Viral Video : ಪರ ಸ್ತ್ರೀಯೊಂದಿಗೆ ಗಂಡನ ಸಂಬಂಧ ! ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದವನ ಗ್ರಹಚಾರ ಬಿಡಿಸಿದ ಪತ್ನಿ

Husband Viral Video : ಹೆಂಡತಿಯಾದವಳು ಜಗತ್ತಿನಲ್ಲಿ ಏನನ್ನು ಬೇಕಾದರೂ ಸಹಿಸಿಕೊಂಡಾಳು. ಆದರೆ ತನ್ನ ಪತಿಯ ಜೀವನದಲ್ಲಿ ಮತ್ತೊಬ್ಬ ಹೆಣ್ಣಿನ ಪ್ರವೇಶವನ್ನು ಮಾತ್ರ ಖಂಡಿತಾ ಸಹಿಸುವುದಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ.    

Written by - Ranjitha R K | Last Updated : Mar 2, 2023, 09:42 AM IST
  • ಪತಿ - ಪತ್ನಿ ಸಂಬಂಧದಲ್ಲಿ ನಂಬಿಕೆ ಅನ್ನೋದು ಬಹಳ ಮುಖ್ಯ.
  • ನಂಬಿಕೆ ಕಳೆದುಕೊಂಡರೆ ಮತ್ತೆ ಸಂಪಾದಿಸುವುದೂ ಕಷ್ಟ.
  • ಮೊದಲಿನ ಆಪ್ತತೆ, ಅನ್ಯೋನ್ಯತೆ ಮತ್ತೆ ಮೂಡುವುದೂ ಕಷ್ಟ.
Viral Video : ಪರ ಸ್ತ್ರೀಯೊಂದಿಗೆ ಗಂಡನ ಸಂಬಂಧ ! ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದವನ ಗ್ರಹಚಾರ ಬಿಡಿಸಿದ ಪತ್ನಿ    title=
Photo (Twitter)

Husband Viral Video : ಪತಿ - ಪತ್ನಿ ಸಂಬಂಧದಲ್ಲಿ ನಂಬಿಕೆ ಅನ್ನೋದು ಬಹಳ ಮುಖ್ಯ. ಒಮ್ಮೆ ಆ ನಂಬಿಕೆ ಕಳೆದುಕೊಂಡರೆ ಮತ್ತೆ ಸಂಪಾದಿಸುವುದೂ ಕಷ್ಟ. ಮೊದಲಿನ ಆಪ್ತತೆ, ಅನ್ಯೋನ್ಯತೆ ಸಂಬಂಧದಲ್ಲಿ ಮತ್ತೆ ಮೂಡುವುದೂ ಕಷ್ಟ. ಹೆಂಡತಿಯಾದವಳು ಜಗತ್ತಿನಲ್ಲಿ ಏನನ್ನು ಬೇಕಾದರೂ ಸಹಿಸಿಕೊಂಡಾಳು. ಆದರೆ ತನ್ನ ಪತಿಯ ಜೀವನದಲ್ಲಿ ಮತ್ತೊಬ್ಬ ಹೆಣ್ಣಿನ ಪ್ರವೇಶವನ್ನು ಮಾತ್ರ ಖಂಡಿತಾ ಸಹಿಸುವುದಿಲ್ಲ.  ಸಹನಾ ಮೂರ್ತಿ, ತಾಳ್ಮೆಯ ಪ್ರತೀಕ, ಕ್ಷಮಯಾ ಧರಿತ್ರಿ ಎಂದೆಲ್ಲಾ ಕರೆಸಿಕೊಳ್ಳುವ ನಾರಿ, ಈ ವಿಚಾರ ಬಂದಾಗ ಮಾತ್ರ ರೌದ್ರಾವತಾರ ತಾಳಿ ಬಿಡುತ್ತಾಳೆ.   

