ಚೀನಾದಲ್ಲಿ ಮುಸ್ಲಿಮರಿಗೆ ಕಿರುಕುಳ, ಇಮ್ರಾನ್ ಖಾನ್ ಗೆ ಆಫ್ರಿದಿಯ ಮನೆ ಉಡುಗೊರೆ

ಈ ಕುರಿತು ಟ್ವೀಟ್ ಮಾಡಿರುವ ಆಫ್ರಿದಿ, "ಉಯಿಗರ್ ಮುಸ್ಲಿಮರಿಗೆ ನೀಡಲಾಗುತ್ತಿರುವ ಕಿರುಕುಳ ಕೇಳಿ ನನ್ನ ಹೃದಯ ನುಚ್ಚುನೂರಾಗಿದೆ. ನೀವು ಉಮ್ಮತ್(ಮುಸ್ಲಿಂ ಸಮುದಾಯ) ಅನ್ನು ಮರುಸಂಘಟಿಸುವ ಕುರಿತು ಹೇಳಿಕೆ ನೀಡುತ್ತಿರಿ. ಅದೇ ರೀತಿ ಈ ನಿಟ್ಟಿನಲ್ಲಿಯೂ ಕೂಡ ಸ್ವಲ್ಪ ವಿಚಾರಿಸಿ" ಎಂದು ಪಾಕ್ ಪ್ರಧಾನಿ ಇಮ್ರಾನ್ ಅವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ "  

Last Updated : Dec 23, 2019, 08:02 PM IST
ಚೀನಾದಲ್ಲಿ ಮುಸ್ಲಿಮರಿಗೆ ಕಿರುಕುಳ, ಇಮ್ರಾನ್ ಖಾನ್ ಗೆ ಆಫ್ರಿದಿಯ ಮನೆ ಉಡುಗೊರೆ title=

ಕರಾಚಿ: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಗೆ ಮನೆ ಉಡುಗೊರೆ ನೀಡಿರುವ ಪಾಕ್ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ, ಇಮ್ರಾನ್ ಖಾನ್ ಅವರನ್ನು ಧರ್ಮಸಂಕಟ ಎದುರಿಸುವಂತೆ ಮಾಡಿದ್ದಾರೆ. ಪಾಕ್ ಪ್ರಧಾನಿಗೆ ಮನವಿ ಮಾಡಿರುವ ಆಫ್ರೀದಿ, "ಚೀನಾದಲ್ಲಿ ಉಯಿಗರ್(ಮುಸ್ಲಿಂ ಸಮುದಾಯ) ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪಾಕ್ ಪ್ರಧಾನಿ ಧ್ವನಿ ಎತ್ತಬೇಕು" ಎಂದು ಆಗ್ರಹಿಸಿದ್ದಾರೆ. ಒಂದು ಕಾಲದಲ್ಲಿ ಪಾಕ್ ತಂಡದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಗೂಗ್ಲಿ ಬೌಲಿಂಗ್ ಗಾಗಿ ಖ್ಯಾತರಾಗಿದ್ದ ಶಾಹೀದ್ ಅಫ್ರೀದಿ, ಇಮ್ರಾನ್ ಖಾನ್ ಅವರಿಗೆ ಈ ಗೂಗ್ಲಿ ಬೌಲ್ ಎಸೆದಿದ್ದಾರೆ. ಚೀನಾ ಮೇಲೆ ಪಾಕಿಸ್ತಾನ ಅವಲಂಭಿತವಾಗಿರುವುದು ಇಡೀ ವಿಶ್ವಕ್ಕೆ ತಿಳಿದ ಸತ್ಯವಾಗಿದೆ. ಏತನ್ಮಧ್ಯೆ ಪಾಕಿಸ್ತಾನ ನಿರಂತರವಾಗಿ ಉಯಿಗರ್ ಮುಸ್ಲಿಮರ ವಿಚಾರ ಚೀನಾದ ಆಂತರಿಕ ವಿಚಾರವಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಚೀನಾಪರ ಮಾತನಾಡುತ್ತಿದೆ.

ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಶಾಹೀದ್ ಆಫ್ರಿದಿ, "ಉಯಿಗರ್ ಮುಸ್ಲಿಮರಿಗೆ ನೀಡಲಾಗುತ್ತಿರುವ ಕಿರುಕುಳ ಕೇಳಿ ನನ್ನ ಹೃದಯ ನುಚ್ಚುನೂರಾಗಿದೆ. ನೀವು ಉಮ್ಮತ್(ಮುಸ್ಲಿಂ ಸಮುದಾಯ) ಅನ್ನು ಮರುಸಂಘಟಿಸುವ ಕುರಿತು ಹೇಳಿಕೆ ನೀಡುತ್ತಿರಿ. ಅದೇ ರೀತಿ ಈ ನಿಟ್ಟಿನಲ್ಲಿಯೂ ಕೂಡ ಸ್ವಲ್ಪ ವಿಚಾರಿಸಿ" ಎಂದು ಪಾಕ್ ಪ್ರಧಾನಿ ಇಮ್ರಾನ್ ಅವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ "ದೇವರಿಗಾದರೂ ಹೆದರಿ ನಿಮ್ಮ ದೇಶದಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿರುವ ಕಿರುಕುಳವನ್ನು ನಿಲ್ಲಿಸಿ" ಎಂದು ಚೀನಾ ಸರ್ಕಾರಕ್ಕೆ ಮನವಿ ಮಾಡುವಂತೆ ಪಾಕ್ ಪ್ರಧಾನಿಗೆ ಆಫ್ರೀದಿ ಸಲಹೆ ನೀಡಿದ್ದಾರೆ.

ಚೀನಾದ ಶಿನ್ಜಿನ್ಪಿಂಗ್ ಪ್ರಾಂತ್ಯದಲ್ಲಿ 1 ಕೋಟಿಗೂ ಅಧಿಕ ಉಯಿಗರ್ ಸಮುದಾಯದ ಮುಸ್ಲಿಮರು ವಾಸವಾಗಿದ್ದು, ಅವರನ್ನು ಡಿಟೆನ್ಶನ್ ಸೆಂಟರ್ ನಲ್ಲಿಡಲಾಗಿದೆ ಎನ್ನಲಾಗುತ್ತಿದೆ. ಉಯಿಗರ್ ಹಾಗೂ ಇತರೆ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿರುವ ಕಿರುಕುಳ ಆರೋಪದ ಹಿನ್ನೆಲೆ ಅಮೇರಿಕಾ ಚೀನಾದ ಸುಮಾರು 28 ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಮೇಲೆ ನಿರ್ಭಂಧ ವಿಧಿಸಿದೆ.

ಇತ್ತೀಚೆಗಷ್ಟೇ ಟರ್ಕಿ ಮೂಲದ ಜರ್ಮನಿ ಫುಟ್ ಬಾಲ್ ಆಟಗಾರ ಮೇಸುತ್ ಒಜಿಲ್ ಕೂಡ ಉಯಿಗರ್ ಮುಸ್ಲಿಮರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಈ ವಿಚಾರದಲ್ಲಿ ಚೀನಾ ನೀತಿಯನ್ನು ಖಂಡಿಸಿದ್ದರು.

Trending News