Airstrike on Taliban Terrorists: ತಾಲಿಬಾನ್ ಉಗ್ರರ ಮೇಲೆ Airstrike, 254 ಉಗ್ರರ ಹತ್ಯೆ

Airstrike on Taliban Terrorists: ತಾಲಿಬಾನ್ ಉಗ್ರರ ಮೇಲೆ ಇದುವರೆಗೆ ನಡೆಸಲಾಗಿರುವ ಅತಿ ದೊಡ್ಡ ಕಾರ್ಯಾಚಾರಣೆ ಇದಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳಿಂದ ತುಂಬಿದ ವಾಹನವೊಂದನ್ನು ಸ್ಫೋಟಿಸಲಾಗಿದೆ. ಈ ಅವಧಿಯಲ್ಲಿ ಸೇನಾ ಜವಾನರು 13 IED ಗಳನ್ನು ಕೂಡ ನಿಷ್ಕ್ರೀಯಗೊಳಿಸಿದ್ದಾರೆ. 

Written by - Nitin Tabib | Last Updated : Aug 1, 2021, 01:58 PM IST
  • ತಾಲಿಬಾನಿ ಉಗ್ರರ ಮೇಲೆ ಅಫ್ಘಾನಿಸ್ತಾನ್ ವಾಯುಪಡೆ ದಾಳಿ.
  • ದಾಳಿಯಲ್ಲಿ 254ಕ್ಕೂ ಹೆಚ್ಚು ಉಗ್ರರ ಹತ್ಯೆ, 97 ಕ್ಕೂ ಅಧಿಕ ಉಗ್ರರಿಗೆ ಗಾಯ.
  • ತಾಲಿಬಾನ್ ಉಗ್ರರ ಮೇಲೆ ನಡೆಸಲಾಗದ ಇದುವರೆಗಿನ ಅತಿ ದೊಡ್ಡ ದಾಳಿ ಇದಾಗಿದೆ.
Airstrike on Taliban Terrorists: ತಾಲಿಬಾನ್ ಉಗ್ರರ ಮೇಲೆ Airstrike, 254 ಉಗ್ರರ ಹತ್ಯೆ title=
Airstrike on Taliban Terrorists (File Photo)

Airstrike on Taliban Terrorists: ಅಫ್ಘಾನಿಸ್ತಾನ ವಾಯುಪಡೆ (Afghanistan Airforce) ತಾಲಿಬಾನ್ ಉಗ್ರರ  ವಿರುದ್ಧ ಭಾರೀ ಕ್ರಮ ಕೈಗೊಂಡಿದೆ. ಹೌದು, ಈ ಹಿನ್ನೆಲೆ ನಡೆಸಲಾಗಿರುವ ಪ್ರತ್ಯೇಕ ವಾಯುದಾಳಿಯಲ್ಲಿ, ಅಫಘಾನ್ ವಾಯುಪಡೆಯು 254 ತಾಲಿಬಾನ್ ಉಗ್ರರನ್ನು ಹತ್ಯೆಗೈದಿದೆ. ಈ 97 ಕ್ಕೂ ಹೆಚ್ಚು ಭಯೋತ್ಪಾದಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕಾಬೂಲ್, ಕಂದಹಾರ್, ಕುಂದುಜ್, ಹೆರಾತ್, ಹೆಲ್ಮಂಡ್ ಮತ್ತು ಘಜ್ನಿ ಸೇರಿದಂತೆ 13 ಭಯೋತ್ಪಾದಕರ ಮೇಲೆ ಅಫ್ಘಾನ್ ಸೇನೆಯು ಕಳೆದ 24 ಗಂಟೆಗಳಲ್ಲಿ ಈ ವಾಯುದಾಳಿ ನಡೆಸಿದೆ.

ತಾಲಿಬಾನ್ ಉಗ್ರರ ಮೇಲೆ ನಡೆಸಲಾಗಿರುವ ಇದುವರೆಗಿನ ದೊಡ್ಡ ದಾಳಿ ಇದು
ತಾಲಿಬಾನ್ ಉಗ್ರರ (Taliban Militants) ಮೇಲೆ ಇದುವರೆಗೆ ನಡೆಸಲಾಗಿರುವ ಅತಿ ದೊಡ್ಡ ಕಾರ್ಯಾಚಾರಣೆ ಇದಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳಿಂದ ತುಂಬಿದ ವಾಹನವೊಂದನ್ನು ಸ್ಫೋಟಿಸಲಾಗಿದೆ. ಈ ಅವಧಿಯಲ್ಲಿ ಸೇನಾ ಜವಾನರು 13 IED ಗಳನ್ನು ಕೂಡ ನಿಷ್ಕ್ರೀಯಗೊಳಿಸಿದ್ದಾರೆ. ನಿನ್ನೆಯೂ ಕೂಡ ಆಫ್ಘಾನಿಸ್ಥಾನದ ವಾಯುಪಡೆ ತಾಲಿಬಾನ್ ಉಗ್ರರ (Terrorists) ಬಂಕರ್ ಗಳನ್ನು ಗುರಿಯಾಗಿಸಿತ್ತು. ಈ ದಾಳಿಯಲ್ಲಿ (Airstrike) 10 ಕ್ಕೂ ಹೆಚ್ಚು ಉಗ್ರರನ್ನು ಮಟ್ಟಹಾಕಲಾಗಿತ್ತು.

