ಲಿಬಿಯಾದಲ್ಲಿ 7 ಭಾರತೀಯರ ಅಪಹರಣ, ಬಿಡುಗಡೆಗಾಗಿ ಭಯೋತ್ಪಾದಕರ ಬೇಡಿಕೆ ಇದು

ಮಾಹಿತಿಯ ಪ್ರಕಾರ, ಕುಶಿನಗರ ಜಿಲ್ಲೆಯ ಮುನ್ನಾ ಚೌಹಾನ್ ಸೇರಿದಂತೆ ಏಳು ಭಾರತೀಯರನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಮತ್ತು ಅಪಹರಣಕಾರರು ಲಿಬಿಯಾದ ತಮ್ಮ ಕಂಪನಿಯಿಂದ 20 ಸಾವಿರ ಡಾಲರ್ ಸುಲಿಗೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

Last Updated : Oct 3, 2020, 07:35 AM IST
  • ಭಾರತಕ್ಕೆ ಹಿಂದಿರುಗುವ ಮೊದಲು ಏಳು ಭಾರತೀಯರು ಲಿಬಿಯಾದಿಂದ ಅಪಹರಿಸಲಾಗಿದೆ.
  • ಸುಲಿಗೆಗಾಗಿ ಭಯೋತ್ಪಾದಕರು ಭಾರತೀಯರನ್ನು ಅಪಹರಿಸಿದ್ದಾರೆ
  • ಸಂತ್ರಸ್ತರ ಕುಟುಂಬಗಳು ವಿದೇಶಾಂಗ ಸಚಿವಾಲಯದಲ್ಲಿ ಮನವಿ ಮಾಡಿವೆ.
ಲಿಬಿಯಾದಲ್ಲಿ 7 ಭಾರತೀಯರ ಅಪಹರಣ, ಬಿಡುಗಡೆಗಾಗಿ ಭಯೋತ್ಪಾದಕರ ಬೇಡಿಕೆ ಇದು title=
File Image

ನವದೆಹಲಿ: ಲಿಬಿಯಾದ ಭಯೋತ್ಪಾದಕರು ಏಳು ಭಾರತೀಯರನ್ನು (Indians) ಅಪಹರಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಲು ಭಯೋತ್ಪಾದಕರು (Terrorists) 20 ಸಾವಿರ ಡಾಲರ್ ಸುಲಿಗೆ ಕೋರಿದ್ದಾರೆ. ಅಪಹರಣಕ್ಕೊಳಗಾದ ಭಾರತೀಯರು ಉತ್ತರಪ್ರದೇಶದ ಕುಶಿನಗರ, ಡಿಯೋರಿಯಾ ಮತ್ತು ಬಿಹಾರ ನಿವಾಸಿಗಳು ಎಂದು ತಿಳಿದುಬಂದಿದೆ. 

ಸಂತ್ರಸ್ತರ ಕುಟುಂಬಗಳು ಆದಷ್ಟು ಬೇಗ ಅಪಹರಣ (Kidnapped)ಕ್ಕೊಳಗಾದವರನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಆದರೆ ಏಳು ಭಾರತೀಯರ ಅಪಹರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ಹೇಳಿಕೆ ಬಂದಿಲ್ಲ.

ವೀಸಾ ಅವಧಿ ಸೆಪ್ಟೆಂಬರ್ 13 ರಂದು ಮುಕ್ತಾಯಗೊಂಡಿದೆ:-
ಮಾಹಿತಿಯ ಪ್ರಕಾರ ಕುಶಿನಗರ ಜಿಲ್ಲೆಯ ಮುನ್ನಾ ಚೌಹಾನ್ ಸೇರಿದಂತೆ ಏಳು ಭಾರತೀಯರನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಮತ್ತು ಅಪಹರಣಕಾರರು ಲಿಬಿಯಾದ ತಮ್ಮ ಕಂಪನಿಯಿಂದ 20 ಸಾವಿರ ಡಾಲರ್ ಸುಲಿಗೆ ಕೋರಿದ್ದಾರೆ. ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಯಾ ಬಸಂತ್ಪುರ ಗ್ರಾಮದ ನಿವಾಸಿ ಮುನ್ನಾ ಚೌಹಾಣ್ ಅವರು ದೆಹಲಿ ಮೂಲದ ಎನ್‌ಡಿ ಎಂಟರ್‌ಪ್ರೈಸಸ್ ಟ್ರಾವೆಲ್ ಏಜೆನ್ಸಿ ಮೂಲಕ 2019ರ ಸೆಪ್ಟೆಂಬರ್‌ನಲ್ಲಿ ಕಬ್ಬಿಣದ ವೆಲ್ಡರ್ ಆಗಿ ಲಿಬಿಯಾಕ್ಕೆ ತೆರಳಿದ್ದರು. ಅವರ ವೀಸಾ ಅವಧಿ 2020ರ ಸೆಪ್ಟೆಂಬರ್ 13ರಂದು ಮುಕ್ತಾಯಗೊಂಡಿತು, ಅವರು ಹಿಂದಿರುಗಬೇಕಿತ್ತು, ಆದರೆ ಅದಕ್ಕೂ ಮೊದಲೇ ಮುನ್ನಾ ಸೇರಿದಂತೆ ಏಳು ಭಾರತೀಯರನ್ನು ಅಪಹರಿಸಲಾಗಿತ್ತು.

