ದೇಸೀ ಸ್ಟೈಲ್ ನಲ್ಲಿ ಮಗಳ ಪ್ರೀತಿಯ ಭೂತ ಇಳಿಸಿದ ತಾಯಿ, ವಿಡಿಯೋ ಕೊನೆವರೆಗೂ ನೋಡಿ!

Viral Video: ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆ ಗುಟ್ಟಾಗಿ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ನೀವು ನೋಡಬಹುದು. ಇದ್ದಕ್ಕಿದ್ದಂತೆ ಆಕೆಯ ತಾಯಿ ಅಲ್ಲಿಗೆ ಬರುತ್ತಾಳೆ. ಹುಡುಗಿಯ ತಾಯಿ ಯಾರೊಂದಿಗೆ ಮಾತನಾಡುತ್ತಿರುವಿ, ಯಾರು ಈ ಬಾಬು ಎಂದು ಮಗಳನ್ನು ಪ್ರಶ್ನಿಸುತ್ತಾಳೆ. (Viral News In Kannada)  

Written by - Nitin Tabib | Last Updated : Dec 9, 2023, 08:39 PM IST
  • ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರತರವಾದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
  • ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಇದು ಎಲ್ಲರ ಜೊತೆಗೂ ನಡೆದೇ ನಡೆಯುತ್ತೆ' ಎಂದು ಬರೆದಿದ್ದಾರೆ.
  • ಮತ್ತೊಬ್ಬ ಬಳಕೆದಾರರು 'ಇದು ಹೆಚ್ಚಿನ ಮನೆಗಳಲ್ಲಿ ಸಂಭವಿಸುತ್ತದೆ' ಎಂದಿದ್ದಾರೆ.
ದೇಸೀ ಸ್ಟೈಲ್ ನಲ್ಲಿ ಮಗಳ ಪ್ರೀತಿಯ ಭೂತ ಇಳಿಸಿದ ತಾಯಿ, ವಿಡಿಯೋ ಕೊನೆವರೆಗೂ ನೋಡಿ! title=

ನವದೆಹಲಿ: ಸಾಮಾನ್ಯವಾಗಿ 'ಪ್ರೀತಿ ಮಾಡಬಾರದು... ಮಾಡಿದರೆ ಜಗಕೆ ಹೆದರಬಾರದು' ಎನ್ನಲಾಗುತ್ತದೆ. ಆದರೆ ಮಕ್ಕಳು ಹೆಚ್ಚಾಗಿ ತಮ್ಮ ಹೆತ್ತವರಿಂದ ಏನನ್ನೂ ಏನನ್ನೂ ಮರೆಮಾಚಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು  ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತಾಯಿಯೊಬ್ಬಳು ಮಗಳ ತಲೆಯಲ್ಲಿನ ಪ್ರೀತಿಯ ಭೂತವನ್ನು ದೇಸಿ ಸ್ಟೈಲ್ ನಲ್ಲಿ ಇಳಿಸಿದ್ದಾಳೆ. ಈ ವಿಡಿಯೋ ಇದೀಗ  ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಜನರಿಗೆ ನಗು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಈ ವಿಡಿಯೋಗೇ ಜನರು ವ್ಯಾಪಕವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. (Viral News In Kannada)

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆಗೆ ಗುಟ್ಟಾಗಿ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ನೀವು ನೋಡಬಹುದು. ಇದ್ದಕ್ಕಿದ್ದಂತೆ ಅಲ್ಲಿ ಹುಡುಗಿಯ ತಾಯಿ ಪ್ರತ್ಯಕ್ಷಳಾಗಿ ಆಕೆಯನ್ನು ರೆಡ್ ಹ್ಯಾಂಡ್ ಹಿಡಿಯುತ್ತಾಳೆ ಮತ್ತು ಮಗಳಿಗೆ ಯಾರು ಈ ಬಾಬು ಎಂದು ಪ್ರಶ್ನಿಸುತ್ತಾಳೆ. ಕಕ್ಕಾಬಿಕ್ಕಿಯಾದ ಮಗಳು ಏನನ್ನು ಹೇಳಲು ಸಾಧ್ಯವಾಗದೆ ತಾಯಿಯನ್ನು ದುರುಗುಟ್ಟುತ್ತಾ ಕುಳಿತುಕೊಳ್ಳುತ್ತಾಳೆ.  ಇದಾದ ಬಳಿಕ ತಾಯಿ ಮಗಳಿಗೆ ಅದೇ ತನ್ನ ದೇಸಿ ಸ್ಟೈಲ್ ನಲ್ಲಿ ಢಾಳಿಸುತ್ತಾಳೆ ಮತ್ತು ‘ನನಗೆ ಊಟ ಬೇಡ, ಬಾಬು ಆಗಬೇಕು’ ಅಂತೀಯಾ? ಎನ್ನುತ್ತ ಮತ್ತೆ ಥಳಿಸುತ್ತಾಳೆ. ಈ ವೀಡಿಯೊವನ್ನು ಸೌರಭ್ ಮಿಶ್ರಾ ಹೆಸರಿನ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಶೀರ್ಷಿಕೆ ಬರೆದುಕೊಂಡ, ಅವರು  ನಿಜವಾಗಿ 'ಮೋಯೆ ಮೋಯೆ' ಎಂದರೆ ಇದು ಎಂದಿದ್ದಾರೆ. ಈ ವಿಡಿಯೋಗೆ ಇದೀಗ ಜನರು ವ್ಯಾಪಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ-Viral Video: ವರಮಾಲೆ ಕಾರ್ಯಕ್ರಮದಲ್ಲಿಯೇ ವಧುವಿಗೆ ಮುತ್ತು ಕೊಡು ಎಂದ ವರ, ಮುಂದೇನಾಯ್ತು ನೀವೇ ನೋಡಿ!

ವೈರಲ್ ವಿಡಿಯೋಗೇ ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರತರವಾದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಇದು ಎಲ್ಲರ ಜೊತೆಗೂ ನಡೆದೇ ನಡೆಯುತ್ತೆ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು  'ಇದು ಹೆಚ್ಚಿನ ಮನೆಗಳಲ್ಲಿ ಸಂಭವಿಸುತ್ತದೆ' ಎಂದಿದ್ದಾರೆ.  ಇದೇ ವೇಳೆ ಮೂರನೇ ಬಳಕೆದಾರೆ 'ತುಂಬಾ ತಮಾಷೆಯ ವೀಡಿಯೊ ಇದಾಗಿದೆ' ಎಂದಿದ್ದಾರೆ.

ಇದನ್ನೂ ಓದಿ-ಏಕಕಾಲಕ್ಕೆ ಒಂದಲ್ಲ, ಎರಡಲ್ಲ... 4 ಯುವತಿಯರ ಜೊತೆ ಸಪ್ತಪದಿ ತುಳಿದ ವ್ಯಕ್ತಿ, ಜನರ ರಿಯಾಕ್ಷನ್ ವೈರಲ್!

ವೈರಲ್ ಆಗುತಿರುವ ವಿಡಿಯೋ ಇಲ್ಲಿದೆ...

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News