World Biggest Fish: ವಿಶ್ವದ ಅತಿದೊಡ್ಡ ಮೀನು, ತೂಕ ತಿಳಿದರೆ ಬೆಚ್ಚಿ ಬೀಳುವಿರಿ!

World Biggest Fish: ಪ್ರಪಂಚವು ರಹಸ್ಯಗಳಿಂದ ತುಂಬಿದೆ. ಇವುಗಳಲ್ಲಿ ಬಹಳಷ್ಟು ಜನರನ್ನು ಅಚ್ಚರಿಗೊಳಿಸುವಂತಹವುಗಳಿವೆ. ಇತ್ತೀಚೆಗಷ್ಟೇ ಕಾಂಬೋಡಿಯಾದ ಮೆಕಾಂಗ್ ನದಿಯಿಂದ ಇಂತಹದೊಂದು ರಹಸ್ಯ ಹೊರಬಿದ್ದಿದೆ.

Written by - Chetana Devarmani | Last Updated : Jun 22, 2022, 12:57 PM IST
  • ಪ್ರಪಂಚವು ರಹಸ್ಯಗಳಿಂದ ತುಂಬಿದೆ
  • ವಿಶ್ವದ ಅತಿದೊಡ್ಡ ಮೀನು, ತೂಕ ತಿಳಿದರೆ ಬೆಚ್ಚಿ ಬೀಳುವಿರಿ!
  • ಮೀನಿನ ಗಾತ್ರವು ಊಹಿಸಿದ್ದಕ್ಕಿಂತ ದೊಡ್ಡದಾಗಿದೆ
World Biggest Fish: ವಿಶ್ವದ ಅತಿದೊಡ್ಡ ಮೀನು, ತೂಕ ತಿಳಿದರೆ ಬೆಚ್ಚಿ ಬೀಳುವಿರಿ!  title=
ವಿಶ್ವದ ಅತಿದೊಡ್ಡ ಮೀನು

World Biggest Freshwater Fish: ಈ ಪ್ರಪಂಚದಲ್ಲಿ ಅನೇಕ ರಹಸ್ಯಗಳಿವೆ. ಕೆಲವು ನಮಗೆ ತಿಳಿದಿದ್ದರೆ, ಇನ್ನೂ ಹಲವು ಯಾರಿಗೂ ಅರಿವಿಗೆ ಬಂದಿಲ್ಲ. ಇತ್ತೀಚೆಗಷ್ಟೇ ಕಾಂಬೋಡಿಯಾದ ಮೆಕಾಂಗ್ ನದಿಯಿಂದ ಇಂತಹದೊಂದು ರಹಸ್ಯ ಹೊರಬಿದ್ದಿದೆ. ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಇಲ್ಲಿ ದೊರೆತಿದೆ. ಈ ಬೃಹತ್ ಮೀನಿನ ಹೆಸರು ಸ್ಟಿಂಗ್ರೇ ಮತ್ತು ಅದರ ತೂಕ ಸುಮಾರು 300 ಕೆ.ಜಿ. ಇದು ತಾಜಾ ನೀರಿನ ವಿಶ್ವದ ಅತಿದೊಡ್ಡ ಮೀನು ಎಂದು ಸಂಶೋಧಕರು ಹೇಳುತ್ತಾರೆ.

ಇದನ್ನೂ ಓದಿ: AC ಬಳಸುವಾಗ ಈ ಟ್ರಿಕ್ ಅನುಸರಿಸಿದರೆ ನಿಮ್ಮ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಆಗುತ್ತೆ!

ಮಾಧ್ಯಮ ವರದಿಗಳ ಪ್ರಕಾರ, ಈ ಮೀನಿನ ಉದ್ದ ಸುಮಾರು 13 ಅಡಿ. ಇದನ್ನು ಸ್ಟಂಗ್ ಟ್ರಾಂಗ್ ಎಂಬ ಹೆಸರಿನ ಸ್ಥಳದಲ್ಲಿ ಮೀನುಗಾರರು ಹಿಡಿದಿದ್ದಾರೆ. ಇದ್ದಕ್ಕಿದ್ದಂತೆ ತನ್ನ ಬಲೆ ಭಾರವಾದಾಗ ಅನೇಕ ಮೀನುಗಳು ಸಿಕ್ಕಿಬಿದ್ದಂತೆ ಭಾಸವಾಯಿತು, ಹೇಗೋ ಬಲೆಯನ್ನು ನೀರಿನಿಂದ ಹೊರತೆಗೆದಾಗ ಅದರಲ್ಲಿದ್ದ ಮೀನುಗಳನ್ನು ನೋಡಿ ದಿಗ್ಭ್ರಮೆಗೊಂಡೆ ಎಂದು ಈ ಮೀನುಗಾರ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಮೀನಿನ ಗಾತ್ರವು ಊಹಿಸಿದ್ದಕ್ಕಿಂತ ದೊಡ್ಡದಾಗಿದೆ ಎಂದು ಅವರು ಹೇಳಿದರು. ಆಗ ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವರು ತಕ್ಷಣವೇ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಇದನ್ನು ತಿಳಿಸಿದರು.

2005ರಲ್ಲಿ ಸಿಕ್ಕ ಮೀನಿನ ದಾಖಲೆ ಮುರಿದಿದೆ:

ಮಾಹಿತಿ ಪಡೆದ ಸಂಶೋಧಕರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದೆ. ಮೀನಿನ ಉದ್ದವನ್ನು ಅಳೆಯುವುದರೊಂದಿಗೆ ತಂಡವು ಅದರ ತೂಕವನ್ನು ಸಹ ಮಾಡಿತು. ಮೀನಿನ ತೂಕ ಸುಮಾರು 300 ಕೆ.ಜಿ. ಇದು ಹಿಂದೆ 293 ಕೆಜಿಗಿಂತ ಹೆಚ್ಚು ತೂಕವಿರುವ ಅತಿದೊಡ್ಡ ಸಿಹಿನೀರಿನ ಮೀನು (ಕ್ಯಾಟ್‌ಫಿಶ್) ಆಗಿತ್ತು. 2005 ರಲ್ಲಿ ಈ ಕ್ಯಾಟ್‌ ಫಿಶ್‌ ಥೈಲ್ಯಾಂಡ್‌ನಲ್ಲಿ ಕಂಡುಬಂದಿದೆ.

ಇದನ್ನೂ ಓದಿ: Gold Price Today : ಇಂದು ಸ್ವಲ್ಪ ಇಳಿಕೆಯಾಯಿತು ಚಿನ್ನದ ಬೆಲೆ, ಬೆಳ್ಳಿ ಬೆಲೆ ಎಷ್ಟು ?

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ತಂಡವು ವಿಶ್ವದ ಅತಿದೊಡ್ಡ ಮೀನಿಗೆ ಎಲೆಕ್ಟ್ರಾನಿಕ್ ಟ್ಯಾಗ್‌ಗಳನ್ನು ಹಾಕಿದೆ. ಟ್ಯಾಗ್ ಮಾಡಿದ ನಂತರ, ಅದನ್ನು ಮತ್ತೆ ನದಿಯಲ್ಲಿ ಬಿಡಲಾಗಿದೆ. ಸಂಶೋಧಕರ ತಂಡವು ಮೀನಿನ ಪ್ರತಿಯೊಂದು ಚಟುವಟಿಕೆಗಳು ಮತ್ತು ನಡವಳಿಕೆಯ ಮೇಲೆ ಕಣ್ಣಿಡಲು ಈ ಟ್ಯಾಗ್‌ ಹಾಕುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News