ಅರ್ಜೆಂಟೀನಾದಲ್ಲಿ ಬಸ್ ಅಪಘಾತ: 13 ಮಂದಿ ಮೃತ, ಹಲವರಿಗೆ ಗಾಯ

ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

Last Updated : Jul 2, 2019, 10:58 AM IST
ಅರ್ಜೆಂಟೀನಾದಲ್ಲಿ ಬಸ್ ಅಪಘಾತ: 13 ಮಂದಿ ಮೃತ, ಹಲವರಿಗೆ ಗಾಯ title=

ಬ್ಯೂನಸ್ ಐರಿಸ್: ಅರ್ಜೆಂಟೀನಾದಲ್ಲಿ ಜನರಿಂದ ತುಂಬಿದ್ದ ಬಸ್ ಅಪಘಾತಕ್ಕೆ ಒಳಗಾಗಿದ್ದು, 13 ಜನರು ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳು ನೀಡಿವೆ. 

ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಉತ್ತರ ಪ್ರಾಂತ್ಯದ ಟುಕುಮನ್‌ನ ಲಾ ಮ್ಯಾಡ್ರಿಡ್ ಪಟ್ಟಣದ ಬಳಿ ಹೆದ್ದಾರಿ 157 ಮತ್ತು ಹೆದ್ದಾರಿ 308 ರ ನಡುವಿನ ಅಡ್ಡರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಕ್ಸಿನ್‌ಹುವಾ ಸುದ್ದಿ ಸಂಸ್ಥೆಯ ವರದಿಯ ಆಧಾರದ ಮೇಲೆ ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ, 30 ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದಿದ್ದು, ಅಗ್ನಿಶಾಮಕ ಇಲಾಖೆಯ ನಾಲ್ಕು ತಂಡಗಳು ಸ್ಥಳದಲ್ಲೇ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

Trending News