ಬಾಂಗ್ಲಾದೇಶ ಮಾಜಿ ಪ್ರಧಾನಿ ಖಲಿದಾ ಜಿಯಾಗೆ 5 ವರ್ಷ ಜೈಲು ಶಿಕ್ಷೆ

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Last Updated : Feb 8, 2018, 06:35 PM IST
ಬಾಂಗ್ಲಾದೇಶ ಮಾಜಿ ಪ್ರಧಾನಿ ಖಲಿದಾ ಜಿಯಾಗೆ 5 ವರ್ಷ ಜೈಲು ಶಿಕ್ಷೆ  title=

ಡಾಕಾ(ಬಾಂಗ್ಲಾದೇಶ): ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಅಕ್ತಾರುಜ್ಜಾಮನ್‌ ಅವರಿದ್ದ ವಿಶೇಷ ನ್ಯಾಯಾಲಯ ಗುರುವಾರ ಎರಡು ಬಾರಿ ಪ್ರಧಾನಿಯಾಗಿದ್ದ ಮತ್ತು ವಿಪಕ್ಷ ನಾಯಕಿ ಖಾಲಿದಾ ಅವರಿಗೆ ಶಿಕ್ಷೆ ಘೋಷಿಸಿದ್ದು, ತೀರ್ಪು ಹೊರಬಿಳುತ್ತಿದ್ದಂತೆಯೇ ಡಾಕಾದಾದ್ಯಂತ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ತೀರ್ಪಿನಿಂದಾಗಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎನ್ನುವುದು ಸಾಬೀತಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಿಸುಲ್‌ ಹಕ್‌ ಹೇಳಿದ್ದಾರೆ.

ಪ್ರಮುಖ ಪ್ರತಿಪಕ್ಷ ಬಾಂಗ್ಲಾದೇಶ್‌ ನ್ಯಾಷನಲ್‌ ಪಾರ್ಟಿ ಮುಖ್ಯಸ್ಥೆಯಾಗಿರುವ ಜಿಯಾ ಅವರು ಜಿಯಾ ಆರ್ಫನೇಜ್ ಟ್ರಸ್ಟ್‌ಗೆ ಮೀಸಲಾಗಿದ್ದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದರು.

ಇದೇ ಪ್ರಕರಣದಲ್ಲಿ ಜಿಯಾ ಅವರ ಪುತ್ರ ತಾರೀಕ್ ರೆಹಮಾನ್ ಸೇರಿದಂತೆ ಈ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಮಾಜಿ ಶಾಸಕ ಕ್ವಾಜಿ ಸಾಲಿಮುಲ್‌ ಹಕ್‌, ಜಿಯಾರ ಕಾರ್ಯದರ್ಶಿಯಾಗಿದ್ದ ಕಮಲ್‌ ಉದ್ದಿನ್‌ ಸಿದ್ಧಿಕಿ, ಸೋದರಳಿಯ ಮೊಮಿನುರ್‌ ರೆಹಮಾನ್‌ ಮತ್ತು ಉದ್ಯಮಿ ಷರ್‌ಫುದ್ದಿನ್‌ ಅಹ್ಮದ್‌ರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

Trending News