟೋರೇಜ್ (Data storage) ಮಾಡುವುದು ಚೀನಾದ ಉದ್ದೇಶವಾಗಿದೆ. ಈ ಡಾಟಾವನ್ನು ಚೀನಾ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ಕೂಡಾ ತಳ್ಳಿಹಾಕುವಂತಿಲ್ಲ.

ಭಾರತಕ್ಕಿದು ದೊಡ್ಡ ಅಪಾಯ ಯಾಕೆ..?

ಚೀನಾ ಈಗಾಗಲೇ ಟಿಬೇಟ್ ನಿಂದ ಹಿಡಿದು ಪೂರ್ವ ಲಡಾಕ್ ತನಕ 5ಜಿ ಕೇಬಲ್ ಹಾಕುವಲ್ಲಿ ನಿರತವಾಗಿದೆ.  ಗಲ್ವಾನ್ ಸಂಘರ್ಷದ ಬಳಿಕ ಎಲ್ ಎಸಿ ಬಳಿ 5 ಜಿ ಕೇಬಲ್ ಕಾಮಗಾರಿ ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಗಿದೆ. ಸಂಪರ್ಕ ನೆಟ್ವರ್ಕ್ ಮತ್ತು ಮೂಲ ಸೌಕರ್ಯ ವ್ಯವಸ್ಥೆಯಲ್ಲಿ ಚೀನಾ ತೋರುತ್ತಿರುವ ತರಾತುರಿ ಭಾರತಕ್ಕೆ ಎದುರಾಗಲಿರುವ ಸವಾಲನ್ನು ಮತ್ತಷ್ಟು ಹೆಚ್ಚಿಸಲಿದೆ. ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ ಬಳಸಿ ಯುದ್ದಾಸ್ತ್ರಗಳನ್ನು ಬಳಸಲು ಈ ಸಂಪರ್ಕ ಜಾಲವನ್ನು ಬಳಸಿಕೊಳ್ಳುವ  ಎಲ್ಲಾ ಸಾಧ್ಯತೆಗಳಿವೆ.ಚೀನಾ ಬಳಿ ಅಟೊಮ್ಯಾಟಿಕ್ ವಾಹನ, ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮೂಲಕ ಬಳಸಬಹುದಾದ ಶಸ್ತ್ರಗಳಿವೆ. ಇವನ್ನೆಲ್ಲಾ ಬಳಸಲು ಅತ್ಯಂತ ವೇಗದ ಡಾಟಾ ಟ್ರಾನ್ಸ್ ಫರ್ ಮತ್ತು ಪ್ರೊಸೆಸ್ಸಿಂಗ್ ಅಗತ್ಯವಿದೆ.

ಚೀನಾ ಗಡಿಯಲ್ಲಿ ಇಂಡೋ-ಚೀನಾ ಪಡೆಗಳ ನಡುವೆ ಕಮಾಂಡರ್ ಮಟ್ಟದ ಸಭೆ 

ಪ್ರಗತಿಯ ಹೆಸರಿನಲ್ಲಿ ಟಿಬೆಟ್ ಅಸ್ತಿತ್ವವನ್ನೇ ಅಲುಗಾಡಿಸಲಿದೆ ಚೀನಾ..

ಕ್ಲೌಡ್ ಕಂಪ್ಯೂಟಿಂಗ್ ಸೆಂಟರ್ ಮೂಲಕ ಟಿಬೆಟ್ ನಲ್ಲಿ ಅತಿವೇಗದ ಡೌನ್ ಲೋಡಿಂಗ್, ಅಟೊಮ್ಯಾಟಿಕ್ ಡ್ರೈವಿಂಗ್, ಡಿಸ್ಟೆನ್ಸ್ ಲರ್ನಿಂಗ್ ಮತ್ತು ಡಾಟಾ ಬ್ಯಾಕಪ್ ಮೊದಲಾದ ಸೌಲಭ್ಯಗಳನ್ನು ದೊಡ್ಡ್ ಪ್ರಮಾಣದಲ್ಲಿ ಮಾಡಬಹುದು. ಇದರ ನಿರ್ವಹಣೆಯನ್ನು ಚೀನಾದ ನಿಂಗ್ಸುವಾನ್ ಟೆಕ್ನಾಲಜಿ ಗ್ರೂಪ್ ನೋಡಿಕೊಳ್ಳಲಿದೆ.ಇದರಿಂದಾಗಿ ದೊಡ್ಡ ನಗರಗಳಲ್ಲಿ ಅತ್ಯುತ್ತಮವಾದ ಡಾಟಾ ಸ್ಟೋರೇಜ್ ಸೇವೆ ಸಿಗಲಿದೆ. ಅದರೆ ಇದು ಚೀನಾದ ನಿಜವಾದ ಉದ್ದೇಶ ಅಲ್ಲ. ಚೀನಾ ನಿಜವಾದ  ಉದ್ದೇಶ ಟಿಬೆಟಿನ ಅಸ್ತಿತ್ವವನ್ನೇ ಬದಲಾಯಿಸುವುದು. ದಕ್ಷಿಣ ಏಷ್ಯಾ ರಾಷ್ಟ್ರಗಳ ಡಾಟಾ ಕಬಳಿಸುವುದು ಅದರ  ಇನ್ನೊಂದು ಉದ್ದೇಶ.  ಈ ಡಾಟಾ ಸೆಂಟರ್ ಮೂಲಕ ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ನಿಜವಾದ ಉದ್ದೇಶ. ಇದು ಭಾರತಕ್ಕೆ ಅಪಾಯದ ಗಂಟೆಯಾಗಲಿದೆ.

Trending News