Viral News: ಇಲ್ಲಿನ ಜನರು ಕೆಲಸಕ್ಕೆ ವಿಮಾನಗಳನ್ನೇ ತೆಗೆದುಕೊಂಡು ಹೋಗುತ್ತಾರೆ..!

ಈ ಪಟ್ಟಣದ ಬೀದಿಗಳು ವಿಶಾಲವಾಗಿದ್ದು, ಪೈಲಟ್‌ಗಳು ಹತ್ತಿರದ ವಿಮಾನ ನಿಲ್ದಾಣಕ್ಕೆ ಹೋಗಲು ಬಳಸಿಕೊಳ್ಳುವಂತೆ ಅವುಗಳನ್ನು ರೂಪಿಸಲಾಗಿದೆ.

Written by - Puttaraj K Alur | Last Updated : May 31, 2022, 04:28 PM IST
  • ಅಮೆರಿಕದ ಈ ಪಟ್ಟಣದ ತುಂಬಾ ವಿಮಾನಗಳದ್ದೇ ಕಾರುಬಾರು
  • ಕ್ಯಾಲಿಫೋರ್ನಿಯಾದ ಕ್ಯಾಮರೂನ್ ಪಾರ್ಕ್‌ನಲ್ಲಿ ಮನೆಗೊಂದು ವಿಮಾನ
  • ಕೆಲಸಕ್ಕೆ ಹೋಗಲು ವಿಮಾನಗಳನ್ನೇ ಬಳಸುತ್ತಾರಂತೆ ಇಲ್ಲಿನ ಜನರು
Viral News: ಇಲ್ಲಿನ ಜನರು ಕೆಲಸಕ್ಕೆ ವಿಮಾನಗಳನ್ನೇ ತೆಗೆದುಕೊಂಡು ಹೋಗುತ್ತಾರೆ..! title=
ಕ್ಯಾಮರೂನ್ ಪಾರ್ಕ್‌ನಲ್ಲಿ ಮನೆಗೊಂದು ವಿಮಾನ

ನವದೆಹಲಿ: ಅಮೆರಿಕದ ಕ್ಯಾಮರೂನ್ ಪಾರ್ಕ್‌ನಲ್ಲಿರುವ ನಿವಾಸಿಗಳು ಸ್ವಂತ ವಿಮಾನಗಳನ್ನು ಹೊಂದಿದ್ದಾರೆ. ಕಾರುಗಳಂತೆ ತಮ್ಮ ಮನೆಯ ಮುಂದೆ ಅವುಗಳನ್ನು ನಿಲ್ಲಿಸುತ್ತಾರಂತೆ. ಹೌದು, ಅಚ್ಚರಿಯಾದರೂ ಇದು ನಿಜ.

ಕ್ಯಾಲಿಫೋರ್ನಿಯಾದ ಕ್ಯಾಮರೂನ್ ಪಾರ್ಕ್‌ನಲ್ಲಿ ವಾಸಿಸುವ ಜನರು ಕೆಲಸಕ್ಕೆ ಹೋಗಲು ವಿಮಾನಗಳನ್ನೇ ಬಳಸುತ್ತಾರಂತೆ. ಈ ಪಟ್ಟಣದ ತುಂಬಾ ವಿಮಾನಗಳದ್ದೇ ಕಾರುಬಾರು. ಕಾರುಗಳಂತೆ ಇಲ್ಲಿನ ಜನರು ವಿಮಾನಗಳನ್ನು ಬಳಸುತ್ತಾರೆ. ಈ ಬಗ್ಗೆ ಒಂದು ವಿಡಿಯೋ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಜಗತ್ರ್ಪಸಿದ್ದ ಮೋನಾಲಿಸಾ ಚಿತ್ರವನ್ನು ವಿರೂಪಗೊಳಿಸಿದ ಭೂಪ...! ಮ್ಯೂಸಿಯಂನಲ್ಲಿ ಆಗಿದ್ದೇನು

ಕ್ಯಾಮರೂನ್‌ ಏರ್‌ಪಾರ್ಕ್‌ ನಿರ್ಮಾಣವಾಗಿದ್ದು ಹೇಗೆ..?

