ತಾಲಿಬಾನ್ ಮೇಲೆ ಅಮೇರಿಕಾ ಸೈನ್ಯದ ದಾಳಿ

ಅಮೇರಿಕಾದ ಸೈನ್ಯವು ಇಲ್ಲಿನ ತಾಲಿಬಾನ್ನೆಲೆಯ ಮೇಲೆ ದಾಳಿಯನ್ನು ಮಾಡಿದ್ದು ಸುಮಾರು 80 ಮಿಲಿಯನ್ ಡಾಲರ್ ಮೌಲ್ಯದ ಮಾದಕ ವಸ್ತಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

Last Updated : Dec 13, 2017, 08:54 PM IST
ತಾಲಿಬಾನ್ ಮೇಲೆ ಅಮೇರಿಕಾ ಸೈನ್ಯದ ದಾಳಿ title=

ಕಾಬೂಲ್: ಅಮೇರಿಕಾದ ಸೈನ್ಯವು ಇಲ್ಲಿನ ತಾಲಿಬಾನ್ನೆಲೆಯ ಮೇಲೆ ದಾಳಿಯನ್ನು ಮಾಡಿದ್ದು ಸುಮಾರು 80 ಮಿಲಿಯನ್ ಡಾಲರ್ ಮೌಲ್ಯದ ಮಾದಕ ವಸ್ತಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಅಮೆರಿಕಾವು ತಾಲಿಬಾನ್ ಉಗ್ರರ ಆದಾಯದ  ಮೂಲವನ್ನು ಗುರಿಯಾಗಿಟ್ಟುಕೊಂಡು  ಈ ದಾಳಿಯನ್ನು ಮಾಡಿದೆ ಎಂದು ತಿಳಿದು ಬಂದಿದೆ. ಇಲ್ಲಿನ ದಕ್ಷಿಣದ ಭಾಗದ ಹೆಲ್ಮಾಂಡ ಪ್ರಾಂತ್ಯದಲ್ಲಿ ಸುಮಾರು 25 ಪ್ರಯೋಗಾಲಯಗಳನ್ನು  ನಾಶಪಡಿಸಲಾಗಿದೆ. ಅಮೇರಿಕಾದ ವಾಯುದಳದ ಬ್ರಿಗೇಡಿಯರ್  ಲ್ಯಾನ್ಚೆ ಬಂಚ್ ರವರು  ಈ ದಾಳಿಯ ಕುರಿತು ಮಾತನಾಡಿ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಆಫ್ಘಾನ್  ಕುರಿತ ಹೊಸ ಯೋಜನೆಯ ಭಾಗವಾಗಿ ಈ ದಾಳಿಯನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟ ಪಡಿಸಿದರು. ಅಲ್ಲದೆ ಈ ಹೊಸ ವಾಯುದಳವು ಆಫ್ಘಾನಿನ ರಕ್ಷಣಾ ವಿಭಾಗವನ್ನು ಗಟ್ಟಿಗೊಳಿಸುತ್ತದೆ ಎಂದರು.

Trending News