Afghanistan Crisis: ಅಫ್ಘಾನಿಸ್ತಾನ್ ತೊರೆಯುವುದಕ್ಕೂ ಮುನ್ನ ತಾಲಿಬಾನಿಗಳಿಗೆ ಭಾರಿ ನೋವು ನೀಡಿದ ಅಮೇರಿಕಾ, ಮಾಡಿದ್ದೇನು ತಿಳಿಯಲು ಸುದ್ದಿ ಓದಿ?

Afghanistan Crisis - ತಾಲಿಬಾನ್ (Taliban) ನೀಡಿದ್ದ ಅಲ್ಟಿಮೇಟಂ ಮುಗಿಯುತ್ತಿದ್ದಂತೆ ಅಮೆರಿಕಾದ ಸೇನೆ ಆಫ್ಘಾನಿಸ್ತಾನದಿಂದ  (Afghanistan)ಹಿಂದಕ್ಕೆ ಸರಿದಿದೆ. ಅಮೆರಿಕದ ಕೊನೆಯ ವಿಮಾನ ಕಾಬೂಲ್ ನಿಂದ ಟೇಕಾಫ್ ಆದ ನಂತರ ಒಂದೆಡೆ ತಾಲಿಬಾನ್  ಸಂಭ್ರಮಾಚರಣೆಯಲ್ಲಿ ತೊಡಗಿದರೆ, ಇನ್ನೊಂದೆಡೆ ಅಫ್ಘಾನಿಸ್ತಾನದ ಹೊಸ ಆಡಳಿತಕ್ಕೆ ಅಮೆರಿಕ ದೊಡ್ಡ ಹೊಡೆತ ನೀಡಿದೆ. 

Written by - Nitin Tabib | Last Updated : Aug 31, 2021, 10:30 AM IST
  • ಅಫ್ಘಾನಿಸ್ತಾನ್ ತೊರೆಯುವ ಮುನ್ನ ತಾಲಿಬಾನ್ ಗೆ ಭಾರಿ ಪೆಟ್ಟು ನೀಡಿದ US.
  • ದೇಶ ತೊರೆಯುವ ಮುನ್ನ ಶಸ್ತ್ರಾಸ್ತ್ರ ನಿಷ್ಕ್ರೀಯಗೊಳಿಸಿದ ಅಮೇರಿಕಾ.
  • 70 MARP ಶಸ್ತ್ರಸಜ್ಜಿತ ವಾಹನ, C-RAM System ಇತ್ಯಾದಿಗಳು ನಿಷ್ಕ್ರೀಯ.
Afghanistan Crisis: ಅಫ್ಘಾನಿಸ್ತಾನ್ ತೊರೆಯುವುದಕ್ಕೂ ಮುನ್ನ ತಾಲಿಬಾನಿಗಳಿಗೆ ಭಾರಿ ನೋವು ನೀಡಿದ ಅಮೇರಿಕಾ, ಮಾಡಿದ್ದೇನು ತಿಳಿಯಲು ಸುದ್ದಿ ಓದಿ? title=
Afghanistan Crisis (File Photo)