ತಾಲಿಬಾನ್ ಉಗ್ರರಿಗೆ ತರಬೇತಿ ನೀಡಿ ಭಾರತದ ವಿರುದ್ಧ ISI ಸಂಚು

ಸುಲಿಗೆ ಪಾವತಿಸಲು ಸಿದ್ಧವಾಗಿದೆ ಕಂಪನಿ:
ಸೆಪ್ಟೆಂಬರ್ 13ರಂದು ಮುನ್ನಾ ಕುಶಿನಗರದಲ್ಲಿರುವ ತಮ್ಮ ಕುಟುಂಬದೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸೆಪ್ಟೆಂಬರ್ 17ರಂದು ಲಿಬಿಯಾ (Libya)ದಿಂದ ದೆಹಲಿಗೆ ಹಾರಾಟ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಮುನ್ನಾ ಅವರ ಸಂಬಂಧಿ ಲಲ್ಲಾನ್ ಪ್ರಸಾದ್ ಹೇಳಿದ್ದಾರೆ. ಇದರ ನಂತರ ಕುಟುಂಬವು ಅವನೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲ. ಸೆಪ್ಟೆಂಬರ್ 27ರಂದು ಲಲ್ಲನ್ ಪ್ರಸಾದ್ ದೆಹಲಿ ಟ್ರಾವೆಲ್ ಏಜೆನ್ಸಿಗೆ ತೆರಳಿ ವಿಚಾರಿಸಿಡಾಗ ಮುನ್ನಾ ಸೇರಿದಂತೆ ಏಳು ಭಾರತೀಯರನ್ನು ಲಿಬಿಯಾದಲ್ಲಿ ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ. ಲಾಲನ್ ಪ್ರಕಾರ, ಭಯೋತ್ಪಾದಕರಿಗೆ ಸುಲಿಗೆ ಹಣವನ್ನು ನೀಡಲು ಕಂಪನಿ ಸಿದ್ಧವಾಗಿದೆ ಎಂದು ಟ್ರಾವೆಲ್ ಏಜೆನ್ಸಿ ತಿಳಿಸಿದೆ.

ಭಯೋತ್ಪಾದಕರಿಗೆ ತರಬೇತಿ ನೀಡಲು ಯುಎಸ್ ಹಣ ಬಳಕೆ ಒಪ್ಪಿಕೊಂಡ ಪಾಕ್ ಪ್ರಧಾನಿ

ಕುಟುಂಬದೊಂದಿಗೆ ಸಂಪರ್ಕದಲ್ಲಿರುವ ಪೊಲೀಸರು:
ದೆಹಲಿಯ ಪ್ರಸಾದ್‌ಪುರ ಪೊಲೀಸ್ ಠಾಣೆಯಲ್ಲಿ ಲಲ್ಲನ್ ಆನ್‌ಲೈನ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದು, ಮುನ್ನಾ ಚೌಹಾಣ್ ಸೇರಿದಂತೆ ಎಲ್ಲ ಕಾರ್ಮಿಕರ ಬಿಡುಗಡೆಗಾಗಿ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದಾರೆ. ಮುನ್ನಾ ಅವರ ಕುಟುಂಬದಲ್ಲಿ ದುಡಿಯುತ್ತಿರುವ ಏಕೈಕ ವ್ಯಕ್ತಿ. ಅವರ ಕುಟುಂಬದಲ್ಲಿ ವಯಸ್ಸಾದ ತಾಯಿ ಚಂದ್ರವತಿ, ಪತ್ನಿ ಸಂಜು, 13 ವರ್ಷದ ಮಗಳು ರಾಣಿ, 8 ವರ್ಷದ ಮಗ ವಿಶ್ವಜಿತ್ ಅಲಿಯಾಸ್ ಕರಣ್ ಮತ್ತು ನಾಲ್ಕು ವರ್ಷದ ಸರ್ವೇಶ್ ಇದ್ದಾರೆ. ಅವರ ತಂದೆ ರಾಮ್ ಬಚನ್ 10 ವರ್ಷಗಳ ಹಿಂದೆ ನಿಧನರಾದರು. ಅದೇ ಸಮಯದಲ್ಲಿ ಕುಶಿನಗರ ಎಸ್ಪಿ ವಿನೋದ್ ಸಿಂಗ್ ಅವರು ಲಿಬಿಯಾದ ಕುಶಿನಗರದಿಂದ ವ್ಯಕ್ತಿಯನ್ನು ಅಪಹರಿಸಿದ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ, ಪೊಲೀಸರು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
 

Trending News