ಕೋತಿಯ ಈ ಮನೆ ಕೆಲಸ ನೋಡಿದ್ರೆ ನಗು ಬರೋದು ಗ್ಯಾರಂಟಿ

ಕೋತಿ ಬೀನ್ಸ್‌ನ್ನು ತುಂಡು ಮಾಡುತ್ತಾ ಸುತ್ತಮುತ್ತ ನೋಡುತ್ತದೆ. ಮತ್ತೆ ಬೀನ್ಸ್ ಕೀಳಲು ಪ್ರಾರಂಭಿಸುತ್ತದೆ. ಈ ವೀಡಿಯೊದ ಶೀರ್ಷಿಕೆಯಲ್ಲಿ "Facial expression every time is legendary" ಎಂದು ಬರೆಯಲಾಗಿದೆ. ಕೋತಿಯು ಕೆಲಸ ಮಾಡುವಾಗ ನೀಡುತ್ತಿರುವ ಮುಖಭಾವ ಎಂಥವರನ್ನೂ ಸಹ ನಗುವಂತೆ ಮಾಡುತ್ತದೆ. ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

Written by - Bhavishya Shetty | Last Updated : Jul 3, 2022, 03:07 PM IST
  • ಕೋತಿ ಬೀನ್ಸ್‌ ಮುರಿಯುವ ವಿಡಿಯೋ ವೈರಲ್‌
  • ನೀವೂ ಮಂಗನ ಮುಗ್ಧ ಚೇಷ್ಟೆ ನೋಡಿ ನಗಲು ಶುರು ಮಾಡ್ತೀರಿ
  • ತಮಾಷೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್‌ ಆಗುತ್ತಿದೆ
ಕೋತಿಯ ಈ ಮನೆ ಕೆಲಸ ನೋಡಿದ್ರೆ ನಗು ಬರೋದು ಗ್ಯಾರಂಟಿ title=
Monkeys

ಕೋತಿಗಳು ಇತರರನ್ನು ಅನುಕರಿಸುವಲ್ಲಿ ಬಹಳ ಪ್ರವೀಣವಾಗಿರುತ್ತವೆ. ಕೋತಿಗಳು ಮನುಷ್ಯರನ್ನು ಅನುಕರಿಸುವಂತಹ ಹಲವು ವೀಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ಆದರೆ ಈ ವಿಡಿಯೋ ಸ್ವಲ್ಪ ವಿಭಿನ್ನವಾಗಿದೆ. ಈ ಟ್ರೆಂಡಿಂಗ್ ವಿಡಿಯೋ ನೋಡಿ ಹಲವರು ನಕ್ಕು ನಕ್ಕು ಸುಸ್ತಾಗಿದ್ದಾರೆ. ವಾಸ್ತವವಾಗಿ, ಕೋತಿ ಅಂತಹದ್ದೇ ಒಂದು ಕೆಲಸ ಮಾಡಿದೆ. 

ಇದನ್ನೂ ಓದಿ: ದಿನವಿಡೀ ಎಸಿ ಆನ್‌ ಮಾಡಿದ್ರೂ ವಿದ್ಯುತ್ ಬಿಲ್ ಹೆಚ್ಚಾಗಬಾರದೇ? ಹಾಗಾದ್ರೆ ಈ ಕೆಲಸ ಮಾಡಿ!

ಈ ವೀಡಿಯೋ ನೋಡಿದ್ರೆ ನೀವೂ ಮಂಗನ ಮುಗ್ಧ ಚೇಷ್ಟೆ ನೋಡಿ ನಗಲು ಶುರು ಮಾಡ್ತೀರಿ. ಮನೆಯ ಯಾವುದೋ ಕೊಠಡಿಯಲ್ಲಿ ಮಂಗ ಕುಳಿತುಕೊಂಡು ಕಷ್ಟಪಡುತ್ತಾ ತರಕಾರಿ ಕಟ್‌ ಮಾಡುತ್ತಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದು. ಮಂಗನ ಮುಂದೆ ದೊಡ್ಡ ಪಾತ್ರೆಯೊಂದರಲ್ಲಿ ರಾಶಿ ಬೀನ್ಸ್ ಇರಿಸಲಾಗುತ್ತದೆ. ಪಾತ್ರೆ ಬಳಿ ಕುಳಿತ ಕೋತಿಯು ಎಚ್ಚರಿಕೆಯಿಂದ ತರಕಾರಿಯನ್ನು ಮುರಿಯುತ್ತಿದೆ. ಈ ವೇಳೆ ಕೋತಿಯ ಮುಖದಲ್ಲಾಗುವ ಬದಲಾವಣೆ ಎಂತವರನ್ನೂ ಸಹ ನಗಿಸುತ್ತದೆ. 

 

 

ಕೋತಿ ಬೀನ್ಸ್‌ನ್ನು ತುಂಡು ಮಾಡುತ್ತಾ ಸುತ್ತಮುತ್ತ ನೋಡುತ್ತದೆ. ಮತ್ತೆ ಬೀನ್ಸ್ ಕೀಳಲು ಪ್ರಾರಂಭಿಸುತ್ತದೆ. ಈ ವೀಡಿಯೊದ ಶೀರ್ಷಿಕೆಯಲ್ಲಿ "Facial expression every time is legendary" ಎಂದು ಬರೆಯಲಾಗಿದೆ. ಕೋತಿಯು ಕೆಲಸ ಮಾಡುವಾಗ ನೀಡುತ್ತಿರುವ ಮುಖಭಾವ ಎಂಥವರನ್ನೂ ಸಹ ನಗುವಂತೆ ಮಾಡುತ್ತದೆ. ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: Driving License ಇಲ್ಲದೆ ಎಲ್ಲಿ ಬೇಕಾದರೂ ಬಿಂದಾಸ್ ವಾಹನ ಚಲಾಯಿಸಿ

ವೀಡಿಯೊವನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ, ಅದನ್ನು 5.5 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಎರಡು ಸಾವಿರಕ್ಕೂ ಹೆಚ್ಚು ಮಂದಿ (ಸೋಶಿಯಲ್ ಮೀಡಿಯಾ ಬಳಕೆದಾರರು) ರೀಟ್ವೀಟ್ ಮಾಡಿದ್ದು, 9 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಅನೇಕ ಬಳಕೆದಾರರು ತಮ್ಮ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News