ಪಾಕ್ ವೀಸಾ ಕಚೇರಿಯ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರಸಾರ.. ವಿಡಿಯೋ ವೈರಲ್!

Viral Video: ಪಾಕಿಸ್ತಾನದ ಕರಾಚಿಯಲ್ಲಿರುವ ವೀಸಾ ಕಚೇರಿಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದ್ದು, ಅದನ್ನು ಕಂಡು ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ, ಹೌದು ಅಲ್ಲಿ ಅಳವಡಿಸಲಾದ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರಸಾರಗೊಂಡಿದೆ. ಬಹಳ ಹೊತ್ತಿನವರೆಗೆ ಅದು ಸಿಬ್ಬಂದಿಗಳ ಗಮನಕ್ಕೆ ಬಂದಿರಲಿಲ್ಲ, ಸಿಬ್ಬಂದಿಗಳ ಗಮನಕ್ಕೆ ಬಂದಾಗ ಅದನ್ನು ಸ್ವೀಚ್ ಆಫ್ ಮಾಡಲಾಗಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. (Viral News In Kannada)

Written by - Nitin Tabib | Last Updated : Nov 25, 2023, 03:27 PM IST
  • ಈ ವರ್ಷದ ಮಾರ್ಚ್‌ನಲ್ಲಿ ಬಿಹಾರದ ರಾಜಧಾನಿ ಪಾಟ್ನಾದ ರೈಲ್ವೆ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ,
  • ರೈಲು ವೇಳಾಪಟ್ಟಿಯನ್ನು ಘೋಷಿಸಲು ಇನ್ಸ್ಟಾಲ್ ಮಾಡಲಾದ ಟಿವಿ ಪರದೆಯಲ್ಲಿ
  • ಇದ್ದಕ್ಕಿದ್ದಂತೆ ವಯಸ್ಕ ಚಲನಚಿತ್ರವು ಪ್ಲೇ ಆಗಲು ಆರಂಭಿಸಿತ್ತು. ಈ ದೃಶ್ಯ ಕಂಡು ಪ್ರಯಾಣಿಕರು ಬೆಚ್ಚಿಬಿದ್ದರು.
ಪಾಕ್ ವೀಸಾ ಕಚೇರಿಯ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರಸಾರ.. ವಿಡಿಯೋ ವೈರಲ್! title=

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಯುಕೆ ವೀಸಾ ಕಚೇರಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಅಳವಡಿಸಲಾಗಿದ್ದ ಟಿವಿ ಪರದೆಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರವೊಂದು ಪ್ಲೇ ಆಗಿದೆ, ಸರತಿ ಸಾಲಿನಲ್ಲಿ ನಿಂತಿದ್ದವರು ಅದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ವೇಳೆ ಯಾರೋ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಇದೀಗ ಇಂಟರ್‌ನೆಟ್‌ನಲ್ಲಿ ವಿಡಿಯೋ ವೈರಲ್ ಆಗಿದೆ. ಆದರೆ, ಭದ್ರತಾ ಸಿಬ್ಬಂದಿ ಗಮನಿಸಿದ ಕೂಡಲೇ ಟಿವಿಯನ್ನು ಸ್ವಿಚ್ ಆಫ್ ಮಾಡಲಾಗಿದೆ.

ಇದನ್ನೂ ಓದಿ-ಸಾರಾಯಿ ಕುಡಿದು ಫುಲ್ ಟಲ್ಲಿಯಾದ ನಾಯಿ, ನಂತರ ಏನ್ ಮಾಡಿದೆ ನೀವೇ ನೋಡಿ!

ಅಹ್ಮರ್ ಖಾನ್ ಎಂಬ ಬಳಕೆದಾರರು ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ನಾವು ನಮ್ಮ ದಾಖಲೆಗಳೊಂದಿಗೆ ಸರದಿಯಲ್ಲಿ ನಿಂತಿದ್ದೆವು, ಆಗ ಅಲ್ಲಿ ಅಳವಡಿಸಲಾಗಿದ್ದ ಟಿವಿಯಲ್ಲಿ ಅಶ್ಲೀಲ ಚಲನಚಿತ್ರವು ಪ್ಲೇ ಆಗಲು ಆರಂಭಿಸಿದೆ. ಮಹಿಳೆಯರು, ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರ ಸಮ್ಮುಖದಲ್ಲಿ ಅಶ್ಲೀಲ ಚಿತ್ರ ಬಹಳ ಹೊತ್ತು ಮುಂದುವರಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಸಂದರ್ಭದಲ್ಲಿ, ಕೆಲವರು ನಾಚಿಕೆಯಿಂದ ದೂರ ಹೋಗಲಾರಂಭಿಸಿದರೆ. ನಂತರ ಹೇಗೋ ಅವಸರದಲ್ಲಿ ಟಿವಿ ಸ್ವಿಚ್ ಆಫ್ ಆಗಿದೆ. ಇದೀಗ ಈ ವೈರಲ್ ವಿಡಿಯೋ ಕ್ಲಿಪ್ ಬಗ್ಗೆ ಜನ ಇಂಟರ್‌ನೆಟ್‌ನಲ್ಲಿ ಭಾರಿ ಚರ್ಚೆ ನೆಡೆಸುತ್ತಿದ್ದಾರೆ.

ಇದನ್ನೂ ಓದಿ-'ನನ್ನನ್ನು ಕಿಡ್ನ್ಯಾಪ್ ಮಾಡಲಾಗಿದೆ...' ವಿಮಾನದಲ್ಲಿ ಆಕಸ್ಮಿಕವಾಗಿ ಕಿರುಚಲಾರಂಭಿಸಿದ ಮಹಿಳೆ... ವಿಡಿಯೋ ನೋಡಿ!

ಪಾಟ್ನಾ ನಿಲ್ದಾಣದಲ್ಲಿ ಪೋರ್ನ್ ಕ್ಲಿಪ್ ಪ್ಲೇ ಘಟನೆ
ಈ ವರ್ಷದ ಮಾರ್ಚ್‌ನಲ್ಲಿ ಬಿಹಾರದ ರಾಜಧಾನಿ ಪಾಟ್ನಾದ ರೈಲ್ವೆ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ, ರೈಲು ವೇಳಾಪಟ್ಟಿಯನ್ನು ಘೋಷಿಸಲು ಇನ್ಸ್ಟಾಲ್ ಮಾಡಲಾದ ಟಿವಿ ಪರದೆಯಲ್ಲಿ ಇದ್ದಕ್ಕಿದ್ದಂತೆ ವಯಸ್ಕ ಚಲನಚಿತ್ರವು ಪ್ಲೇ ಆಗಲು ಆರಂಭಿಸಿತ್ತು. ಈ ದೃಶ್ಯ ಕಂಡು ಪ್ರಯಾಣಿಕರು ಬೆಚ್ಚಿಬಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಭಾರೀ ಕೋಲಾಹಲ ಉಂಟಾಗಿತ್ತು. ಇದಾದ ಬಳಿಕ ಪೋರ್ನ್ ಸ್ಟಾರ್ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದರು.

ಇಲ್ಲಿದೆ ವಿಡಿಯೋ ನೋಡಿ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News