ಪ್ರತಿಭಟನೆ ಲಾಭ ಪಡೆದು ಜೈಲಿನಿಂದ ಸುಮಾರು 80 ಖೈದಿಗಳು ಎಸ್ಕೇಪ್

ಇದಕ್ಕೂ ಮೊದಲು ಈ ಜೈಲಿನಲ್ಲಿ 2010 ಮತ್ತು 2013 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖೈದಿಗಳು ಪರಾರಿಯಾಗಿದ್ದಾರೆ. 

Last Updated : Feb 13, 2019, 11:25 AM IST
ಪ್ರತಿಭಟನೆ ಲಾಭ ಪಡೆದು ಜೈಲಿನಿಂದ ಸುಮಾರು 80 ಖೈದಿಗಳು ಎಸ್ಕೇಪ್  title=
File Image

ಪೋರ್ಟ್ ಔ ಪ್ರಿನ್ಸ್: ದಕ್ಷಿಣ ಹೈತಿಯಲ್ಲಿ ರಾಷ್ಟ್ರಪತಿ ಜೋವನೆಲ್ ಮೊಯಿಸ್ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಸುಮಾರು 78 ಖೈದಿಗಳು ತಪ್ಪಿಸಿಕೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ ಎಂದು ಪೋಲಿಸ್ ರಾಷ್ಟ್ರೀಯ ವಕ್ತಾರ ಹೇಳಿದರು.

ರಾಷ್ಟ್ರಪತಿ ವಿರುದ್ಧ ಹೈತಿಯ ರಾಜಧಾನಿ ಪೋರ್ಟ್ ಔ ಪ್ರಿನ್ಸ್ನಲ್ಲಿ ಹಿಂಸಾತ್ಮಕ ಪ್ರದರ್ಶನ ತೀವ್ರವಾಗಿ ಹೆಚ್ಚಾಗಿದೆ. ಅಕ್ವಿನ ಪಟ್ಟಣದಲ್ಲಿ ಈ ಘಟನೆಯ ತನಿಖೆ ಆರಂಭವಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜೈಲಿನ ಎದುರು ರಾಷ್ಟ್ರಪತಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದಿದ್ದಾರೆ.

ಈ ರೀತಿಯಾಗಿ ಹೈತಿ ಜೈಲಿನಿಂದ ಖೈದಿಗಳು ತಪ್ಪಿಸಿಕೊಂಡಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು 2010 ಮತ್ತು 2013 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖೈದಿಗಳು ಪರಾರಿಯಾಗಿದ್ದಾರೆ. 2010 ರಲ್ಲಿ ಭೂಕಂಪದ ಪ್ರಯೋಜನವನ್ನು ಪಡೆದು ಸಾವಿರಾರು ಕೈದಿಗಳು ತಪ್ಪಿಸಿಕೊಂಡರು.

ಇನ್ನು 2013 ರಲ್ಲಿ ಓರ್ವ ಸಿಬ್ಬಂದಿಯನ್ನು ಹತ್ಯೆಗೈದು 174 ಖೈದಿಗಳು ಪರಾರಿಯಾಗಿದ್ದರು. ಈ ಸಂದರ್ಭದಲಿಲ್ ಖೈದಿಗಳು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಹಲವು ಪೊಲೀಸರು ಗಾಯಗೊಂಡಿದ್ದರು ಎನ್ನಲಾಗಿದೆ.
 

Trending News