Viral News: SSLC ಪರೀಕ್ಷೆಯಲ್ಲಿ ಪಾಸ್ ಆಗಿದ್ದಕ್ಕೆ ಈ ಯುವಕ ಏನು ಮಾಡಿದ್ದಾನೆ ಗೊತ್ತಾ?

ಅಂಗಡಿಕಲ್ ಮೂಲದ ಕುಂಜಕ್ಕು ಅಲಿಯಾಸ್ ಜಿಷ್ಣು SSLC ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ತನಗೇ ತಾನೇ ಶುಭಾಶಯ ಕೋರಿ ಫ್ಲೆಕ್ಸ್‌ ಹಾಕಿರುವುದು.

Written by - Puttaraj K Alur | Last Updated : Jun 25, 2022, 12:57 PM IST
  • SSLC ಪರೀಕ್ಷೆಯಲ್ಲಿ ಪಾಸ್‍ ಆಗಿದ್ದಕ್ಕೆ ತನಗೆ ತಾನೇ ಅಭಿನಂದಿಸಿಕೊಂಡ ಯುವಕ
  • ಫೋಟೋ ಸಮೇತ ಫ್ಲೆಕ್ಸ್‌ ಹಾಕಿ ಆಕರ್ಷಕ ಅಡಿಬರಹದ ಮೂಲಕ ಶುಭಾಶಯ ಕೋರಿಕೆ
  • ನೀನು SSLC ಪಾಸ್ ಆಗಲ್ಲವೆಂದು ಗೇಲಿ ಮಾಡಿದ್ದವರಿಗೆ ತಿರುಗೇಟು ನೀಡಿದ ಕೇರಳದ ವಿದ್ಯಾರ್ಥಿa
Viral News: SSLC ಪರೀಕ್ಷೆಯಲ್ಲಿ ಪಾಸ್ ಆಗಿದ್ದಕ್ಕೆ ಈ ಯುವಕ ಏನು ಮಾಡಿದ್ದಾನೆ ಗೊತ್ತಾ? title=
ತನಗೆ ತಾನೇ ಅಭಿನಂದಿಸಿಕೊಂಡ ಯುವಕ

ಕೊಡುಮೊನ್: SSLC ಪರೀಕ್ಷೆಯಲ್ಲಿ ಪಾಸ್‍ ಆಗಿದ್ದಕ್ಕೆ ಕೇರಳದ ಯುವಕನೊಬ್ಬ ತನಗೇ ತಾನೇ ಅಭಿನಂದಿಸಿಕೊಂಡಿದ್ದಾನೆ. ಈ ಮೂಲಕ ನೀನು SSLC ಪಾಸ್ ಆಗಲ್ಲವೆಂದು ಗೇಲಿ ಮಾಡಿದ್ದವರಿಗೆ ತಿರುಗೇಟು ನೀಡಿದ್ದಾನೆ. ಈ ಯುವಕನ ಸ್ಟೋರಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಸ್ಟೋರಿ ಏನು ಅಂತೀರಾ..? ಮುಂದೆ ಓದಿ…

ಕೇರಳದ ಕೊಡುಮೊನ್-ಅಂಗಡಿಕಲ್ ರಸ್ತೆಯ ಬಳಿ ಆಸಕ್ತಿದಾಯಕ ಫ್ಲೆಕ್ಸ್ ಬೋರ್ಡ್ ಅಳವಡಿಸಲಾಗಿದೆ. ಈ ಫ್ಲೆಕ್ಸ್‌ನಲ್ಲಿ ಯುವಕನ ಫೋಟೋ ಜೊತೆಗೆ ತುಂಬಾ ಆಕರ್ಷಕವಾದ ಶೀರ್ಷಿಕೆಯನ್ನು ಬರೆಯಲಾಗಿದೆ. ‘ಇತಿಹಾಸವು ಕೆಲವು ಜನರಿಗೆ ದಾರಿ ಮಾಡಿಕೊಡುತ್ತದೆ’ ಎಂದು ಬರೆದು ಹಾಕಿರುವ ಫ್ಲೆಕ್ಸ್ ನೋಡುಗರ ಗಮನ ಸೆಳೆಯುತ್ತಿದೆ. ‘2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಕ್ಕಾಗಿ  ಕುಂಜಕ್ಕು ಅಲಿಯಾಸ್ ‘ನಾನೇ’ ಅವರಿಗೆ ಅಭಿನಂದನೆಗಳು’ ಎಂದು ಆ ಯುವಕ ತನಗೆ ತಾನೇ ಶುಭಾಶಯ ಕೋರಿಕೊಂಡಿದ್ದಾನೆ.

ಇದನ್ನೂ ಓದಿ: Viral Video: ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಬೂಟಿನಿಂದ ಹೊಡೆದ ಪ್ರಾಂಶುಪಾಲ!

