ನವದೆಹಲಿ: ರಾಜಸ್ಥಾನದ ಕೋಟಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹಾಸ್ಟೆಲ್‌ನ 6ನೇ ಮಹಡಿಯಿಂದ ಬಿದ್ದು ವೈದ್ಯಕೀಯ ಆಕಾಂಕ್ಷಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಜವಾಹರನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ನಂತರ ವಿದ್ಯಾರ್ಥಿಗಳು ಹಾಸ್ಟೆಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಕೋಚಿಂಗ್ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್‌ನ 6ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಕೋಟಾದ ಜವಾಹರ್ ನಗರ ಪ್ರದೇಶದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ 20 ವರ್ಷದ ನೀಟ್ ಆಕಾಂಕ್ಷಿ ಇಶಾಂಶು ಭಟ್ಟಾಚಾರ್ಯ ಮೃತ ದುರ್ದೈವಿ.ಈ ಘಟನೆಯ ದೃಶ್ಯಾವಳಿ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಬಿಲ್ ಗೇಟ್ಸ್ ತಯಾರಿಸಿದ ರೊಟ್ಟಿ ನೋಡಿ ʼಸೂಪರ್ʼ ಎಂದ ಪಿಎಂ ಮೋದಿ..!
राजस्थान के कोटा में हॉस्टल के छठे माले से गिरने से कोचिंग छात्र की हुई मौत।
- जाली टूटी हुई थी और हाथ में मोबाइल था।
- दिल दहला देने वाला मंजर । pic.twitter.com/eWZfiTlic7— Shubhankar Mishra (@shubhankrmishra) February 3, 2023
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮೃತ ವಿದ್ಯಾರ್ಥಿ ಇಶಾಂಶು ಭಟ್ಟಾಚಾರ್ಯ ಮತ್ತು ಆತನ ಮೂವರು ಸ್ನೇಹಿತರು ಕಟ್ಟಡದ 6ನೇ ಹಂತದ ಬಾಲ್ಕನಿಯಲ್ಲಿ ಹರಟೆ ಹೊಡೆಯುತ್ತಿದ್ದರು. ನಂತರ ಕೊಠಡಿಗೆ ಹಿಂತಿರುಗುವಾಗ ಇಶಾಂಶು ಶೂ ಹಾಕಿಕೊಳ್ಳುವಾಗ ಆಕಸ್ಮಿಕವಾಗಿ 6ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.
ನೋಡನೋಡುತ್ತಿದ್ದಂತೆಯೇ 6ನೇ ಮಹಡಿಯಿಂದ ಬಿದ್ದ ಇಶಾಂಶು ಭಟ್ಟಾಚಾರ್ಯ ಸಾವನ್ನಪ್ಪಿದ್ದಾನೆ. ಇದು ಆತನ ಜೊತೆಗಿದ್ದ ಸ್ನೇಹಿತರಿಗೆ ಆಘಾತವನ್ನುಂಟು ಮಾಡಿದೆ. ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಸಹ ಇದು ಶಾಕ್ ನೀಡಿದೆ. ಪಶ್ಚಿಮ ಬಂಗಾಳದ ಧುಪ್ಗುರಿ ಮೂಲದ ಜಲ್ಪೈಗುರಿ ಜಿಲ್ಲೆಯ ಇಶಾಂಶು ಭಟ್ಟಾಚಾರ್ಯ ಕಳೆದ ವರ್ಷದ ಆಗಸ್ಟ್‌ನಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಅಧ್ಯಯನ ಮಾಡಲು ಕೋಟಾಗೆ ಆಗಮಿಸಿ, ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Snake Video : ಲೋಟದಲ್ಲಿರುವ ನೀರನ್ನು ಗಟ ಗಟನೆ ಕುಡಿಯುವ ಹಾವು.! ಅಪರೂಪದ ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.