Viral Video: ಲೋಕಲ್ ರೈಲಿನಲ್ಲಿ ಯುವತಿಯೊಂದಿಗೆ ಡ್ಯಾನ್ಸ್ ಮಾಡಿದ ಮುಂಬೈ ಪೊಲೀಸ್!

ಸ್ಥಳೀಯ ಕೇಂದ್ರ ರೈಲ್ವೆ(Central Railway)ಯ ಮಹಿಳೆಯರ 2nd-class ಕೋಚ್‍ನಲ್ಲಿ ಈ ಘಟನೆ ನಡೆದಿದೆ. ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಮನಿಸಿದ್ದು, ಹೋಮ್ ಗಾರ್ಡ್ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.       

Written by - Puttaraj K Alur | Last Updated : Dec 14, 2023, 04:55 PM IST
  • ಲೋಕಲ್ ರೈಲಿನಲ್ಲಿ ಯುವತಿಯೊಂದಿಗೆ ಮುಂಬೈ ಪೊಲೀಸ್ ಸಿಬ್ಬಂದಿ ಡ್ಯಾನ್ಸ್
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
  • ಹೋಮ್‍ಗಾರ್ಡ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು
Viral Video: ಲೋಕಲ್ ರೈಲಿನಲ್ಲಿ ಯುವತಿಯೊಂದಿಗೆ ಡ್ಯಾನ್ಸ್ ಮಾಡಿದ ಮುಂಬೈ ಪೊಲೀಸ್! title=
ಯುವತಿಯೊಂದಿಗೆ ಮುಂಬೈ ಪೊಲೀಸ್ ಸಿಬ್ಬಂದಿ ಡ್ಯಾನ್ಸ್!

ನವದೆಹಲಿ: ಲೋಕಲ್ ರೈಲಿನಲ್ಲಿ ಮಹಿಳೆಯೊಂದಿಗೆ ಮುಂಬೈನ ಪೊಲೀಸ್ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಡಿಸೆಂಬರ್ 6ರಂದು ಈ ಘಟನೆ ನಡೆದಿದೆ. ಸ್ಥಳೀಯ ಕೇಂದ್ರ ರೈಲ್ವೆ(Central Railway)ಯ ಮಹಿಳೆಯರ 2nd-class ಕೋಚ್‍ನಲ್ಲಿ ಈ ಘಟನೆ ನಡೆದಿದೆ. ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಮನಿಸಿದ್ದು, ಹೋಮ್ ಗಾರ್ಡ್ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.       

ಸೈಬಾ ಎಂಬ ಸಾಮಾಜಿಕ ಮಾಧ್ಯಮದ ಪ್ರಭಾವಿ(Social Media Influencer)ಯು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಮವಸ್ತ್ರ ಧರಿಸಿದ ಹೋಮ್ ಗಾರ್ಡ್‌ನೊಂದಿಗೆ ಡಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: Parliament Attack: ಲೋಕಸಭೆಯಲ್ಲಿ ಭದ್ರತಾ ಲೋಪ, ಬಂಧಿತ ನಾಲ್ವರ ಪೈಕಿ ಇಬ್ಬರಿಗೆ ಮೈಸೂರಿನ ಲಿಂಕ್!

ಯುವತಿಯೊಂದಿಗೆ ಡ್ಯಾನ್ಸ್ ಮಾಡಿದ ಹೋಮ್‍ಗಾರ್ಡ್‍ಅನ್ನು ಎಸ್.ಎಫ್.ಗುಪ್ತಾ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ರೈಲಿನ ಬಾಗಿಲಿನಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಿದ ಗುಪ್ತಾ, ಬಳಿಕ ಲೋಕಲ್ ಟ್ರೈನ್‍ನಲ್ಲಿಯೇ ನೃತ್ಯ ಮಾಡುತ್ತಿದ್ದ ಯುವತಿಯೊಂದಿಗೆ ಸೇರಿಕೊಂಡು ತಾನೂ ಡ್ಯಾನ್ಸ್ ಮಾಡಿದ್ದಾರೆ. ಕೋಚ್‍ನಲ್ಲಿದ್ದ ಇತರ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಂಗೀತದ ಲಯಕ್ಕೆ ತಕ್ಕಂತೆ ಯುವತಿಯೊಂದಿಗೆ ನೃತ್ಯ ಮಾಡಿರುವ ಹೋಮ್‍ಗಾರ್ಡ್‍ಗೆ ಇದೀಗ ಬಹುದೊಡ್ಡ ಸಂಕಷ್ಟ ಎದುರಾಗಿದೆ. ಪೊಲೀಸ್ ಸಮವಸ್ತ್ರದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಅದೂ ಲೋಕಲ್ ಟ್ರೈನ್‍ನಲ್ಲಿ ಯುವತಿ ಜೊತೆ ಡ್ಯಾನ್ಸ್ ಮಾಡಿದೆ ಗುಪ್ತಾ ಕೆಲಸಕ್ಕೆ ಇದೀಗ ಕುತ್ತುಬಂದಿದೆ. ಹೋಮ್ ಗಾರ್ಡ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆರ್‌ಪಿಎಫ್‌ಗೆ ಟ್ಯಾಗ್ ಮಾಡಿ ಡಿವಿಜನಲ್ ರೈಲ್ವೇ ಮ್ಯಾನೇಜರ್ ಟ್ವೀಟ್ ಮಾಡಿದ್ದಾರೆ.  

ಇದನ್ನೂ ಓದಿ: Ayodhya Water Metro: ಅಯೋಧ್ಯೆಯಲ್ಲಿ ಸಂಚರಿಸಲಿದೆ ವಾಟರ್ ಮೆಟ್ರೋ, ಇದಕ್ಕೆ ಸೌರಶಕ್ತಿಯೇ ಇಂಧನ

ಈ ವಿಡಿಯೋ ವೈರಲ್ ಆದ ನಂತರ ಸರ್ಕಾರಿ ರೈಲ್ವೆ ಪೊಲೀಸ್ (GRP) ಕೂಡ ಟ್ವೀಟ್ ಮಾಡಿದ್ದು, ಸಮವಸ್ತ್ರ ಹಾಕಿಕೊಂಡು ಕರ್ತವ್ಯದಲ್ಲಿರುವಾಗ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ವೃತ್ತಿಗೆ ಗೌರವವಿಲ್ಲದೆ ಈ ರೀತಿ ನಡೆದುಕೊಂಡಿರುವ ಹೋಮ್‍ಗಾರ್ಡ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News