ವಿಶ್ವದ ಅತಿ ಹೆಚ್ಚು ವೇತನ ಪಡೆದ CEO ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಮೂಲಕ Sundar Pichai

ಅಮೆರಿಕಾದ ಟೆಕ್ನಾಲಾಜಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಆಲ್ಫಾಬೆಟ್ ಇನ್ ಕಾರ್ಪೋರಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ 2019ನೇ ಆರ್ಥಿಕ ವರ್ಷದಲ್ಲಿ ಒಟ್ಟು 28.1 ಕೋಟಿ ಡಾಲರ್ (2,144.53 ಕೋಟಿ ರೂ.) ವೇತನ ಪಡೆದಿದ್ದಾರೆ.

Last Updated : Apr 26, 2020, 01:29 PM IST
ವಿಶ್ವದ ಅತಿ ಹೆಚ್ಚು ವೇತನ ಪಡೆದ CEO ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಮೂಲಕ Sundar Pichai title=

ನವದೆಹಲಿ: ಅಮೆರಿಕಾದ ಟೆಕ್ನಾಲಾಜಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಆಲ್ಫಾಬೆಟ್ ಇನ್ ಕಾರ್ಪೋರಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ 2019ನೇ ಆರ್ಥಿಕ ವರ್ಷದಲ್ಲಿ ಒಟ್ಟು 28.1 ಕೋಟಿ ಡಾಲರ್ (2,144.53 ಕೋಟಿ ರೂ.) ವೇತನ ಪಡೆದಿದ್ದಾರೆ. ಇದವರಲ್ಲಿ ಅವರ ವೇತನ, ಭತ್ಯೆ, ಕಂಪನಿಯ ಷೇರು ಹಾಗೂ ಇತರೆ ಲಾಭಗಳು ಶಾಮೀಲಾಗಿವೆ. ಇದರಿಂದ ಭಾರತೀಯ ಮೂಲದ ಸುಂದರ್ ಪಿಚೈ ವಿಶ್ವದ ಅತಿ ಹೆಚ್ಚು ವೇತನ ಪಡೆದ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. 1971 ರಲ್ಲಿ ಸುಂದರ್ ಪಿಚೈ ಭಾರತದ ಚೆನ್ನೈನಲ್ಲಿ ಜನಿಸಿದ್ದಾರೆ.

ಈ ಕುರಿತು ಷೇರು ಮಾರುಕಟ್ಟೆಗೆ ನೀಡಿರುವ ವರದಿಯಲ್ಲಿ ಹೇಳಿಕೊಂಡಿರುವ ಕಂಪನಿ, ಸುಂದರ್ ಪಿಚೈ ವೇತನದ ಹೆಚ್ಚುವರಿ ಭಾಗ ಸ್ಟಾಕ್ ಅವಾರ್ಡ್ ನಿಂದ ಬಂದಿದೆ ಎಂದು ಹೇಳಿದೆ. ಆಲ್ಫಾಬೆಟ್ ಕಂಪನಿ ಮಾರುಕಟ್ಟೆಯಲ್ಲಿ ತೋರಿಸಿರುವ ಉತ್ತಮ ಪ್ರದಶನದ ಹಿನ್ನೆಲೆ ಅವರಿಗೆ ಈ ಮೊತ್ತ ಪಾವತಿಸಲಾಗಿದೆ ಎಂದು ಹೇಳಿದೆ. ಇದರರ್ಥ ಈ ಮೊತ್ತ ದೊಡ್ಡ ಅಥವಾ ಸಣ್ಣ ಮೊತ್ತ ಕೂಡ ಆಗಿರುವ ಸಾಧ್ಯತೆ ಇದೆ.

ಇದೇ ವೇಳೆ ಈ ಬಾರಿ ಸುಂದರ್ ಪಿಚೈ ಅವರಿಗೆ ವೇತನದ ರೂಪದಲ್ಲಿ 20 ಲಕ್ಷ ಡಾಲರ್ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಸುಂದರ್ ಪಿಚೈ ಅವರಿಗೆ ನೀಡಲಾಗುತ್ತಿರುವ ಈ ಸಂಬಳ ಆಲ್ಫಾಬೆಟ್ ಕಂಪನಿಯ ನೌಕರರಿಗೆ ನೀಡಲಾಗುವ ವೇತನದ 1085 ರಷ್ಟಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಈ ಕುರಿತು ಶುಕ್ರವಾರ ಬಿಡುಗಡಗೊಳಿಸಲಾಗಿರುವ ವರದಿಯ ಪ್ರಕಾರ ಸುಂದರ್ ಪಿಚೈ ಅವರ ಈ ವೇತನ ಹೆಚ್ಚಳ ಮುಖ್ಯವಾಗಿ ಅವರು ಆಲ್ಫಾಬೆಟ್ ಕಂಪನಿಯ ಸಿಇಓ ಆಗಿ ಪದೋನ್ನತಿ ಪಡೆದ ಬಳಿಕ ಬಂದಿದ್ದು, ಈ ಅವಧಿಯಲ್ಲಿ ಕಂಪನಿಯ ಸ್ಟಾಕ್ ನಲ್ಲಿಯೂ ಕೂಡ ಏರಿಕೆಯಾಗಿದೆ ಎಂದು ಹೇಳಿದೆ.

ಅವರ ಮೂಲ ವೇತನದ ಹೊರತಾಗಿ ಸುಂದರ್ ಪಿಚೈ ಅವರಿಗೆ ಒಟ್ಟು ಎರಡು ಸ್ಟಾಕ್ ಪ್ಯಾಕೇಜ್ ಗಳನು ನೀಡಲಾಗಿತ್ತು. ಅವು ಕಾಲಾಂತರದಲ್ಲಿ ಉತ್ತಮ ರಿಟರ್ನ್ ನೀಡಿವೆ.

Trending News