ಜಕಾರ್ತ: ಇಂಡೋನೇಷ್ಯಾ ಸುಮಾತ್ರಾ ದ್ವೀಪದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಪ್ರಳಯ ಹಾಗೂ ಭೂಕುಸಿತದಿಂದಾಗಿ 22 ಜನರ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಅಲ್ಲದೆ ಹಲವರು ಮಣ್ಣಿನಡಿ ಸಿಲುಕಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸ್ಥಳೀಯ ಪೊಲೀಸ್ ಮುಖ್ಯಸ್ಥ ಇಸಾನಿ ಸಿನ್ಹು ಶುಕ್ರವಾರ ಮಧ್ಯಾಹ್ನ, ಉತ್ತರ ಮಧ್ಯಾಹ್ನ ಸುಮಾತ್ರಾ ಪ್ರಾಂತ್ಯದ ಮಂಡಲ್ ಜಿಲ್ಲೆಯ ಮೌರಾ ಸಲಾಡಿ ಗ್ರಾಮದಲ್ಲಿ ಉಂಟಾದ ಭೂಕುಸಿತವು ಒಂದು ಇಸ್ಲಾಮಿಕ್ ಬೋರ್ಡಿಂಗ್ ಸ್ಕೂಲ್ ಅನ್ನು ಧ್ವಂಸಗೊಳಿಸಿದ್ದು, ಈ ಘಟನೆಯಲ್ಲಿ 11 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಕಳೆದ ಮೂರು ದಿನಗಳಲ್ಲಿ ಉತ್ತರ ಸುಮಾತ್ರಾ ಪ್ರದೇಶದಲ್ಲಿ ಕನಿಷ್ಠ 17 ಮಂದಿ ಸಾವಿಗೀಡಾಗಿದ್ದು, ಪಶ್ಚಿಮ ಸುಮಾತ್ರಾದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರದೇಶದ ಎಂಟು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, 29 ಮನೆಗಳು ಸಿಬೋಲ್ಗಾ ಜಿಲ್ಲೆಯಲ್ಲಿ ಭೂಕುಸಿತದಿಂದ ನಾಶವಾಗಿವೆ. ಸುಮಾರು 100 ಕಟ್ಟಡಗಳಿಗೆ ನೀರು ನುಗ್ಗಿದೆ. ಅದರಲ್ಲಿ ನಾಲ್ಕು ಹಳ್ಳಿಗರು ಮೃತಪಟ್ಟಿದ್ದಾರೆ ಎಂದು ವಕ್ತಾರರು ಹೇಳಿದರು.