ಬೆಳಗಾವಿ: ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೊ ಆವರಣದಲ್ಲಿ ಶನಿವಾರ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಕಿರಣ ತರಳೇಕರ್ ಹಿಡಿದ ಅದ್ಭುತ ಕ್ಯಾಚ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಕ್ಯಾಚ್‍ನ ವಿಡಿಯೋ ವೈರಲ್ ಮಾತ್ರವಲ್ಲದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದೆ. ಹೌದು, ಬೌಂಡರಿಯಾಚೆ ಹೋದ ಚೆಂಡನ್ನು ಕಿರಣ ಗಾಳಿಯಲ್ಲಿ ನೆಗೆದು ಹಿಡಿದರು. ಬೌಂಡರಿ ಲೈನ್ ದಾಟುವ ಮುನ್ನ ಕೈಯಲ್ಲಿದ್ದ ಚೆಂಡನ್ನು ಮೇಲಕ್ಕೆಸೆದರು. ಅದೂ ಕೂಡ ಬೌಂಡರಿ ಆಚೆಗೇ ಬೀಳುತ್ತಿತ್ತು. ಕ್ಷಣಾರ್ಧದಲ್ಲೇ ಅದನ್ನರಿತ ಅವರು ಮತ್ತೆ ಗಾಳಿಯಲ್ಲಿ ಹಾರಿ ಫುಟ್ಬಾಲ್ ಚಂಡಿನಂತೆ ಕ್ರಿಕೆಟ್ ಚೆಂಡನ್ನು ಕಾಲಿನಿಂದ ಒದ್ದು ಗ್ರೌಂಡ್ ಒಳಕ್ಕೆ ಅಟ್ಟಿದ್ದಾರೆ.
ಇದನ್ನೂ ಓದಿ: IND vs AUS: 2 ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ 11 ಫಿಕ್ಸ್.! ಕೆಎಲ್ ರಾಹುಲ್ ಔಟ್?
ಬೌಂಡರಿ ಆಚೆಗೆ ಹೋಗಿ ಮತ್ತೆ ಒಳಗೆ ಬಂದ ಚಂಡನ್ನು ಇನ್ನೊಬ್ಬ ಆಟಗಾರ ಕುನಾಲ್ ಕೊಂಡ ಹಿಡಿದಿದ್ದಾರೆ. ಈ ದೃಶ್ಯ ಭಾನುವಾರ ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Taking boundary catching to a whole new level...🏃♂️
Via WhatsApp. pic.twitter.com/0r2Qcie3gX
— Omkar Mankame (@Oam_16) February 12, 2023
ಈ ಅದ್ಭುತ ಕ್ಯಾಚ್‍ನ ವಿಡಿಯೋ ತುಣುಕನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಶೇರ್ ಮಾಡಿರುವ ತೆಂಡೂಲ್ಕರ್, ಕಿರಣ ಅವರ ಬೆನ್ನು ತಟ್ಟಿದ್ದಾರೆ. ‘ಫುಟ್ಬಾಲ್ ಕೂಡ ಆಡಲು ಗೊತ್ತಿರುವ ವ್ಯಕ್ತಿಯನ್ನು ನೀವು ಕ್ರಿಕೆಟ್‌ಗೆ ಕರೆತಂದಾಗ ಹೀಗೇ ಆಗುತ್ತದೆ...’ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: IND vs AUS: ‘ಟಾರ್ಚರ್ ಶಮಿ’ ಕೊಹ್ಲಿ- ರೋಹಿತ್ ಕೂಡ ಈ ಆಟಗಾರನನ್ನು ದ್ವೇಷಿಸುತ್ತಾರೆಂದ ದಿನೇಶ್ ಕಾರ್ತಿಕ್!
ಈ ಟ್ವೀಟ್‌ಗೆ 60 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 4,576 ಮಂದಿ ಮರುಟ್ವೀಟ್ ಹಾಗೂ 386 ಮಂದಿ ಕಾಮೆಂಟ್ ಮಾಡಿದ್ದಾರೆ. ನಿಪ್ಪಾಣಿಯ ಎಸ್ಆರ್‌ಎಸ್ ಹಾಗೂ ಬೆಳಗಾವಿಯ ಸಾಯಿರಾಜ್ ತಂಡಗಳ ಮಧ್ಯೆ ಈ ಪಂದ್ಯ ನಡೆದಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.