ಯೆಮೆನ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ 11 ಜನರ ಸಾವು

    

Last Updated : Jan 30, 2018, 07:04 PM IST
ಯೆಮೆನ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ 11 ಜನರ ಸಾವು  title=
Photo Courtesy:ANI

ನವದೆಹಲಿ: ಯೆಮನ್ ನ ಆಗ್ನೇಯ ಭಾಗದಲ್ಲಿರುವ ಮಿಲಿಟರಿ ಘಟಕದ ಮೇಲೆ ಉಗ್ರರು ಆತ್ಮಹತ್ಯೆ ದಾಳಿ ಮಾಡಿದ್ದಾರೆ. ಇದರಿಂದಾಗಿ  ಕನಿಷ್ಠ 11 ಜನರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಾಧ್ಯಮಗಳ ವರದಿಯಂತೆ ಉಗ್ರನು ತನ್ನ ಸ್ಫೋಟಕಗಳನ್ನು ಹೊತ್ತಿರುವ ಕಾರನ್ನು ಮಿಲಿಟರಿ ಪಾಯಿಂಟ್ ಬಳಿ ಕೊಂಡೋಯ್ದು ನಂತರ ಅದನ್ನು ಸ್ಪೋಟಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆಯಲ್ಲಿ ಸುಮಾರು 11 ಕ್ಕೂ ಅಧಿಕ ಜನರು ದಾಳಿಯಲ್ಲಿ ಮೃತಪಟ್ಟಿದ್ದಾರೆ. 

ಈ ದಾಳಿಯು ಯೆಮೆನಿ ಪ್ರಾಂತ್ಯದ ಶಬ್ವಾದ ರಾಜಧಾನಿಯಾದ ಅಟಾಕ್ ನ ಈಶಾನ್ಯ ಭಾಗದಲ್ಲಿರುವ ಮಿಲಿಟರಿ ಘಟಕದ ಮೇಲೆ ಉಗ್ರರು ಆತ್ಮಹತ್ಯಾ ದಾಳಿಯನ್ನು ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Trending News