Viral Video: ಅಂದು ಓದಿದ್ದ ʼಬಾಯಾರಿದ ಕಾಗೆ' ಕಥೆ ಇಂದು ನಿಜವಾಯ್ತಾ..!

Viral Video: ದಕ್ಷಿಣ ಚೀನಾದಲ್ಲಿ  ಬಾಯಾರಿದ ಕಾಗೆಯು ಬೆಣಚುಕಲ್ಲುಗಳನ್ನು ಎತ್ತಿಕೊಂಡು ಬಾಟಲಿಗೆ ಹಾಕಿ ನೀರು ಕುಡಿದಿರುವುದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಪೀಪಲ್ಸ್ ಡೈಲಿ ಎಂಬ ಪುಟವು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ

Written by - Zee Kannada News Desk | Last Updated : Mar 4, 2023, 11:39 AM IST
  • ʼಬಾಯಾರಿದ ಕಾಗೆ' ಕಥೆ ಇಂದು ನಿಜವಾಗಿದೆ
  • ದಕ್ಷಿಣ ಚೀನಾದಲ್ಲಿ ಬಾಯಾರಿದ ಕಾಗೆಯು ನೀತಿ ಕಥೆಯಂತೆ ನೀರು ಕುಡಿಯುವುದು ಆನ್‌ಲೈನ್‌ನಲ್ಲಿ ವೈರಲ್
  • 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ
Viral Video: ಅಂದು ಓದಿದ್ದ ʼಬಾಯಾರಿದ ಕಾಗೆ' ಕಥೆ ಇಂದು ನಿಜವಾಯ್ತಾ..! title=

Viral Video:ನಮ್ಮ  ಬಾಲ್ಯದಲ್ಲಿ ಎಲ್ಲರೂ ಒಂದೊಂದು ನೀತಿ ಕಥೆಗಳನ್ನು ಓದಿರುತ್ತೀವಿ ಕಾಗಕ್ಕ -ಗೂಬ್ಬಕ್ಕ, ದಾಕ್ಷಿ ಗೊಂಚಲಿಗಿ ಕಾದುಕುಂತ ನರಿ, ಆಮೆ ಮೊಲದ ಓಟದ ಸ್ವರ್ಧೆ, ಹೀಗೆ ಅನೇಕ ಕಥೆಗಳನ್ನು  ಓದಿದ್ದೇವೆ ಆದರೆ  ʼಬಾಯಾರಿದ ಕಾಗೆ ಕಥೆ ಯಾರಿಗಾದರೂ ನೆನಪಿದಿಯಾ.. ಕಾಗೆ ಕಥೆಯನ್ನು ಹೆಚ್ಚಿನವರು ಮೆರೆತ್ತಿರಬಹುದು.. ಲೇಖನದ ಮೂಲಕ ಮತ್ತೆ ಆ ಕಥೆ ನೆನಪಿಸೋಣ..

ಸಣ್ಣ ಒಂದು  ಹಳ್ಳಿ ತೀರದಲ್ಲಿ ತುಂಬಾ ಬಾಯಾರಿಕೆಯಾದ ಕಾಗೆಗೆ ಹೂಜಿ ಒಳಗೆ ನೀರು ಇರುವುದು ಕಾಣುತ್ತದೆ ಆದರೆ ಅದನ್ನು ಕುಡಿಯಲೇ   ಬೇಕೇನುವಷ್ಟು ಕಾಗೆಗೆ ಬಾಯಾರಿಕೆಯಾಗಿರುತ್ತದೆ. ಆ ನೀರನ್ನು ಬಿಟ್ಟು ಹೋದರೆ ಮುಂದೆ ಸಿಗುತ್ತದೆ ಇಲ್ಲವೇ ಎಂಬ ಭಯ ಕಾಗೆಗೆ ಇತ್ತು. ಹೂಜಿ ನೀರು ಕುಡಿಯಲೇಬೇಕೆಂದು ನಿರ್ಧರಿಸಿ ಹೂಜಿಯಲ್ಲಿನ ನೀರು ಕುಡಿಯುವ ಪ್ರಯತ್ನ ಮಾಡಿತ್ತು. ಆದರೆ  ನೀರು ಎಟುಕುತ್ತಿರಲಿಲ್ಲ..

