Viral Video: FIR ದಾಖಲಿಸದ ಪೊಲೀಸ್‌ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..!

Madhya Pradesh: ಪೊಲೀಸ್‌ ಅಧಿಕಾರಿಯ ಈ ನಿರ್ಲಕ್ಷ್ಯದಿಂದ ಆಕ್ರೋಶಗೊಂಡ ಅನುರಾಧಾ ಸೋನಿ ತನ್ನ ಪತಿ ಮತ್ತು ಇಬ್ಬರು ಪುಟ್ಟ ಮಕ್ಕಳದೊಂದಿಗೆ ಠಾಣೆಗೆ ಆಗಮಿಸಿ, ಅಧಿಕಾರಿಗೆ ಆರತಿ ಬೆಳಗಿದ್ದಾರೆ.

Written by - Puttaraj K Alur | Last Updated : Apr 14, 2024, 04:22 PM IST
  • ಸಮಸ್ಯೆಗೆ ಪರಿಹಾರ ನೀಡದೆ ಸತಾಯಿಸಿದ ಪೊಲೀಸ್‌ ಅಧಿಕಾರಿ
  • ಕುಟುಂಬ ಸಮೇತ ಠಾಣೆಗೆ ಹೋಗಿ ಮಂಗಳಾರತಿ ಮಾಡಿದ ಮಹಿಳೆ
  • ಮಧ್ಯಪ್ರದೇಶದ ರೇವಾದಲ್ಲಿ ನಡೆದಿರುವ ಘಟನೆಯ ವಿಡಿಯೋ ವೈರಲ್
Viral Video: FIR ದಾಖಲಿಸದ ಪೊಲೀಸ್‌ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..! title=
ಪೊಲೀಸ್‌ ಅಧಿಕಾರಿಗೆ ಮಂಗಳಾರತಿ!

ನವದೆಹಲಿ: ಪ್ರತಿದಿನ ಅನೇಕರು ಸಮಸ್ಯೆ ಹೇಳಿಕೊಂಡು ಪೊಲೀಸ್‌ ಠಾಣೆಗೆ ಹೋಗುತ್ತಾರೆ. ತಮಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿ ಅಂತಾ ಪೊಲೀಸರಲ್ಲಿ ಬೇಡಿಕೊಂಡಿರುತ್ತಾರೆ. ಆದರೆ ಕೆಲವು ಬಾರಿ ಪೊಲೀಸರು ಇಂತಹ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಜನರ ಸಮಸ್ಯೆ ಆಲಿಸದೆ ಸತಾಯಿಸುತ್ತಾರೆ. ಅಂತಹ ಪೊಲೀಸ್‌ ಅಧಿಕಾರಿಗೆ ಮಹಿಳೆಯೊಬ್ಬರು ಸರಿಯಾಗಿಯೇ ಪಾಠ ಕಲಿಸಿದ್ದಾರೆ.

ಹೌದು, ತಮಗೆ ಅನ್ಯಾಯವಾಗಿದೆ, FIR ದಾಖಲಿಸಿ ನ್ಯಾಯ ಕೊಡಿಸಿ ಅಂತಾ ಮಹಿಳೆಯೊಬ್ಬರು ಪ್ರತಿದಿನ ಪೊಲೀಸ್‌ ಠಾಣೆ ಮೆಟ್ಟಿಲೇರಿದರು ಪ್ರಯೋಜನವಾಗಿರಲಿಲ್ಲ. ಮಹಿಳೆಯ ಸಮಸ್ಯೆ ಆಸಲಿದೆ ನಿರ್ಲಕ್ಷ್ಯ ವಹಿಸಿದ ಪೊಲೀಸ್‌ ಅಧಿಕಾರಿಗೆ ಮಹಿಳೆ ಸರಿಯಾಗಿಯೇ ಮಂಗಳಾರತಿ ಮಾಡಿದ್ದಾರೆ.

ಇದನ್ನೂ ಓದಿ: BJP Manifesto: ʻಮೋದಿ ಗ್ಯಾರಂಟಿʼ ಹೆಸರಿನ ಬಿಜೆಪಿ ಪ್ರಣಾಳಿಕೆ ಬಿಡುಗಡೆ.. ಲೋಕ ಅಖಾಡಕ್ಕೆ ʻಸಂಕಲ್ಪ ಪತ್ರʼದ ತಂತ್ರ !

ಮಧ್ಯಪ್ರದೇಶದಲ್ಲಿ ಹಲವು ದಿನಗಳಿಂದ FIR ದಾಖಲಿಸದೇ ಸತಾಯಿಸುತ್ತಿದ್ದ ಪೊಲೀಸ್‌ ಅಧಿಕಾರಿಗೆ ಅನುರಾಧಾ ಸೋನಿ ಎಂಬುವರು ಆರತಿ ಎತ್ತಿ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಮಧ್ಯಪ್ರದೇಶದ ರೇವಾದಲ್ಲಿ ಅನುರಾಧಾ ಸೋನಿಯವರ ಕುಟುಂಬಸ್ಥರು ಕಳೆದ 26 ದಿನಗಳಿಂದ ಪ್ರತಿದಿನ ತಮ್ಮ ಸಮಸ್ಯೆ ಬಗ್ಗೆ FIR ದಾಖಲಿಸಿಕೊಂಡು ನ್ಯಾಯ ಕೊಡಿಸುವಂತೆ ಪೊಲೀಸ್‌ ಠಾಣೆಗೆ ಅಲೆದು ಅಲೆದು ಸುಸ್ತಾಗಿದೆ. ಆದರೆ ಪೊಲೀಸ್‌ ಅಧಿಕಾರಿ ಇದಕ್ಕೆ ಯಾವುದೇ ರೀತಿ ಸೊಪ್ಪು ಹಾಕದೆ ನಿರ್ಲಕ್ಷ್ಯ ವಹಿಸಿದ್ದಾನೆ. 

ಇದನ್ನೂ ಓದಿ: CM Jagan injured : ಆಂಧ್ರ ಸಿಎಂ ಮೇಲೆ ಕಲ್ಲು ತೂರಾಟ..! ಜಗನ್‌ ಕಣ್ಣಿಗೆ ತೀವ್ರ ಗಾಯ..

ಪೊಲೀಸ್‌ ಅಧಿಕಾರಿಯ ಈ ನಿರ್ಲಕ್ಷ್ಯದಿಂದ ಆಕ್ರೋಶಗೊಂಡ ಅನುರಾಧಾ ಸೋನಿ ತನ್ನ ಪತಿ ಮತ್ತು ಇಬ್ಬರು ಪುಟ್ಟ ಮಕ್ಕಳದೊಂದಿಗೆ ಠಾಣೆಗೆ ಆಗಮಿಸಿ, ಅಧಿಕಾರಿಗೆ ಆರತಿ ಬೆಳಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಖಾಕಿಪಡೆಗೆ ನೆಟಿಜನ್ಸ್‌ ಛೀಮಾರಿ ಹಾಕಿದ್ದಾರೆ. 

ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News