ಕೊರೋನಾ ಬಿಕ್ಕಟ್ಟಿನಿಂದಾಗಿ ಮುಂಬರುವ ದಿನಗಳಲ್ಲಿ ಪ್ರತಿದಿನ 6,000 ಮಕ್ಕಳು ಸಾವು -ಯುನಿಸೆಫ್ ಎಚ್ಚರಿಕೆ

COVID-19 ಸಾಂಕ್ರಾಮಿಕವು ಆರೋಗ್ಯ ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ದಿನನಿತ್ಯದ ಸೇವೆಗಳನ್ನು ಅಡ್ಡಿಪಡಿಸುತ್ತಿರುವುದರಿಂದ ಮುಂದಿನ ಆರು ತಿಂಗಳಲ್ಲಿ ಹೆಚ್ಚುವರಿ 6,000 ಮಕ್ಕಳು ಪ್ರತಿದಿನ ಸಾಯಬಹುದು ಎಂದು ಯುನಿಸೆಫ್ ತಿಳಿಸಿದೆ.

Last Updated : May 14, 2020, 05:26 PM IST
ಕೊರೋನಾ ಬಿಕ್ಕಟ್ಟಿನಿಂದಾಗಿ ಮುಂಬರುವ ದಿನಗಳಲ್ಲಿ ಪ್ರತಿದಿನ 6,000 ಮಕ್ಕಳು ಸಾವು -ಯುನಿಸೆಫ್ ಎಚ್ಚರಿಕೆ  title=

ನವದೆಹಲಿ: COVID-19 ಸಾಂಕ್ರಾಮಿಕವು ಆರೋಗ್ಯ ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ದಿನನಿತ್ಯದ ಸೇವೆಗಳನ್ನು ಅಡ್ಡಿಪಡಿಸುತ್ತಿರುವುದರಿಂದ ಮುಂದಿನ ಆರು ತಿಂಗಳಲ್ಲಿ ಹೆಚ್ಚುವರಿ 6,000 ಮಕ್ಕಳು ಪ್ರತಿದಿನ ಸಾಯಬಹುದು ಎಂದು ಯುನಿಸೆಫ್ ತಿಳಿಸಿದೆ.

ದಿ ಲ್ಯಾನ್ಸೆಟ್‌ನಲ್ಲಿ ಹೊಸದಾಗಿ ಪ್ರಕಟವಾದ ಜಾನ್ಸ್ ಹಾಪ್‌ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರ ವಿಶ್ಲೇಷಣೆಯನ್ನು ವರದಿ ಆಧರಿಸಿದೆ.

118 ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿನ ಮೂರು ಸನ್ನಿವೇಶಗಳ ಕನಿಷ್ಟತೆಯನ್ನು ಆಧರಿಸಿ, ವಾಡಿಕೆಯ ಆರೋಗ್ಯ ಸೇವಾ ವ್ಯಾಪ್ತಿಯ ಮಟ್ಟದಲ್ಲಿನ ಇಳಿಕೆ ಮತ್ತು ಮಕ್ಕಳ ಹೆಚ್ಚಳದಿಂದಾಗಿ ಕೇವಲ ಆರು ತಿಂಗಳಲ್ಲಿ ಹೆಚ್ಚುವರಿ 1.2 ಮಿಲಿಯನ್ ಐದು ವರ್ಷದೊಳಗಿನ ಮಕ್ಕಳ ಸಾವುಗಳು ಸಂಭವಿಸಬಹುದು ಎಂದು ವಿಶ್ಲೇಷಣೆ ಅಂದಾಜಿಸಿದೆ. ಸಂಭಾವ್ಯ ಅಪಾಯವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸುಮಾರು 1 ದಶಕದ ಪ್ರಗತಿ ಹಿಂದಕ್ಕೆ ಹೋಗಲಿದೆ ಎನ್ನಲಾಗಿದೆ.

ಹೆಚ್ಚಿನ ಸಂಖ್ಯೆಯ ಹೆಚ್ಚುವರಿ ಮಕ್ಕಳ ಸಾವು ಬಾಂಗ್ಲಾದೇಶ, ಬ್ರೆಜಿಲ್, ಕಾಂಗೋ, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ನೈಜೀರಿಯಾ, ಪಾಕಿಸ್ತಾನ, ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾ ನಲ್ಲಿ ಸಂಭವಿಸಲಿವೆ ಎನ್ನಲಾಗಿದೆ. ಈಗ ಯುನಿಸೆಫ್ ಮಕ್ಕಳ ಉಳುವಿಗಾಗಿ ಹಣಕಾಸು ನೆರವಿಗಾಗಿ ಮನವಿ ಮಾಡಿದೆ.

Trending News