ಅದು 2ನೇ ವಿಶ್ವ ಮಹಾಯುದ್ಧದ ನಂತರದ ಕಾಲಘಟ್ಟ. ಅಮೆರಿಕದಲ್ಲಿ ಅನೇಕ ವಿಮಾನ ನಿಲ್ದಾಣಗಳು ಹಾಗೆಯೇ ಉಳಿದಿದ್ದವು. ಪೈಲಟ್‌ಗಳ ಸಂಖ್ಯೆ 1939ರಲ್ಲಿ 34 ಸಾವಿರ ಇದ್ದದ್ದು 1946ಕ್ಕೆ 4 ಲಕ್ಷ ಆಗಿತ್ತು. ಹೀಗಾಗಿ ಇಲ್ಲಿನ ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶದಾದ್ಯಂತ ವಸತಿ ವಾಯುನೆಲೆ ಸ್ಥಾಪಿಸಲು ಮುಂದಾಯಿತು. ಇದರಿಂದ ನಿಷ್ಕ್ರಿಯಗೊಂಡ ಸೇನಾ ಲೇನ್‌ಗಳು, ನಿವೃತ್ತ ಸೇನಾ ಪೈಲಟ್‌ಗಳಿಗೆ ಅವಕಾಶ ಸಿಕ್ಕಿತು. ಕ್ಯಾಲಿಫೋರ್ನಿಯಾದ ಕ್ಯಾಮರೂನ್ ಏರ್‌ಪಾರ್ಕ್‌ ಹೀಗೆ ನಿರ್ಮಾಣವಾಯಿತಂತೆ. ಗ್ಯಾರೇಜ್‌ಗಳಲ್ಲಿ ಕಾರುಗಳನ್ನು ಇರಿಸುವಂತೆಯೇ ಇಲ್ಲಿನ ನಿವಾಸಿಗಳು ವಿಮಾನಗಳನ್ನು ತಮ್ಮ ಮನೆಯ ಮುಂಭಾಗದ ಖಾಲಿ ಜಾಗದಲ್ಲಿ ನಿಲ್ಲಿಸುತ್ತಾರಂತೆ.   

ಇದನ್ನೂ ಓದಿ: ಬೆಂಕಿಯುಂಡೆ ಸಿಡಿತಿದ್ರೂ ಚಿಪ್ಸ್‌ ಎಂಜಾಯ್‌ ಮಾಡ್ತಿದ್ದಾನೆ ಈ ಸೈನಿಕ!

ಈ ಪಟ್ಟಣದ ಬೀದಿಗಳು ವಿಶಾಲವಾಗಿದ್ದು, ಪೈಲಟ್‌ಗಳು ಹತ್ತಿರದ ವಿಮಾನ ನಿಲ್ದಾಣಕ್ಕೆ ಹೋಗಲು ಬಳಸಿಕೊಳ್ಳುವಂತೆ ಅವುಗಳನ್ನು ರೂಪಿಸಲಾಗಿದೆ. ಇಲ್ಲಿನ ಪ್ರತಿಯೊಂದು ರಸ್ತೆಯೂ ದೊಡ್ಡದಾಗಿದ್ದು, ವಿಮಾನ ಮತ್ತು ಕಾರುಗಳು ಸುಲಭ ಮತ್ತು ಸುರಕ್ಷಿತವಾಗಿ ಸಂಚರಿಸಬಹುದಾಗಿದೆ.  

ಇಲ್ಲಿ ವಾಸಿಸುವ ಬಹುತೇಕ ಜನರ ಬಳಿ ವಿಮಾನವಿದ್ದು, ಕೆಲಸಕ್ಕೆ ಕಾರುಗಳ ಬದಲು ಹೆಚ್ಚಾಗಿ ವಿಮಾನವನ್ನೇ ಬಳಸಲಾಗುತ್ತದೆ. ವರದಿಗಳ ಪ್ರಕಾರ ಪ್ರಪಂಚದಲ್ಲಿ 630ಕ್ಕೂ ಹೆಚ್ಚು ವಸತಿ ಏರ್‌ಪಾರ್ಕ್‌ಗಳಿದ್ದು, ಈ ಪೈಕಿ 610ಕ್ಕೂ ಹೆಚ್ಚು ಅಮೆರಿಕದಲ್ಲಿವೆಯಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News