ಚೀನಾ ಬಸ್ಸಿನಲ್ಲಿ ಬೆಂಕಿ: 26 ಮಂದಿ ದಾರುಣ ಸಾವು, 29 ಜನರಿಗೆ ಗಾಯ

ಘಟನೆಯಲ್ಲಿ ಗಾಯಗೊಂಡ 29 ಮಂದಿಯನ್ನು ಮೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.   

Last Updated : Mar 23, 2019, 02:45 PM IST
ಚೀನಾ ಬಸ್ಸಿನಲ್ಲಿ ಬೆಂಕಿ: 26 ಮಂದಿ ದಾರುಣ ಸಾವು, 29 ಜನರಿಗೆ ಗಾಯ title=

ಬೀಚಿಂಗ್: ಚೀನಾದ ಹುನಾನ್ ಪ್ರಾಂತ್ಯದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಬಸ್ ದುರಂತದಲ್ಲಿ 26 ಮಂದಿ ಸಾವನ್ನಪ್ಪಿದ್ದು 29 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸಂವಾದ ಸಮಿತಿ ತಿಳಿಸಿದೆ. 

ಪ್ರವಾಸಕ್ಕೆಂದು ತೆರಳುತ್ತಿದ್ದ 53 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಓರ್ವ ಗೈಡ್ ಇದ್ದ ಬಸ್ಸಿನಲ್ಲಿ ಶುಕ್ರವಾರ ಸಂಜೆ 7.15ರ ಸಮಯದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ 26 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ 29 ಮಂದಿಯನ್ನು ಮೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 

ಇಬ್ಬರೂ ಬಸ್ ಚಾಲಕರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಈ ಅವಘಡಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಇದಕ್ಕೂ ಒಂದು ದಿನ ಮುನ್ನ, ಚೀನಾದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 64 ಮಂದಿ ಸಾವನ್ನಪ್ಪಿದರು. ಈ ಅವಘಡದಲ್ಲಿ ಅಕ್ಕಪಕ್ಕದ ಕಾರ್ಖಾನೆಗಳಿಗೂ ಬೆಂಕಿಯ ಕೆನ್ನಾಲಿಗೆ ಚಾಚಿದ್ದರಿಂದ 640ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Trending News