ಏಕಕಾಲಕ್ಕೆ ಒಂದಲ್ಲ, ಎರಡಲ್ಲ... 4 ಯುವತಿಯರ ಜೊತೆ ಸಪ್ತಪದಿ ತುಳಿದ ವ್ಯಕ್ತಿ, ಜನರ ರಿಯಾಕ್ಷನ್ ವೈರಲ್!

Viral Video: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.  ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಹುಡುಗಿಯರನ್ನು ಮದುವೆಯಾಗುತ್ತಿದ್ದಾನೆ. ಈ ವಿಡಿಯೋ ನೋಡಿ ಜನರಿಗೆ ನಂಬಿಕೆಯೇ ಆಗುತ್ತಿಲ್ಲ.(Viral News In Kannada)  

Written by - Nitin Tabib | Last Updated : Dec 7, 2023, 05:34 PM IST
  • ವೈರಲ್ ಆಗುತ್ತಿರುವ ಈ ವಿಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, 'ನಂಬಲು ಸಾಧ್ಯವಿಲ್ಲ' ಎಂದು ಬರೆದಿದ್ದಾರೆ.
  • ಮತ್ತೊಬ್ಬ ಬಳಕೆದಾರ, 'ಅದೃಷ್ಟ ಎಂದರೆ ಹೀಗಿರಬೇಕು' ಎಂದು ಬರೆದಿದ್ದಾರೆ.
  • ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, 'ಈ ವೀಡಿಯೊ ನಕಲಿಯಾಗಿದೆ' ಎಂದಿದ್ದಾರೆ.
ಏಕಕಾಲಕ್ಕೆ ಒಂದಲ್ಲ, ಎರಡಲ್ಲ... 4 ಯುವತಿಯರ ಜೊತೆ ಸಪ್ತಪದಿ ತುಳಿದ ವ್ಯಕ್ತಿ, ಜನರ ರಿಯಾಕ್ಷನ್ ವೈರಲ್! title=

ನವದೆಹಲಿ: ದೇಶಾದ್ಯಂತ ಮದುವೆ ಸೀಸನ್ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಮದುವೆಯ ವಿಡಿಯೋಗಳು ಹರಿದಾಡುತ್ತಿವೆ. ಜನರನ್ನು ನಗಿಸುವ ಕೆಲವು ವಿಡಿಯೋಗಳಿವೆ. ಅಂತಹುದೇ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಹುಡುಗಿಯರನ್ನು ಮದುವೆಯಾಗುತ್ತಿದ್ದಾನೆ. ಈ ವಿಡಿಯೋ ನೋಡಿ ಜನರಿಗೆ ನಂಬಿಕೆಯ ಆಗುತ್ತಿಲ್ಲ. ಇದೇ ವೇಳೆ, ವೀಡಿಯೋ ವೈರಲ್ ಆದ ಬಳಿಕ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಸಹ ಕೊಡುತ್ತಿದ್ದಾರೆ. ಇಂತಹ ವೀಡಿಯೊ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಆದರೆ, ಈ ವಿಡಿಯೋ ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಇಂತಹದೊಂದು ವಿಡಿಯೋ ತಯಾರಿಸಿ ಹಂಚಿಕೊಂಡಿದ್ದಾರೆ ಎಂದೂ ಸಹ ಜನ ಹೇಳುತ್ತಿದ್ದಾರೆ. (Viral News In Kannada)

ಇದನ್ನೂ ಓದಿ-Viral Video: ಸೀಟ್ ಗಾಗಿ ದೆಹಲಿ ಮೆಟ್ರೊ ರೈಲಿನಲ್ಲಿ ಜಬರ್ದಸ್ತ್ ಮಾರಾಮಾರಿ, ವಿಡಿಯೋ ವೈರಲ್!

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವರನೊಬ್ಬ ತನ್ನ ನಾಲ್ವರು ವಧುಗಳೊಂದಿಗೆ ಮದುವೆ ಮಂಟಪದಲ್ಲಿ ಸಪ್ತಪದಿ ತುಳಿಯುತ್ತಿರುವುದನ್ನು ನೀವು ನೋಡಬಹುದು. ವರನು ಮುಂದೆ ನಡೆಯುತ್ತಿದ್ದಾನೆ ಮತ್ತು ಎಲ್ಲಾ ವಧುಗಳು ಅವನನ್ನು ಅನುಸರಿಸುತ್ತಿದ್ದಾರೆ. ಈ ವೀಡಿಯೋ ನೋಡಿದ ಜನರಿಗೆ ತಮ್ಮ ಕಣ್ಣುಗಳೆ ನಂಬಲು ಆಗುತ್ತಿಲ್ಲ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದನ್ನು ಇದುವರೆಗೆ 11 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಇದೇ ವೇಳೆ, ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡುತ್ತಿದ್ದಾರೆ. ಆ ವ್ಯಕ್ತಿಯ ಸ್ಥಿತಿ ನೋಡಿ ಜನರೂ ಖುಷಿ ಪಡುತ್ತಿದ್ದಾರೆ.

ಇದನ್ನೂ ಓದಿ-ವಿವಾಹದ ಮೊದಲ ರಾತ್ರಿಯ ವಿಡಿಯೋ ಹಂಚಿಕೊಂಡ ದಂಪತಿ ಜೋಡಿ, ವಿಡಿಯೋ ವೈರಲ್!

ವಿಡಿಯೋಗೇ ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗುತ್ತಿರುವ ಈ ವಿಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, 'ನಂಬಲು ಸಾಧ್ಯವಿಲ್ಲ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಅದೃಷ್ಟ ಎಂದರೆ ಹೀಗಿರಬೇಕು' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, 'ಈ ವೀಡಿಯೊ ನಕಲಿಯಾಗಿದೆ' ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News