'ಶೀಲಾ ಕಿ ಜವಾನಿ...' ಹಾಡಿಗೆ ಟ್ರೈನ್ ನಲ್ಲಿ ಹುಚ್ಚೆದ್ದು ಕುಣಿದ ಲಲನೆಯರು, ರೊಚ್ಚಿಗೆದ್ದ ಜನ ಹೇಳಿದ್ದೇನು ನೀವೇ ನೋಡಿ!

Viral Video: ಇತ್ತೀಚೆಗೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಜನರು ಚಿತ್ರ ವಿಚಿತ್ರ ಸ್ಟಂಟ್ ಗಳನ್ನು ಮಾಡುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ, ಜನರು ರೈಲುಗಳು, ಬಸ್‌ಗಳು ಮತ್ತು ಮೆಟ್ರೋಗಳಲ್ಲಿ ನೃತ್ಯ ಮಾಡುವುದು, ಹಾಡುವುದು, ಜಗಳವಾಡುವುದು ಅಥವಾ ಅಶ್ಲೀಲ ಕೃತ್ಯಗಳನ್ನು ಮಾಡುವುದನ್ನು ನೋಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ರೈಲಿನಲ್ಲಿ ನೃತ್ಯ ಮಾಡುವ ಹೊಸ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಅಂತಹದ್ದೇ ಮತ್ತೊಂದು ಕ್ಲಿಪ್ ಹೊರಬಿದ್ದಿದ್ದು, ಇದರಲ್ಲಿ ಗರ್ಲ್ ಗ್ಯಾಂಗ್ ಸುಪ್ರಸಿದ್ಧ ಶೀಲಾ ಕೀ ಜವಾನಿಗೆ ತಮ್ಮ ನಡು ಬಲಕುಸುತ್ತಿರುವುದು ಕಂಡುಬಂದಿದೆ . (Viral News In Kannada)

Written by - Nitin Tabib | Last Updated : Dec 4, 2023, 05:53 PM IST
  • ಆದರೆ, ಹುಡುಗಿಯರು ಈ ರೀತಿ ನೃತ್ಯ ಮಾಡುತ್ತಿರುವುದು ಇದೇ ಮೊದಲಲ್ಲ.
  • ಇದಕ್ಕೂ ಮುನ್ನ ರೈಲಿನಲ್ಲಿ ಹುಡುಗಿಯರು ಡ್ಯಾನ್ಸ್ ಮಾಡಿರುವ ಹಲವು ವಿಡಿಯೋಗಳು ವೈರಲ್ ಆಗಿವೆ.
  • ಆದರೆ, ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ.
'ಶೀಲಾ ಕಿ ಜವಾನಿ...' ಹಾಡಿಗೆ ಟ್ರೈನ್ ನಲ್ಲಿ ಹುಚ್ಚೆದ್ದು ಕುಣಿದ ಲಲನೆಯರು, ರೊಚ್ಚಿಗೆದ್ದ ಜನ ಹೇಳಿದ್ದೇನು ನೀವೇ ನೋಡಿ! title=

ನವದೆಹಲಿ: ಇಂಟರ್ನೆಟ್ ನಲ್ಲಿ ನಿತ್ಯ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇವುಗಳಲ್ಲಿ ಬಹುತೇಕ ವಿಡಿಯೋಗಳು ನಿಮ್ಮನ್ನು ನಗುವಂತೆ ಮಾಡುತ್ತದೆ, ಕೆಲವು ಅಳುವಂತೆ ಮಾಡುತ್ತವೆ ಮತ್ತು ಕೆಲವು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಇದುವರೆಗೆ ನೀವು ದೆಹಲಿ ಮೆಟ್ರೋದ ಅನೇಕ ಕ್ಲಿಪ್‌ಗಳನ್ನು ನೋಡಿರಬಹುದು, ಇವುಗಳಲ್ಲಿ ಹುಡುಗಿಯರು ನೃತ್ಯ, ಅಶ್ಲೀಲ ಕೃತ್ಯ ಮಾಡುತ್ತಿರುವುದನ್ನು ನೀವು ನೋಡಿರಬಹುದು. ಈ ರೀತಿಯ ಟ್ರೆಂಡ್ ಇದೀಗ ಭಾರತೀಯ ರೈಲ್ವೆಯಲ್ಲಿ ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ, ಇನ್ಸ್ಟಾಗ್ರಾಮ್ ನಲ್ಲಿ ಪ್ರತ್ಯಕ್ಷಗೊಂಡ ವಿಡಿಯೋವೊಂದನ್ನು ಹೆಚ್ಚು ವೀಕ್ಷಿಸಲಾಗುತ್ತಿದೆ, ಇದರಲ್ಲಿ ಹುಡುಗಿಯರ ಗುಂಪೊಂದು ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಉತ್ಸಾಹದಿಂದ ನೃತ್ಯ ಮಾಡುತ್ತಿದೆ.(Viral News In Kannada)