ಕಾಬೂಲ್:  Afghanistan Crisis - ತಾಲಿಬಾನ್ (Taliban) ನೀಡಿದ್ದ ಅಲ್ಟಿಮೇಟಂ ಮುಗಿಯುತ್ತಿದ್ದಂತೆ ಅಮೆರಿಕಾದ ಸೇನೆ ಆಫ್ಘಾನಿಸ್ತಾನದಿಂದ  (Afghanistan)ಹಿಂದಕ್ಕೆ ಸರಿದಿದೆ. ಅಮೆರಿಕದ ಕೊನೆಯ ವಿಮಾನ ಕಾಬೂಲ್ ನಿಂದ ಟೇಕಾಫ್ ಆದ ನಂತರ ಒಂದೆಡೆ ತಾಲಿಬಾನ್  ಸಂಭ್ರಮಾಚರಣೆಯಲ್ಲಿ ತೊಡಗಿದರೆ, ಇನ್ನೊಂದೆಡೆ ಅಫ್ಘಾನಿಸ್ತಾನದ ಹೊಸ ಆಡಳಿತಕ್ಕೆ ಅಮೆರಿಕ ದೊಡ್ಡ ಹೊಡೆತ ನೀಡಿದೆ. ಸೋಮವಾರ ದೇಶವನ್ನು ತೊರೆಯುವ ಮೊದಲು, ಯುಎಸ್ ಮಿಲಿಟರಿ (US Military) ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ವಿಮಾನಗಳು, ಸಶಸ್ತ್ರ ವಾಹನಗಳು ಮತ್ತು ಹೈಟೆಕ್ ರಾಕೆಟ್ ರಕ್ಷಣಾ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಿದೆ. ಯುಎಸ್ ಜನರಲ್ ಈ ಮಾಹಿತಿಯನ್ನು ನೀಡಿದ್ದಾರೆ.

ಯುಎಸ್ ಸೆಂಟ್ರಲ್ ಕಮಾಂಡ್‌ನ ಮುಖ್ಯಸ್ಥ ಜನರಲ್ ಕೆನೆತ್ ಮೆಕೆಂಜಿ, ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ (Hameed Karjai Airport) 73 ವಿಮಾನಗಳನ್ನು ಅಮೆರಿಕಾದ ಸೇನೆ ಡಿಮಿಲಿಟ್ರೈಸ್ (Demilitraise) ಗೊಳಿಸಿದೆ ಎಂದಿದ್ದಾರೆ. ಅಂದರೆ ಈ ವಿಮಾನಗಳ ಬಳಕೆ ಇನ್ಮುಂದೆ ಸಾಧ್ಯವಿಲ್ಲ ಎಂದರ್ಥ. ಈ ಕುರಿತು ಹೇಳಿಕೆ ನೀಡಿರುವ ಅವರು "ಆ ವಿಮಾನಗಳು ಇನ್ಮುಂದೆ ಎಂದಿಗೂ ಹಾರಲು ಸಾಧ್ಯವಿಲ್ಲ ... ಯಾರಿಗೂ ಅವುಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ... ಖಂಡಿತ ಅವುಎಂದಿಗೂ ಹಾರಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

'ಆಗಸ್ಟ್ 14 ರಂದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದ ಯುಎಸ್, ಸುಮಾರು 6000 ಶಸ್ತ್ರಸಚ್ಚಿತ ಸೈನಿಕರನ್ನು ಕಾಬೂಲ್ ವಿಮಾನನಿಲ್ದಾಣದಲ್ಲಿ ನಿಯೋಜಿಸಿತ್ತು. ಈ ಕಾರಣದಿಂದಾಗಿ 70 MARP ಶಸ್ತ್ರಸಜ್ಜಿತ ವಾಹನಗಳನ್ನು ವಿಮಾನ ನಿಲ್ದಾಣದಲ್ಲಿ ನಾಶಪಡಿಸಲಾಗಿದೆ. ಈ ರೀತಿಯ ಒಂದು ವಾಹನದ ಬೆಲೆ ಸುಮಾರು 10 ಲಕ್ಷ ಡಾಲರ್ ಆಗಿದೆ. ಇದಲ್ಲದೆ 27 ಹಮ್ ವೀಜ್ ವಾಹನಗಳನ್ನು ಡಿಸೇಬಲ್ ಮಾಡಲಾಗಿದ್ದು, ಅವುಗಳ ಪುನರ್ಬಳಕೆ ಇನ್ಮುಂದೆ ಸಾಧ್ಯವಿಲ್ಲ' ಎಂದು ಕೆನೆತ್ ಹೇಳಿದ್ದಾರೆ.

