ನವದೆಹಲಿ: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಇತ್ತೀಚಿಗೆ ಜೆರುಸೇಲಂನ್ನು ಇಸ್ರೇಲ್ ರಾಜಧಾನಿಯಾಗಿ ಮಾಡುವದನ್ನು ಘೋಷಣೆ ಮಾಡಿದ್ದರು ಆದರೆ ಈಗ ಅದನ್ನು ಆ ಘೋಷಣೆಯನ್ನು ತಡೆಯಲು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ತೀರ್ಮಾನಕ್ಕೆ ಅಮೆರಿಕಾವು ತನ್ನ ವಿಟೋ ಮತದಾನದ ಮೂಲಕ ವಿರೋಧ ವ್ಯಕ್ತಪಡಿಸಿದೆ.
ಸಿಎನ್ಎನ್ ವರದಿಯ ಪ್ರಕಾರ 14 ಭದ್ರತಾ ಮಂಡಳಿಯ ಸದಸ್ಯರು ಟ್ರಂಪ್ ರ ಜೆರುಸಲೆ೦ನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾಡುವ ನಿರ್ಧಾರವನ್ನು ವಿರೋಧಿಸಿ ಈಜಿಪ್ಟ್ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಿತ್ತು ಇದಕ್ಕೆ ಉಳಿದ ರಾಷ್ಟ್ರಗಳು ಕೂಡ ಸಹಮತವನ್ನು ವ್ಯಕ್ತಪಡಿಸಿದ್ದರು.ಆದರೆ ಅಮೇರಿಕಾ ಮಾತ್ರ ತನ್ನ ನಿರ್ಧಾರಕ್ಕೆ ಬದ್ದವಾಗಿ ಈ ವಿಶ್ವಸಂಸ್ಥೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ.
ಅಮೆರಿಕಾದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಇದು ಅಂತರಾಷ್ಟ್ರೀಯ ಸಮುದಾಯದವನ್ನು ಅಸ್ಥಿರಗೊಳಿಸುವಂತಹ ನಿರ್ಧಾರವೆಂದು ಖಂಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ಅಮೆರಿಕಾದ ರಾಯಭಾರಿ ನಿಕ್ಕಿ ಹೆಲಯ್ " ಈ ಅವಮಾನವನ್ನು ಅಮೆರಿಕಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ಟ್ರಂಪ್ ರ ಜೆರುಸೇಲಂ ಕುರಿತಾದ ನಿರ್ಧಾರಕ್ಕೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗಿದ್ದನ್ನು ನಾವು ಸ್ಮರಿಸಬಹುದು