ಅಫ್ಘಾನಿಸ್ತಾನದಲ್ಲಿ ಭಾರತ ಮೂಲದ 7 ಇಂಜಿನಿಯರುಗಳ ಅಪಹರಣ

ಅಫ್ಘಾನಿಸ್ತಾನದ ಉತ್ತರ ಬಾಗ್ಲಾನ್ ಪ್ರಾಂತ್ಯದ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಏಳು ಇಂಜಿನಿಯರುಗಳನ್ನು ಅಪಹರಿಸಲಾಗಿದೆ.

Last Updated : May 6, 2018, 06:01 PM IST
ಅಫ್ಘಾನಿಸ್ತಾನದಲ್ಲಿ ಭಾರತ ಮೂಲದ 7 ಇಂಜಿನಿಯರುಗಳ ಅಪಹರಣ  title=

ಕಾಬುಲ್‌: ಅಫ್ಘಾನಿಸ್ತಾನದ ಉತ್ತರ ಬಾಗ್ಲಾನ್ ಪ್ರಾಂತ್ಯದ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಅಫ್ಘಾನ್ ಪ್ರಜೆ ಮತ್ತು ಭಾರತೀಯ ಮೂಲದ ಏಳು ಇಂಜಿನಿಯರುಗಳನ್ನು ಅಪಹರಿಸಲಾಗಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

ಆಫ್ಘಾನ್ ಸರ್ಕಾರದ ವಿದ್ಯುತ್ ಸ್ಥಾವರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂಜಿನಿಯರುಗಳು ಮಿನಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದೂಕು ತೋರಿಸಿ, ಬೆದರಿಸಿ ಅಪಹರಿಸಿರುವುದಾಗಿ ಬಾಗ್ಲಾನ್ ಪೊಲೀಸ್ ಅಧಿಕಾರಿ ಝಬಿಹಿಲ್ಲಾ ಶುಜಾ ತಿಳಿಸಿದ್ದಾರೆ. 

ಭಾರತೀಯ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳು ಅಪಹರಣದ ಬಗ್ಗೆ ಖಚಿತಪಡಿಸಿದ್ದು, ಇವರೆಲ್ಲರೂ ವಿದ್ಯುತ್ ಸ್ಥಾವರಗಳನ್ನು ನಿಯಂತ್ರಿಸುವ ಡಾ ಅಫ್ಘಾನಿಸ್ತಾನದ ಬ್ರಶ್ನಾ ಶೆರ್ಕಾಟ್(Da Afghanistan Breshna Sherkat-DABS) ಸಂಸ್ಥೆಯ ಉದ್ಯೋಗಿಗಳಾಗಿದ್ದರು ಎಂದು ತಿಳಿಸಿದ್ದಾರೆ. 

Trending News