Viral Video : ಅನೇಕ ಬಾರಿ ಇಂತಹ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಅದು ಯೋಚಿಸಲೂ ಕಷ್ಟವಾಗುತ್ತದೆ. ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಇಂತಹದ್ದೊಂದು ವಿಡಿಯೋ ಇದೀಗ ಹೊರಬಿದ್ದಿದೆ. ಇದರಲ್ಲಿ, ಒಬ್ಬ ಹುಡುಗ ತನ್ನ ನೆಚ್ಚಿನ ಹುಡುಗಿಯನ್ನು ತುಂಬಿದ ತರಗತಿಯಲ್ಲಿ ಪ್ರಪೋಸ್ ಮಾಡಲು ಪ್ರಾರಂಭಿಸಿದ. ತರಗತಿಯಲ್ಲಿ ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳು ಬಹಳ ಕುತೂಹಲದಿಂದ ಹುಡುಗನನ್ನು ವೀಕ್ಷಿಸುತ್ತಿದ್ದಾರೆ. ಹುಡುಗಿ ಕೂಡ ತಡಮಾಡದೆ ಅವನ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾಳೆ.
ಇದನ್ನೂ ಓದಿ : Watch: ಮುದ್ದಾದ ನಾಯಿ ಮರಿ ಜೊತೆ ಪುಟಾಣಿ ಬಾತುಕೋಳಿಗಳ ಆಟ.. ಇದೆಂದಥಾ ಒಡನಾಟ.!
ವಿಡಿಯೋ ನೋಡಿದ್ರೆ ಹುಡುಗನಿಗೆ ತನ್ನ ಕ್ಲಾಸಿನ ಹುಡುಗಿಯೆಂದರೆ ತುಂಬಾ ಇಷ್ಟವಿರುವಂತೆ ಕಾಣುತ್ತದೆ. ಅವನು ತನ್ನ ಕೈಯಲ್ಲಿ ಹೂವುಗಳನ್ನು ಹಿಡಿದು ಹುಡುಗಿಗೆ ಪ್ರಪೋಸ್ ಮಾಡಿದ್ದಾನೆ. ಅವನು ಹುಡುಗಿಯ ಮುಂದೆ ತನ್ನ ಮೊಣಕಾಲುಗಳ ಮೇಲೆ ಕುಳಿತು, ಅವಳಿಗೆ ಪ್ರಪೋಸ್ ಮಾಡುತ್ತಾನೆ. ಹುಡುಗಿ ಕೂಡ ತಡಮಾಡದೆ ಅವನ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾಳೆ. ಅವನನ್ನು ಎದ್ದೇಳಲು ಸೂಚಿಸುತ್ತಾಳೆ. ಹುಡುಗಿ ಸಹ ಅವನಿಗೆ ಉಡುಗೊರೆಯನ್ನು ತಂದಿದ್ದಳು.
ತರಗತಿಯಲ್ಲಿಯೇ ಹುಡುಗ ಹುಡುಗಿಗೆ ಪ್ರಪೋಸ್ ಮಾಡಿದ ರೀತಿಯನ್ನು ನೋಡಿ ತರಗತಿಯಲ್ಲಿದ್ದ ವಿದ್ಯಾರ್ಥಿಗಳೆಲ್ಲ ನಗುತ್ತಾ ನೋಡುತ್ತಲೇ ಇರುತ್ತಾರೆ. ಈ ವಿಡಿಯೋ ನೋಡಿದ ನೆಟಿಜನ್ಗಳು ಕಾಮೆಂಟ್ ಬಾಕ್ಸ್ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ : Bull Fight Video: ನಡು ರಸ್ತೆಯಲ್ಲೇ ನಡೆಯಿತು ಗೂಳಿಗಳ ನಡುವೆ ಭಾರೀ ಕಾಳಗ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.