ಅಮೇರಿಕಾ, ಆಫ್ಘಾನಿಸ್ತಾನದಲ್ಲಿ ರಾಕೆಟ್, ಆರ್ಟಿಲರಿ ಹಾಗೂ ಮೊರ್ಟಾರ್ ನಾಶಕ C-RAM ಸಿಸ್ಟಂ (C-RAM System) ಅನ್ನು ಕೂಡ ಬಿಟ್ಟುಹೋಗಿದೆ. ವಿಮಾನ ನಿಲ್ದಾಣವನ್ನು ರಾಕೆಟ್ ದಾಳಿಯಿಂದ ರಕ್ಷಿಸಲು ಅದನ್ನು ನಿಯೋಜಿಸಲಾಗಿತ್ತು. ಈ ಸಿಸ್ಟಂನಿಂದ ಸೋಮವಾರ ಇಸ್ಲಾಮಿಕ್ ಸ್ಟೇಟ್  ಕಾಬೂಲ್ ವಿಮಾನ ನಿಲ್ದಾಣದ ಮೇಲೆ ನಡೆಸಿದ್ದ 5 ರಾಕೆಟ್ ದಾಳಿಗಳನ್ನು ನಿಷ್ಕ್ರೀಯಗೊಳಿಸಲಾಗಿತ್ತು.

ಇದನ್ನೂ ಓದಿ-Kabul Attack: ಕಾಬೂಲ್ ದಾಳಿಗೆ ಸ್ನೇಹಿತರ ನಡುವೆ ಘರ್ಷಣೆ, ಬ್ರಿಟನ್ ವಿರುದ್ಧ ಗಂಭೀರ ಆರೋಪ ಮಾಡಿದ ಅಮೆರಿಕ

ಈ ಸಿಸ್ಟಂ ಕುರಿತು ಮಾತನಾಡಿರುವ ಮೆಕೆಂಜಿ, 'ನಾವು ಈ ಸಿಸ್ಟಂ ಗಳನ್ನು ಆಫ್ಘಾನಿಸ್ತಾನದಿಂದ ಅಂತಿಮ ವಿಮಾನ ಹೊರಡುವ ಕೊನೆಯ ಕ್ಷಣದವರೆಗೂ  ಬಳಸಿದ್ದೇವೆ. ಈ ಸಿಸ್ಟಂಗಳನ್ನು ಬ್ರೇಕ್ ಡೌನ್ ಮಾಡುವ ಪ್ರಕ್ರಿಯೆ ತುಂಬಾ ಜಟಿಲವಾಗಿದ್ದು, ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಈ ಕಾರಣದಿಂದ ನಾವು ಅವುಗಳನ್ನು ಡಿಮಿಲಿಟರೈಸ್ ಮಾಡಿದ್ದು, ಅವುಗಳು ಬಳಕೆಗೆ ನಿಷ್ಕ್ರೀಯವಾಗಿವೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ- 'Make In India'ಗೆ ಸಿಗಲಿದೆ ಭಾರಿ ಬಲ, 14,000 ಕೋಟಿ ರೂ. ಶಸ್ತ್ರಾಸ್ತ್ರ ಖರೀದಿಗೆ ಮುಂದಾದ ಸೇನೆ

ಮಂಗಳವಾರ ಗಡುವು ಅಂತ್ಯಗೊಳ್ಳುವ ಮುನ್ನವೇ ತನ್ನ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಂಡ ಕುರಿತು ಮಾಹಿತಿಯನ್ನು ದೃಢಪಡಿಸಿದೆ. ಈ ಹಿನ್ನೆಲೆ ಯುದ್ಧಪೀಡಿತ ದೇಶದಲ್ಲಿ ಸುಮಾರು 20 ವರ್ಷಗಳ ಅಮೇರಿಕಾ ಸೇನೆಯ ಅಸ್ತಿತ್ವ ಇದರಿಂದ ಕೊನೆಗೊಂಡಂತಾಗಿದೆ. 

ಇದನ್ನೂ ಓದಿ- ಅಫ್ಘಾನಿಸ್ತಾನದಲ್ಲಿನ ಸ್ಥಿತಿ ಭಾರತದ ಸುರಕ್ಷತೆಗೆ ಸವಾಲು, ಕಾಶ್ಮೀರದ ಕುರಿತು ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News