ನೇಪಾಳದ ರಾಜಧಾನಿ ಕಠ್ಮಂಡುವನ್ನು ಬೆಚ್ಚಿ ಬೀಳಿಸಿದ 3 ಸ್ಫೋಟ; 4 ಸಾವು, ಹಲವರಿಗೆ ಗಾಯ

ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ನೇಪಾಳ ಪೊಲೀಸರು ಹೇಳಿದ್ದಾರೆ. 

Last Updated : May 27, 2019, 10:44 AM IST
ನೇಪಾಳದ ರಾಜಧಾನಿ ಕಠ್ಮಂಡುವನ್ನು ಬೆಚ್ಚಿ ಬೀಳಿಸಿದ 3 ಸ್ಫೋಟ; 4 ಸಾವು, ಹಲವರಿಗೆ ಗಾಯ title=
Pic Courtesy: IANS

ಕಠ್ಮಂಡು: ಭಾರತದ ನೆರೆಯ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ 3 ಸ್ಫೋಟಗಳು ಸಂಭವಿಸಿದ್ದು ನೇಪಾಳ ಜನತೆಯನ್ನು ಬೆಚ್ಚಿ ಬೀಲಿಸಿವೆ. ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಸ್ಫೋಟದ ಹಿಂದಿನ ಕಾರಣ ತಿಳಿಯಲು ತನಿಖೆ ಮುಂದುವರೆಸಿದ್ದೇವೆ ಎಂದು ನೇಪಾಳ ಪೊಲೀಸರು ಹೇಳಿದ್ದಾರೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಕಠ್ಮಂಡು ನಗರದ ಮಧ್ಯ ಭಾಗದಲ್ಲಿ ಮೊದಲ ಸ್ಫೋಟ ಸಂಭವಿಸಿತು. ಮನೆಯಲ್ಲಿ ಸಂಭವಿಸಿರುವ ಸ್ಫೋಟವೊಂದರಲ್ಲಿ ಘತಿಕುಲು ನಿವಾಸಿಯೊಬ್ಬ ಮೃತಪಟ್ಟಿದ್ದಾರೆ. ಸ್ಥಳೀಯರ ಪ್ರಕಾರ, ಸ್ಫೋಟದಿಂದಾಗಿ ಮನೆಯ ಗೋಡೆಗಳು ಕುಸಿದಿವೆ. ಇದರ ಬಳಿಕ ಕಠ್ಮಂಡು ನಗರದ ಹೊರವಲಯದಲ್ಲಿರುವ ಸುಖೇದಾದಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು, ಥಾಂಕೋಟ್ ಪ್ರದೇಶದಲ್ಲಿ ಮೂರನೇ ಸ್ಫೋಟ ಸಂಭವಿಸಿದೆ.

ಈ ಮೂರು ಸ್ಫೋಟಗಳಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಪೊಲೀಸ್ ಅಧಿಕಾರಿ ಶ್ಯಾಮ್ ಲಾಲ್ ಗವಾಲಿಯ ಪ್ರಕಾರ, ಮಾವೋವಾದಿ ಸಂಘಟನೆಗಳಿಗೆ ಸಂಬಂಧಿಸಿದ ಕೆಲವು ಪತ್ರಗಳು ಮೊದಲ ಸ್ಫೋಟದಲ್ಲಿ ನಾಶಗೊಂಡಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ ಕೈವಾಡವಿದ್ದು, ಅವರು ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. 

ಬಾಂಬ್ ಅನ್ನು ತಯಾರಿಸಲು ಮಾವೋವಾದಿ ಸಂಘಟನೆಯಿಂದ ಈ ಮನೆ ಬಳಸಲ್ಪಟ್ಟಿದೆ. ಒಬ್ಬ ಗಾಯಗೊಂಡ ವ್ಯಕ್ತಿ ಕೂಡ ಅವನ ಬೆಂಬಲಿಗರಾಗಿದ್ದಾರೆ  ಎಂದು ಪೊಲೀಸರು ತಿಳಿಸಿದ್ದಾರೆ.
 

Trending News