ಗಂಡ ಮಾಡಿದ್ದೆಲ್ಲವೂ ಸರಿ, ಗಂಡ ಏನೇ ಮಾಡಿದರೂ ಸುಮ್ಮನೆ ಸಹಿಸಿಕೊಂಡು ಹೋಗಬೇಕು ಎಂದು ಹೆಣ್ಣು ಮಕ್ಕಳಿಗೆ ಪಾಠ ಹೇಳಿಕೊಡುವ ಕಾಲವೊಂದಿತ್ತು. ಮಾನ ಮರ್ಯಾದೆಗೆ ಅಂಜಿ ಬದುಕಬೇಕು. ಮನೆಯ ವಿಷಯ ಬೀದಿಗೆ ಬರಬಾರದು. ನೀನು ಪಾಡು ಪಟ್ಟರೂ ಸರಿ, ಪತಿಯ ಗೌರವಕ್ಕೆ ಮಾತ್ರ ಚ್ಯುತಿ ತರಬಾರದು ಎಂದು ಮದುವೆ ವೇಳೆಯ ಹೆಣ್ಣು ಮಕ್ಕಳ ಕಿವಿ ತುಂಬಿ ಕಳುಹಿಸಲಾಗುತ್ತದೆ. ಪಾಪ ಹಿಂದೆ ಹೆಣ್ಣು ಮಕ್ಕಳೂ ಕೂಡಾ ಈ ಮಾತನ್ನು ಚಾಚೂ ತಪ್ಪದೇ ಪಾಲಿಸಿ ಎಲ್ಲಾ ಕಷ್ಟ, ನೋವು, ಅಸಹನೆ ಎಲ್ಲವನ್ನೂ ನುಂಗಿ ಕೊಳ್ಳುತ್ತಿದ್ದರು. 

ಇದನ್ನೂ ಓದಿ : Viral Video: ಹಿಂದೆಂದೂ ಕಂಡಿರದ ಸರೀಸೃಪಗಳ ರಣಕಾಳಗ: ಈ ಭೀಕರ ಕಾದಾಟದಲ್ಲಿ ಗೆದ್ದದ್ದು….!! ವಿಡಿಯೋ ನೋಡಿ

ಆದರೆ ಈಗ ಹಾಗಲ್ಲ, ಕಾಲ ಬದಲಾಗಿದೆ. ಯಾವ ಸಂದರ್ಭದಲ್ಲಿ ಹೇಗೆ ಸೆಟೆದು ನಿಲ್ಲಬೇಕು ಎನ್ನುವುದು ಹೆಣ್ಣಿಗೂ ಗೊತ್ತು. ಮರ್ಯಾದೆ ಬಿಟ್ಟು ಮಾಡುವ ಕೆಲಸಕ್ಕೆ ಗೌರವದ ಹೆಸರು ಕೊಡಲು ಆಕೆಯೂ ಸಿದ್ದಳಿಲ್ಲ. ಇಲ್ಲಿ ಆದದ್ದು ಕೂಡಾ ಇದೇ. ಪತಿ ಪರ ಸ್ತ್ರಿಯೊಂದಿಗೆ ಸಂಬಂಧ ಇರಿಸಿಕೊಂಡಿ ರುವುದು ಪತ್ನಿಗೆ ಗೊತ್ತಾಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಪತಿಯನ್ನು ಪತ್ನಿ ಬೀದಿಗೆ ಎಳೆದು ತಂದಿದ್ದಾಳೆ. ಎಲ್ಲರೆದುದು ಮಾನ ಮರ್ಯಾದೆ ಮೂರುಕಾಸಿಗೆ ಹರಾಜು ಆಗುವಂತೆ ಬಾರಿಸಿದ್ದಾಳೆ. 

 

ಇದನ್ನೂ ಓದಿ : Viral Video : ಹಾರ ಬದಲಾಯಿಸುವ ವೇಳೆ ರೊಮ್ಯಾಂಟಿಕ್ ಆಗಲು ಹೋದ ವಧು! ಆದರೆ ಮನೆಯವರ ಕೃತ್ಯಕ್ಕೆ ಬೆಚ್ಚಿ ಬಿದ್ದ ವರ !

ಪತಿಯ ಮೇಲೆ ತನಗಿರುವ ಸಿಟ್ಟು, ಅಸಹ್ಯ, ಮೋಸ ಹೋದೆ ಎನ್ನುವ ಭಾವ ಎಲ್ಲವೂ ಸೇರಿ ಮಹಿಳೆಯ ಈ ವರ್ತನೆ ಇಲ್ಲಿ ಹೊರ ಬಿದ್ದಿದೆ. ಮಾತು ಮಾತಿಗೂ ನನಗೆ ಮೋಸ ಮಾಡುತ್ತೀಯಾ ? ಎರಡನೇ ಮದುವೆಯಾಗುತ್ತೀಯಾ ಎನ್ನುವ ಪ್ರಶ್ನೆಯನ್ನು ಆ ಪತ್ನಿ ಮಾಡುತ್ತಿದ್ದಾಳೆ. 

Arhant Shelby ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 71 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.     

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News