ತಾಲಿಬಾನ್ ಉಗ್ರರು ತೀವ್ರವಾಗಿ ಕಾಲು ಚಾಚುತ್ತಿದ್ದಾರೆ
ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ (Afghanistan) ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಕೆಲವು ವಾರಗಳಲ್ಲಿ ಯುಎಸ್ ಆಡಳಿತ ತನ್ನ ಸೈನ್ಯವನ್ನು ಹಿಂಪಡೆದ ನಂತರ ಅಫ್ಘಾನಿಸ್ತಾನದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳು ನಡೆದಿವೆ. ಇದಲ್ಲದೆ ತಾಲಿಬಾನ್ ಗಣನೀಯ ಪ್ರಮಾಣದಲ್ಲಿ ಪ್ರದೇಶವನ್ನು ವಶಪಡಿಸಿಕೊಂಡಿದೆ, ಹಲವಾರು ನೆರೆಹೊರೆಯ ರಾಷ್ಟ್ರಗಳ ಗಡಿಯಲ್ಲಿ ಪ್ರಾಬಲ್ಯ ಹೊಂದಿದೆ ಮತ್ತು ಹಲವಾರು ಪ್ರಾಂತೀಯ ರಾಜಧಾನಿಗಳು ಅಪಾಯದಲ್ಲಿವೆ. ಯುಎಸ್-ನ್ಯಾಟೋ ಪಡೆಗಳ ಹಿಂಪಡೆಯುವಿಕೆಯು ಶೇ.95 ರಷ್ಟು ಪೂರ್ಣಗೊಂಡಿದೆ ಮತ್ತು ಆಗಸ್ಟ್ 31 ರ ವೇಳೆಗೆ ಸಂಪೂರ್ಣ ಸೇನೆ ಹಿಂಪಡೆಯಲಾಗುತ್ತಿದೆ. 

ಇದನ್ನೂ ಓದಿ- Corona Delta Variant: ಸಿಡುಬಿನಂತೆ ಹರಡುತ್ತದೆ ಕೊರೊನಾ ವೈರಸ್ ನ ಈ ರೂಪಾಂತರಿ, ವಿಜ್ಞಾನಿಗಳ ಎಚ್ಚರಿಕೆ!

ವಿಶ್ವಸಂಸ್ಥೆಯ  ವರದಿಯೊಂದರ ಪ್ರಕಾರ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವರ್ಷದ ಮೊದಲ ಆರು ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಹಿಂಸಾಚಾರದಲ್ಲಿ ಹತ್ಯೆಗೀಡಾದ ಮತ್ತು ಗಾಯಗೊಂಡ ನಾಗರಿಕರ ಸಂಖ್ಯೆ ಶೇ.47ರಷ್ಟು ಹೆಚ್ಚಾಗಿದೆ. ಹಿಂಸಾಚಾರಕ್ಕೆ ಕಡಿವಾಣ ಹಾಕದಿದ್ದರೆ ಈ ವರ್ಷ ಹಲವು ಅಫ್ಘಾನ್ ನಾಗರಿಕರು ಪ್ರಾಣ ಕಳೆದುಕೊಳ್ಳಲಿದ್ದಾರೆ ಹಾಗೂ ಗಾಯಗೊಳ್ಳಲಿದ್ದಾರೆ ದು ವರದಿಯು ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. 

ಇದನ್ನೂ ಓದಿ- ಕೇವಲ 24 ಗಂಟೆಯಲ್ಲಿಯೇ 262 ತಾಲಿಬಾನ್ ಭಯೋತ್ಪಾದಕರ ಹತ್ಯೆ..!

ತಾಲಿಬಾನ್ ಗೆ ಪಾಕ್ ಬೆಂಬಲ
ಈ ಕುರಿತು ಹೇಳಿಕೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನಖಾನ್, ತಾಲಿಬಾನಿಗಳು ಯಾವುದೇ ಸೈನ್ಯ ಸಂಘಟನೆಯಾಗಿರದೆ, ಅವರು ಸಾಮಾನ್ಯ ನಾಗರಿಕರಾಗಿದ್ದಾರೆ ಎಂದಿದ್ದಾರೆ. ಇತ್ತೀಚಿಗೆ ಗಡಿಯಲ್ಲಿ ತಾಲಿಬಾನಿಗಳ ನೆರವಿಗೆ 6000 ಪಾಕ್ ಸೈನಿಕರನ್ನು ಕಳುಹಿಸಲಾಗಿತ್ತೆ? ಎಂದು ಇಮ್ರಾನ್ ಅವರನ್ನು ಪ್ರಶ್ನಿಸಲಾಗಿತ್ತು. ಈ ಮಾಹಿತಿ ತಪ್ಪು ಎಂದು ಹೇಳಿದ್ದ ಇಮ್ರಾನಖಾನ್, ಅವರು ಈ ಕುರಿತು ಸಾಕ್ಷಾಧಾರಗಳನ್ನು ಏಕೆ ಒದಗಿಸುತ್ತಿಲ್ಲ ಎಂದು ಮರುಪ್ರಶ್ನಿಸಿದ್ದರು.

ಇದನ್ನೂ ಓದಿ-Coronavirus Origin Investigation: ಕೊರೋನಾದ ಉತ್ಪತ್ತಿಯ ಕುರಿತಾದ ತನಿಖೆಯಲ್ಲಿ WHOಗೆ ಸಹಕರಿಸುವಂತೆ ಚೀನಾಗೆ ಸೂಚಿಸಿದ UN

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News