ಇದನ್ನೂ ಓದಿ: ನೀವು ಈ ಹಳ್ಳಿಗೆ ಹೋದ್ರೆ ʼಬೆತ್ತಲಾಗಿ ತಿರುಗಾಡ್ಬೇಕುʼ..! ಇಲ್ಲವೇ ಪ್ರವೇಶಕ್ಕೆ ʼಅನುಮತಿ ಇಲ್ಲ..ʼ

ಆ ಕಾರಣದಿಂದ ಕಾಗೆ ತನ್ನ ಬುದ್ಧಿ ಉಪಯೋಗಿಸಿ ಅಲ್ಲೇ ಇದ್ದ ಸಣ್ಣ ಕಲ್ಲುಗಳನ್ನು ನೀರಿನ ಬಾಟಲಿಯೊಳಗೆ ಹಾಕಿ ಬಾಟಲಿಯಲ್ಲಿನ ನೀರು ಸಣ್ಣ ಕಲ್ಲುಗಳು ನೀರಿನಲ್ಲಿ ಮುಳುಗುತ್ತಿದ್ದಂತೆ ನೀರುಮೇಲೆ  ಬರ ತೊಡಗಿತು. ಕಾಗೆಯು ಹೊಟ್ಟೆ ತುಂಬುವಷ್ಟು ನೀರು ಕುಡಿದು ಅಲ್ಲಿಂದ ಹೊರಡಿತು. ಈ ಕಥೆಯಿಂದ ನೀತಿ ಎನ್ನಪ್ಪ ಅಂದ್ರೆ ಬೇಕಾಗಿದನ್ನು ಪಡೆಯ ಬೇಕಾದರೆ ಎಷ್ಟೇ ಕಷ್ಟ ಬಂದರೂ ಎದುರಿಸಬೇಕು ಎಂಬುವುದಾಗಿದೆ..    

ಬಾಯಾರಿದ ಕಾಗೆ' ಕಥೆ ಈಗೇಕೆ ಎಂದು ಯೋಚಿಸುತ್ತಿರಬಹುದು ಅದೇನೆಂದು ನೀವೆ ನೋಡಿ...

ದಕ್ಷಿಣ ಚೀನಾದಲ್ಲಿ  ಬಾಯಾರಿದ ಕಾಗೆಯು ಬೆಣಚುಕಲ್ಲುಗಳನ್ನು ಎತ್ತಿಕೊಂಡು ಬಾಟಲಿಗೆ ಹಾಕಿ   ನೀರು ಕುಡಿದಿರುವುದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಪೀಪಲ್ಸ್ ಡೈಲಿ ಎಂಬ ಪುಟವು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ ಮತ್ತು ಇದು ಸುಮಾರು 20,000 ವೀಕ್ಷಣೆಗಳನ್ನು  ಪಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.ಹೆಚ್ಚಿನ ಮಂದಿ ಮತ್ತೆ ʼಬಾಲ್ಯದ ಶಾಲಾದಿನಗಳನ್ನು ನೆನಪಿಸಿದೆʼ  ʼಬುದ್ಧಿವಂತ ಕಾಗೆʼ ಹೀಗೆ ಅನೇಕ ರೀತಿಯ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. "ದಿ ಕ್ರೌ ಅಂಡ್ ದಿ ಪಿಚರ್" ಎಂಬ ಶೀರ್ಷಿಕೆ ಹೊಂದಿದ್ದು , ಈ ಮೂಲಕ ನೀತಿಕಥೆಯು ಮರು ಜೀವ ಪಡೆದುಕೊಂಡಿದೆ  ಎಂಬುವುದು ವೈರಲ್‌ ವೀಡಿಯೋದಿಂದ ತಿಳಿದು ಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News