Viral Video: ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ರಾಸಲೀಲೆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್!

Teacher's Rasalila Viral Video: ನಂಜನಗೂಡು ತಾಲೂಕಿನ‌ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 58 ವರ್ಷದ ಶಿಕ್ಷಕ ಸಿದ್ದರಾಜು ಎಂಬಾತನೇ 20 ವರ್ಷದ ತನ್ನ ಹಳೇ‌ ವಿದ್ಯಾರ್ಥಿನಿಯೊಂದಿಗೆ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗಿದೆ.

Written by - Puttaraj K Alur | Last Updated : Apr 7, 2024, 09:24 PM IST
  • ವಿದ್ಯಾರ್ಥಿನಿಯ ಜೊತೆಗಿನ ಶಿಕ್ಷಕನ ರಾಸಲೀಲೆಯ ಫೋಟೋಗಳು ವೈರಲ್‌
  • ಮೈಸೂರಿನ ರಾಂಪುರ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕನ ಕಾಮದಾಟ
  • ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಪ್ರತಿಭಟನೆ
Viral Video: ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ರಾಸಲೀಲೆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್! title=
ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್!

ಮೈಸೂರು: ವಿದ್ಯಾರ್ಥಿನಿಯ ಜೊತೆಗಿನ ಶಿಕ್ಷಕನ ರಾಸಲೀಲೆಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಮಾಜಿ ಮಂತ್ರಿಯಾಗಿದ್ದ ದಿ. ಡಿ.ಟಿ.ಜಯಕುಮಾರ್ ಆಪ್ತ ಸಹಾಯಕನಾಗಿದ್ದ ಶಿಕ್ಷಕನ ರಾಸಲೀಲೆಯ ಫೋಟೋಗಳು ವೈರಲ್‌ ಆಗಿವೆ.

ಮೈಸೂರಿನ ರಾಂಪುರ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕನಾಗಿದ್ದ ಈತನ ಕಾಮದಾಟ ಬಯಲಾಗಿದೆ. ತಾನೇ ನೀತಿ ಪಾಠವನ್ನು ಹೇಳಿಕೊಟ್ಟ ವಿದ್ಯಾರ್ಥಿನಿಯನ್ನು ಕಾಮದಾಸೆಗೆ ಬಳಸಿಕೊಂಡಿದ್ದಾನೆಂದು ಆರೋಪಿಸಲಾಗಿದೆ.

ಇದನ್ನೂ ಓದಿ: Bhagyalakshmi Serial: ತಾಂಡವ್‌ಗೆ ತಾಯಿಯಿಂದ ಕಪಾಳ ಮೋಕ್ಷ: ಮಗ-ಸೊಸೆಯ ಸಂಸಾರ ಉಳಿಸಲು ಕುಸುಮಾ ಪ್ಲಾನ್‌ ಏನು?

ನಂಜನಗೂಡು ತಾಲೂಕಿನ‌ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 58 ವರ್ಷದ ಶಿಕ್ಷಕ ಸಿದ್ದರಾಜು ಎಂಬಾತನೇ 20 ವರ್ಷದ ತನ್ನ ಹಳೇ‌ ವಿದ್ಯಾರ್ಥಿನಿಯೊಂದಿಗೆ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗಿದೆ.

ರಾಸಲೀಲೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಗ್ರಾಮದಿಂದ ಶಿಕ್ಷಕ ಸಿದ್ದರಾಜು ನಾಪತ್ತೆಯಾಗಿದ್ದಾನೆ. ಈತನಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಧನುರ್ವಾಯು ರೋಗದಿಂದ ಬಳಲುತ್ತಿದ್ದಾನೆ. ತನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಸಿದ್ದರಾಜು ತನ್ನ ಆಸೆಗೇನೂ ಕಮ್ಮಿಯಿಲ್ಲವೆಂಬಂತೆ ವರ್ತಿಸಿದ್ದಾನೆ. 

ಇದನ್ನೂ ಓದಿ: ರಶ್ಮಿಕಾಗೆ ಇರುವ ಈ ಅದ್ಭುತ ಟ್ಯಾಲೆಂಟ್​ ಭಾರತದ ಯಾವುದೇ ನಟಿಯರಿಗಿಲ್ಲ..! ಏನದು ಗೊತ್ತೆ..?

ವಿದ್ಯಾರ್ಥಿನಿಯ ಜೊತೆಗೆ ಕಾಮದಾಟದ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಆತ ಅವುಗಳನ್ನು ಆಕೆಗೆ ಕಳುಹಿಸಿದ್ದನಂತೆ. ಆದರೆ ಆಕಸ್ಮಿಕವಾಗಿ ಈ ಫೋಟೋಗಳು ಲೀಕ್‌ ಆಗಿದ್ದು, ಕಾಮುಕ ಶಿಕ್ಷಕನ ಅಸಲಿಯತ್ತು ಬಯಲಾಗಿದೆ. ಕಳೆದ ೨೫ ವರ್ಷಗಳಿಂದ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದ ಸಿದ್ದರಾಮಯ್ಯ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಪೋಲಿ ಶಿಕ್ಷಕನನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News