Bihar Bridge Collapse: ಬಿಹಾರದಲ್ಲಿ ಕಳೆದ 9 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸುಲ್ತಂಗಂಜ್-ಅಗುವಾನಿ ಘಾಟ್ ಸೇತುವೆ ಕುಸಿದು ಗಂಗಾ ನದಿಗೆ ಬಿದ್ದಿದೆ. 3ನೇ ಬಾರಿಗೆ ಈ ಸೇತುವೆಯ ಭಾಗಗಳು ನೀರುಪಾಲಾಗಿವೆ. ಸೇತುವೆ ಕುಸಿದು ಬೀಳುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸೇತುವೆ ಕುಸಿತದಿಂದ ಸದ್ಯ ಯಾವುದೇ ಗಾಯ ಅಥವಾ ಪ್ರಾಣಾಪಾಯಗಳು ವರದಿಯಾಗಿಲ್ಲ. ಸೇತುವೆಯ ವಿವಿಧ ಭಾಗಗಳು ಮತ್ತೆ ಮತ್ತೆ ಕುಸಿತವಾಗುತ್ತಿರುವುದು ಅದರ ನಿರ್ಮಾಣ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಒಂದು ಮಗುವಿನ ತಾಯಿಯಾದ್ರೂ ಇನ್ನೂ ಸ್ವರ್ಣಸುಂದರಿ ರಾಧಿಕಾ ಕುಮಾರಸ್ವಾಮಿ! ಇವರ ನಿಜವಾದ ವಯಸ್ಸೆಷ್ಟು ಗೊತ್ತಾ?
ಸುಲ್ತಂಗಂಜ್-ಅಗುವಾನಿ ಘಾಟ್ ರಸ್ತೆ ಸೇತುವೆ ಮತ್ತೆ ಮತ್ತೆ ಕುಸಿತವಾಗುತ್ತಿರುವುದು ತೀವ್ರ ಕಳವಳ ಮೂಡಿಸಿದೆ. ಸೇತುವೆ ನಿರ್ಮಾಣದ ಜವಾಬ್ದಾರಿ ಕೈಗೆತ್ತಿಕೊಂಡಿರುವ ಎಸ್‌ಕೆ ಸಿಂಗ್ಲಾ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಈ ಘಟನೆ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.
अगुवानी सुल्तानगंज में गंगा पे निर्माणाधीन पुल फिर तीसरी बार गिरा ।पूरा system भ्रष्टाचार में लिप्त हैं ।मैं लगातार बोल रहा था कि फिर गिरेगा लेकिन आज तक किसी पे कोई कार्यवाही नहीं हुईं।ना अधिकारी पे ,ना एस.पी सिंघला कंपनी पे ,ना रोडिक कन्सल्टेंसी पे। @narendramodi @nitin_gadkari pic.twitter.com/HLnA3EkaXB
— Dr.Sanjeev Kumar MLA Parbatta,Bihar (@DrSanjeev0121) August 17, 2024
ಸೇತುವೆ ಕುಸಿತವಾಗುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ 2023ರ ಜೂನ್ 4ರಂದು ಸೇತುವೆಯ ಪಿಲ್ಲರ್ ಸಂಖ್ಯೆ 10 ಮತ್ತು 12ರ ನಡುವೆ ಕುಸಿತ ಉಂಟಾಗಿತ್ತು. 2022ರ ಜೂನ್ 30ರಂದು ಪಿಲ್ಲರ್ ಸಂಖ್ಯೆ 5 ಮತ್ತು 6ರ ನಡುವೆ ಕುಸಿತ ಉಂಟಾಗಿ ಗಂಗಾ ನದಿಯ ಪಾಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನ ಈ ಸುಂದರಿ ಕಂಡ್ರೆ ಪ್ಯಾನ್ ಇಂಡಿಯಾ ನಟಿಯರಿಗೆ ನಡುಕ ಹುಟ್ಟುತ್ತೆ..! ಅಬ್ಬಬ್ಬಾ... ಈಕೆ ಸೌಂದರ್ಯವೇ ಒಂದು ಹಬ್ಬ..
ಇದೀಗ ಮತ್ತೆ ಸೇತುವೆ ಕುಸಿತವಾಗಿದ್ದು, ಘಟನೆ ಬಗ್ಗೆ ನೆಟಿಜನ್ಸ್ ಆಘಾತ ವ್ಯಕ್ತಪಡಿಸಿದ್ದಾರೆ. ಸೇತುವೆ ನಿರ್ಮಾಣದ ಜವಾಬ್ದಾರಿ ಕೈಗೆತ್ತಿಕೊಂಡಿರುವ ಕಂಪನಿ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