ಅಪರಿಚಿತ ಮಗುವಿಗೆ ವಿಮಾನದಲ್ಲೇ ಎದೆಹಾಲುಣಿಸಿದ ಗಗನಸಖಿ!

ಆರ್ಗೆನೋ ಎದೆಹಾಲುಣಿಸಿದ ಕೂಡಲೇ ಅಳು ನಿಲ್ಲಿಸಿ ನಿದ್ದೆಗೆ ಜಾರಿದೆ. ನಂತರ ಮಗುವಿನ ತಾಯಿ ಆರ್ಗೆನೋಗೆ ಧನ್ಯವಾದ ಅರ್ಪಿಸಿದ್ದಾರೆ.

Last Updated : Nov 10, 2018, 01:26 PM IST
ಅಪರಿಚಿತ ಮಗುವಿಗೆ ವಿಮಾನದಲ್ಲೇ ಎದೆಹಾಲುಣಿಸಿದ ಗಗನಸಖಿ! title=
Facebook

ಫಿಲಿಫೈನ್ಸ್: ವಿಮಾನದಲ್ಲಿ ಹಸಿವಿನಿಂದ ಪ್ರಯಾಣಿಕರ ಮಗುವೊಂದಕ್ಕೆ ಫಿಲಿಫಿನೋ ವಿಮಾನದ ಗಗನಸಖಿ ಎದೆಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ವಿಮಾನ ತೀಕ್ ಆಫ್ ಆದ ಬಳಿಕ ಮಗುವಿನ ಅಳುವನ್ನು ಕೇಳಿದ ಗಗನಸಖಿ ಪತ್ರಿಶಾ ಆರ್ಗೆನೋ(24), ಕೂಡಲೇ ಮಗುವಿನ ತಾಯಿ ಬಳಿ ಹೋಗಿ ಸಹಾಯ ಏನಾದರು ಬೇಕಿತ್ತೆ ಎಂದು ಕೇಳಿದ್ದಾರೆ. ಅಗಾ ತಾಯಿ ಮಗುವಿಗೆ ಹಾಲು ಬೇಕಿದ್ದಾಗಿ ಹೇಳಿದ್ದಾರೆ. ಹಾದರೆ ವಿಮಾನದಲ್ಲಿ ಮಗುವಿಗೆ ಅಗತ್ಯವಾದ ಹಾಲು ಇಲ್ಲದ ಕಾರಣ ಏನು ಮಾಡುವುದೆಂದು ತಿಳಿಯದೆ ಕೆಲಕಾಲ ಯೋಚಿಸಿದ್ದಾರೆ. ನಂತರ, ತಾವೇ ಆ ಮಗುವಿಗೆ ಎದೆಹಾಲುಣಿಸಿದ್ದಾರೆ ಎಂದು ಫಿಲಿಫಿನೋ ಟೈಮ್ಸ್ ವರದಿ ಮಾಡಿದೆ. 

ಅದಾಗಲೇ ತುಂಬಾ ಹಸಿದಿದ್ದ ಮಗು, ಆರ್ಗೆನೋ ಎದೆಹಾಲುಣಿಸಿದ ಕೂಡಲೇ ಅಳು ನಿಲ್ಲಿಸಿ ನಿದ್ದೆಗೆ ಜಾರಿದೆ. ನಂತರ ಮಗುವಿನ ತಾಯಿ ಆರ್ಗೆನೋಗೆ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗಿದೆ. 

Trending News