ಅಂಗಡಿಕಲ್ ಮೂಲದ ಓಮನಕುಟ್ಟನ್ ಮತ್ತು ದೀಪಾ ದಂಪತಿಯ ಪುತ್ರ ಕುಂಜಕ್ಕು ಅಲಿಯಾಸ್ ಜಿಷ್ಣುನೇ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ತನಗೇ ತಾನೇ ಶುಭಾಶಯ ಕೋರಿಕೊಂಡಿರುವ ಫ್ಲೆಕ್ಸ್‌ ಹಾಕಿರುವುದು. ಈ ಜಿಷ್ಣು ತನಗಾಗಿ ಫ್ಲೆಕ್ಸ್ ಅಳವಡಿಸಿದ್ದು ಏಕೆ? ಇದಕ್ಕೂ ಒಂದು ಹಿನ್ನೆಲೆ ಇದೆ. ಜಿಷ್ಣು ಮತ್ತು ಆತನ ಸಹೋದರಿ ವಿಷ್ಣುಪ್ರಿಯಾ ಸಾಕಷ್ಟು ಕಷ್ಟಪಟ್ಟು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅವರ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿ 1 ವಾರ ಕಳೆದಿದೆ ಅಷ್ಟೇ. ಇಷ್ಟು ದಿನ ಸೀಮೆಎಣ್ಣೆ ದೀಪದ ಮಂದ ಬೆಳಕಿನಲ್ಲಿ ಓದುತ್ತಿದ್ದರು. ಅವರ ತಂದೆ-ತಾಯಿ ಇಬ್ಬರೂ ದಿನಗೂಲಿ ಕಾರ್ಮಿಕರು. ಜಿಷ್ಣುವಿನ ಕುಟುಂಬದಲ್ಲಿ ಇಬ್ಬರು ಸಹೋದರಿಯರು, ಪೋಷಕರು, ಅಣ್ಣ ವಿಷ್ಣು, ತಂದೆಯ ಅಜ್ಜಿ ಮತ್ತು ಚಿಕ್ಕಪ್ಪ ಇದ್ದಾರೆ. ಸ್ವಂತ ಮನೆಯ ವಾತಾವರಣವು ಅಧ್ಯಯನಕ್ಕೆ ಯೋಗ್ಯವಾಗಿಲ್ಲದ ಕಾರಣ ಅವಳಿ ಮಕ್ಕಳು ಪಠಾಣಪುರಂನಲ್ಲಿರುವ ತಮ್ಮ ತಾಯಿಯ ಮನೆಯಲ್ಲಿ ವಾಸವಾಗಿದ್ದರು. ಜಿಷ್ಣು ಸಿಎಂಎಚ್‌ಎಸ್ ಕುರುಂಬಕ್ಕರ ವಿದ್ಯಾರ್ಥಿಯಾಗಿದ್ದರು.

10ನೇ ತರಗತಿಯಲ್ಲಿ ಓದುತ್ತಿದ್ದಾಗ ಇಬ್ಬರೂ ಬಸ್‌ನಲ್ಲಿ 14 ಕಿ.ಮೀ ಪ್ರಯಾಣಿಸಿ ಶಾಲೆ ತಲುಪಿದ್ದರು. ತಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಿಲ್ಲ ಅಂತಾ  ಸ್ನೇಹಿತರು ಮತ್ತು ಕುಟುಂಬದವರು ಗೇಲಿ ಮಾಡಿದರು ಎಂದು ಜಿಷ್ಣು ಹೇಳಿಕೊಂಡಿದ್ದಾನೆ. ಅವರ ಮಾತು ನನಗೆ ತೀವ್ರ ನೋವುಂಟು ಮಾಡಿದ್ದವು. ಹೀಗಾಗಿಯೇ ಪರೀಕ್ಷೆಯಲ್ಲಿ ಪಾಸ್ ಆದ ಬಳಿಕ ನನಗಾಗಿ ಒಂದು ಫ್ಲೆಕ್ಸ್ ಬೋರ್ಡ್ ಅಳವಡಿಸಲು ನಿರ್ಧರಿಸಿದೆ’ ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: Viral Video: ಕೈಯಿಂದ ತಳ್ಳಿದ್ರೆ ಕುಸಿದು ಬಿದ್ದ ಕಾಲೇಜು ಕಟ್ಟಡದ ಗೋಡೆ!

‘ಫ್ಲೆಕ್ಸ್ ಬೋರ್ಡ್ ಅಳವಡಿಸು ಮೂಲಕ ನಾನು ಸ್ವೀಟ್ ರಿವೇಂಜ್ ತೀರಿಸಿಕೊಂಡಿದ್ದೇನೆ. ಫ್ಲೆಕ್ಸ್ ಅಳವಡಿಸಿಕೊಳ್ಳಲು ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ. ಹೀಗಾಗಿ ನವಜ್ಯೋತಿ ಕ್ರೀಡಾ ಮತ್ತು ಕಲಾ ಸಮಿತಿಯ ನೆರವು ಪಡೆದು ಫ್ಲೆಕ್ಸ್ ಅಳವಡಿಸಿದ್ದೇನೆ. ಶೀಘ್ರವೇ +1 ತರಗತಿಗಳನ್ನು ಸೇರಿಕೊಳ್ಳಲು ಜಿಷ್ಣು ಮತ್ತು ಆತನ ಸಹೋದರಿ ಸಿದ್ಧತೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News