Forest Missing : ಅಮೆಜಾನ್ ಪ್ರಾಂತ್ಯದ ಅರರಾಕುವಾರಾದಿಂದ ಸ್ಯಾನ್ ಜೋಸ್ ಡೆಲ್ ಗುವಿಯಾರ್‌ಗೆ ಮೇ 1ರಂದು ಪ್ರಯಾಣ ಬೆಳೆಸಿದ್ದ ಒಂದೇ ಕುಟುಂಬದ 7 ಮಂದಿ ಮತ್ತು ಒಬ್ಬ ಪೈಲಟ್ ಇದ್ದ ʼಸೆಸ್ನಾ 206ʼ ಸಣ್ಣ ವಿಮಾನವೊಂದು ಎಂಜಿನ್ ವೈಫಲ್ಯಗೊಂಡು ದಟ್ಟ ಕಾಡಿನಲ್ಲಿ ಬಿದ್ದಿತ್ತು. ಈ ಘಟನೆಯಲ್ಲಿ ತಾಯಿ ಮತ್ತು ವಿಮಾನದ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಒತ್ತೆಯಾಗಿವೆ. ಹೀಗಾಗಿ ಮಕ್ಕಳು ಬದುಕಿರುವ ಸುಳಿವು ಸಿಕ್ಕಿದೆ ಎಂದು ಹುಡುಕಾಟವನ್ನು ತೀವ್ರಗೊಳಿಸಲಾಗಿತ್ತು. ಮಕ್ಕಳನ್ನು ಪತ್ತೆಹಚ್ಚಲು ಕಾಡಿನಲ್ಲಿ 150 ಸೈನಿಕರು ಹಗಲು ರಾತ್ರಿ ಕಾರ್ಯ ನಡೆಸಿದ್ದರು.
#ATENCIÓN 🚨| La Organización Nacional Indígena de Colombia -ONIC- informa y recibe con mucha alegría el hallazgo con vida de los cuatro niños que estaban desaparecidos en la selva del Caquetá. pic.twitter.com/dcQp2To0PA
— Organización Nacional Indígena de Colombia - ONIC (@ONIC_Colombia) June 10, 2023
ಇದನ್ನೂ ಓದಿ-China: ಸಂಚಲನ ಸೃಷ್ಟಿಸಿದೆ ಸೈನಿಕರಿಗೆ ಕ್ಸಿ ಜಿನ್‌ಪಿಂಗ್ ಮನವಿ! ಅಷ್ಟಕ್ಕೂ ಚೀನಾದ ಉದ್ದೇಶವೇನು?
ನಾಯಿಗಳನ್ನು ಸಹಾಯಕ್ಕೆ ಸೇನೆ ಬಳಸಿಕೊಂಡಿತ್ತು. ಸ್ಥಳೀಯ ಬುಡಕಟ್ಟಿನ ಹತ್ತಾರು ಸ್ವಯಂ ಸೇವಕರೂ ಸಹ ಈ ಕಾರ್ಯಾಚರಣೆಯಲ್ಲಿ ಸಹಾಯ ಹಸ್ತ ನೀಡಿದ್ದರು. ಹಸಿವಿನಿಂದ ಮಕ್ಕಳು ಸಾಯಬಾರದೆಂದು ಆಹಾರ ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕಾಡಿನೊಳಗೆ ಎಸೆಯಲಾಗಿತ್ತು.
#GeneralGiraldo: "La unión de esfuerzos hizo posible esta alegría para Colombia"
Gloria a los soldados de las @FuerzasMilCol, a las comunidades indígenas e instituciones que hicieron parte de la #OperaciónEsperanza" pic.twitter.com/LO3BPldLgD
— Fuerzas Militares de Colombia (@FuerzasMilCol) June 10, 2023
ಇದೊಂದು ವಿಸ್ಮಯಕಾರಿ ಘಟನೆಯಾಗಿದ್ದು, 40 ದಿನಗಳ ಹುಡುಕಾಟದ ಬಳಿಕ ಸೇನಾಪಡೆ ಮತ್ತು ಸ್ಥಳೀಯ ಜನರು ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ದೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಮಕ್ಕಳು ಕಂಡುಹಿಡಿದಿರುವುದನ್ನು ಇತಿಹಾಸ ಎಂದಿಗೂ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಮಕ್ಕಳು ಶಕ್ತಿಹೀನರಾಗಿದ್ದಾರೆ ವೈದೈಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡು ಅವರನ್ನು ರಕ್ಷಿಸಿದೆ ಅವರು ಈಗ ಕೊಲಂಬಿಯಾದ ಮಕ್ಕಳು ಎಂದು ಪೆಟ್ರೋ ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ-Ukraine-Russia War: ರಷ್ಯಾ ಒಳಹೊಕ್ಕು ದಾಳಿ ಮಾಡುವ ಶಕ್ತಿ ಪಡೆದುಕೊಂಡ ಯುಕ್ರೈನ್, ಪುಟಿನ್ ಟೆನ್ಷನ್ ನಲ್ಲಿ ಹೆಚ್ಚಳ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.