ಹೀಮಾಚಲ ಪ್ರದೇಶ: ಪ್ರವಾಸಿಗರ ಸ್ವರ್ಗ ಹೀಮಾಚಲ ಪ್ರದೇಶವು ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ತತ್ತರಿಸಿ ಹೋಗಿದೆ. ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹಕ್ಕೆ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಭೂಕುಸಿತ ಪರಿಣಾಮ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹೀಮಾಚಲದಲ್ಲಿ ಪ್ರಕೃತಿ ಸೃಷ್ಟಿಸಿರುವ ಜಲಪ್ರಳಯದಿಂದ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗುತ್ತದೆ.
ಭಾರೀ ಮಳೆ ಮತ್ತು ಭೂಕುಸಿತದಿಂದ ಅಪಾರಪ್ರಮಾಣದ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದ್ದು, ಹಿಮಾಚಲ ಪ್ರದೇಶವು ಭಯಾನಕ ದೃಶ್ಯಗಳಿಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮಳೆಯು ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಅನೇಕರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಯಾನಕ ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಮತ್ತೊಂದು ಭೀಕರ ಭೂಕುಸಿತದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: Manipur Violence : ಮೋದಿ ತುಟಿ ಬಿಚ್ಚಲು ಅತ್ಯಂತ ಹೇಯ ಕೃತ್ಯವೇ ನಡೆಯಬೇಕಾಯಿತು-ಕಾಂಗ್ರೆಸ್
A narrow escape for JCB drivers and other persons as Big boulders fell down on 7 mile
17th July 2023
Mandi , Himachal Pradesh pic.twitter.com/ncAK9699pm— Weatherman Shubham (@shubhamtorres09) July 17, 2023
ಭೂಕುಸಿತದ ಅವಶೇಷಗಳನ್ನು ತೆರವು ಮಾಡುವಾಗಲೇ ಭೀಕರ ದುರಂತ ಸಂಭವಿಸಿದ್ದು, ಜೆಸಿಬಿ ಮೇಲೆ ಬೃಹತ್ ಬಂಡೆ ಉರುಳಿಬಿದ್ದಿದೆ. ಈ ವಿಡಿಯೋ ನೋಡಲು ತುಂಬಾ ಭಯಾನಕವಾಗಿದೆ. ಘಟನೆಯಲ್ಲಿ ಜೆಸಿಬಿ ಚಾಲಕ ಮತ್ತು ಹಲವಾರು ಕಾರ್ಮಿಕರು ಬೆಟ್ಟದಿಂದ ಕೆಳಗೆ ಉರುಳುತ್ತಿರುವ ಬಂಡೆಗಳಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಮಳೆಯ ಅನಾಹುತದಿಂದ ಚಂಡೀಗಢ-ಮನಾಲಿ ಹೆದ್ದಾರಿಯನ್ನು ಮಂಡಿ ಮತ್ತು ಕುಲು ನಡುವಿನ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಂಚಾರಕ್ಕಾಗಿ ರಸ್ತೆಯನ್ನು ಮರುಸ್ಥಾಪಿಸಿದರೂ, ಇದು ಕೇವಲ 6 ಮೈಲುಗಳಷ್ಟು ವ್ಯಾಪಿಸಿರುವ ರಸ್ತೆ ಕಿರಿದಾಗಿದೆ. ಹಾನಿಗೊಳಗಾದ ರಸ್ತೆಯನ್ನು ಸರಿಪಡಿಸಲು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಜೆಸಿಬಿ ಮೇಲೆ ಬಂಡೆಗಳು ಉರುಳಿಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಕಾರ್ಮಿಕರು ಜೀವ ಉಳಿಸಿಕೊಂಡು ಪಾರಾಗಿದ್ದಾರೆ.
ಇದನ್ನೂ ಓದಿ: ಜ್ಞಾನವ್ಯಾಪಿ ಮಸೀದಿ ಪ್ರಕರಣ, ASI ಸಮೀಕ್ಷೆಗೆ ಅನುಮತಿ ನೀಡಿದ ವಾರಣಾಸಿ ನ್ಯಾಯಾಲಯ
ಜೆಸಿಬಿ ಮೇಲೆ ದೊಡ್ಡ ಬಂಡೆಯೊಂದು ಬೀಳುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಮಳೆ, ಭೀಕರ ಪ್ರವಾಹ ಮತ್ತು ಭೂಕುಸಿತಿಂದ ಹೀಮಾಚಲ ಪ್ರದೇಶವು ಸಂಕಷ್ಟಕ್ಕೆ ಸಿಲುಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.