ಶೀಲಾ ಕೀ ಜವಾನೀ ಹಾಡಿಗೆ ನಡು ಬಳುಕಿಸಿದ ಲಲನೆಯರು
ವೈರಲ್ ಕ್ಲಿಪ್ ಅನ್ನು ಇನ್ಸ್ಟಾಗ್ರಾಮ್  ನಲ್ಲಿ (@bomb_fire_india) ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇದರ ಜೊತೆಗೆ ಟ್ರೆಂಡಿಂಗ್ ಎಂಬ ಶೀರ್ಷಿಕೆಯನ್ನು ಅದಕ್ಕೆ ನೀಡಲಾಗಿದೆ. 4 ದಿನಗಳ ಹಿಂದೆ ಶೇರ್ ಮಾಡಿರುವ ವಿಡಿಯೋದಲ್ಲಿ ಮೇಲಿನ ಮತ್ತು ಕೆಳಗಿನ ಕಂಪಾರ್ಟ್‌ಮೆಂಟ್‌ಗಳಲ್ಲಿ ಒಟ್ಟು 11 ಹುಡುಗಿಯರು ಕುಳಿತಿರುವುದನ್ನು ನೀವು ನೋಡಬಹುದು. ಈ ಮಧ್ಯೆ, ಅವರು 'ತೀಸ್ ಮಾರ್ ಖಾನ್' ಚಿತ್ರದ ಪ್ರಸಿದ್ಧ ಹಾಡು 'ಶೀಲಾ ಕಿ ಜವಾನಿ' ಗೆ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಒಂದೊಂದು ಕ್ಯಾಮೆರಾ ಎಲ್ಲರ ಮೂವ್ಸ್ ಗಳನ್ನು ತೋರಿಸುತ್ತಿದೆ.

ಇದನ್ನೂ ಓದಿ-ಭೋಜ್ಪುರಿ ಹಾಡಿಗೆ ಆಂಟಿ ಮೈಬಳುಕಿಸಿದ ರೀತಿ ನೋಡಿದ್ರೆ ರಾತ್ರಿ ನಿದ್ದೆಗೆ ಬೆಂಕಿ ಬೀಳೋದು ಗ್ಯಾರಂಟಿ!

ಆಕ್ರೋಶಗೊಂಡ ಜನ!
ಆದರೆ, ಹುಡುಗಿಯರು ಈ ರೀತಿ ನೃತ್ಯ ಮಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ರೈಲಿನಲ್ಲಿ ಹುಡುಗಿಯರು ಡ್ಯಾನ್ಸ್ ಮಾಡಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಆದರೆ, ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇದಲ್ಲದೇ ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಹುಡುಗಿಯರ ನೃತ್ಯವನ್ನು ಹೊಗಳುತ್ತಿದ್ದರೆ, ಇತರರು ಇದೊಂದು ಬಾಲಿಶ ಮತ್ತು ಚೀಫ್ ಆಕ್ಟ್ ಎಂದು ಕರೆಯುತ್ತಿದ್ದಾರೆ.

ಇದನ್ನೂ ಓದಿ-ಮೊದಲು ತಬ್ಬಿಕೊಂಡ್ಲು ನಂತರ ಬಾಯ್ ಫ್ರೆಂಡ್ ನನ್ನು ಬಿಟ್ಟುಹೋದ ಹುಡುಗಿ, ಹುಡುಗ ಮಾಡಿದ್ದೇನು?... ವಿಡಿಯೋ ನೋಡಿ!

ಇದನ್ನೆಲ್ಲಾ ಮಾಡುವ ಮೂಲಕ ಹುಡುಗಿಯರು ರೈಲಿನಲ್ಲಿ ಅಶ್ಲೀಲತೆಯನ್ನು ಹರಡುತ್ತಿದ್ದಾರೆ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ. ಇದೇ ವೇಳೆ, ಸ್ನೇಹಿತರು ನಮ್ಮೊಂದಿಗೆ ಇದ್ದಾಗ ರೈಲು ಪ್ರಯಾಣವು ಹೆಚ್ಚು ಆಹ್ಲಾದಕರವಾಗಿರುತ್ತದೆ ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ನಿಮಗೆ ಈ ವಿಡಿಯೋ ಹೇಗೆ ಅನ್ನಿಸಿದೆ ಎಂಬುದನ್ನು ಕಾಮೆಂಟ್ ವಿಭಾಗದಲ್ಲಿ ಹೇಳಿ. 

ವೈರಲ್ ವಿಡಿಯೋ ಇಲ್ಲಿದೆ ನೋಡಿ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News