ಕಾಬೂಲ್ನಲ್ಲಿ ಬಾಂಬ್ ಸ್ಫೋಟ; 25 ಸಾವು, 18 ಮಂದಿಗೆ ಗಾಯ

ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ನಲ್ಲಿ ಬುಧವಾರ ಆತ್ಮಹತ್ಯಾ ಬಾಂಬರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 25 ಮಂದಿ ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ.

Last Updated : Mar 21, 2018, 03:16 PM IST
ಕಾಬೂಲ್ನಲ್ಲಿ ಬಾಂಬ್ ಸ್ಫೋಟ; 25 ಸಾವು, 18 ಮಂದಿಗೆ ಗಾಯ title=

ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ನಲ್ಲಿ ಬುಧವಾರ ಆತ್ಮಹತ್ಯಾ ಬಾಂಬರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 25 ಮಂದಿ ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ.

ಕಾಬೂಲ್ ವಿಶ್ವವಿದ್ಯಾನಿಲಯದ ಬಳಿ ಮಧ್ಯಾಹ್ನ ಸುಮಾರು 1.30 ರ ವೇಳೆಗೆ ಈ ಸ್ಫೋಟ ಸಂಭವಿಸಿದೆ. ಪರ್ಶಿಯನ್ ಹೊಸ ವರ್ಷ ಆಚರಿಸಲು ಸಾವಿರಾರು ಜನರು ನೆರೆದಿದ್ದ ಸಮಯದಲ್ಲಿ ಶಿಯಾ ದೇವಾಲಯದ ಬಳಿ ಸ್ಫೋಟ ಸಂಭವಿಸಿದೆ.

ಸ್ಫೋಟದಿಂದಾಗಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು  ಆರೋಗ್ಯ ಸಚಿವಾಲಯದ ವಕ್ತಾರ ವಹೀದ್ ಮಜೋಹ್ಹ್ ತಿಳಿಸಿದ್ದಾರೆ. ಇದನ್ನು ಕಾರ್ ಬಾಂಬ್ ಸ್ಫೋಟ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Trending News