Iphone 15 pro Max: iPhone ಎಂದ ಒಡನೆ ನಮ್ಮ ತಲೆಗೆ ಮೊದಲು ಫ್ಲಾಶ್ ಆಗೋದು, ಅದು ಕಾಸ್ಟ್ಲಿ ಫೋನ್ ಭರೀ ಶ್ರೀಮಂತರೂ ಬಳಸುವ ಫೋನ್ ಅಂತ. ಅದ್ರಲ್ಲಂತೂ ಐ-ಫೋನ್‌ನ ಬೆಲೆ ಬಗ್ಗೆ ಕೇಳೋ ಹಾಗೆ ಇಲ್ಲ ಬಿಡಿ.ಲಕ್ಷ ಲಕ್ಷ ಬೆಲೆ ಬಾಳುವ ಈ ಫೋನ್ ಅನ್ನು ಕೊಳ್ಳೋಕೆ ನಮ್ಮ ಕಿಡ್ನಿಯನ್ನೆ ಮಾರಬೇಕಾಗುತ್ತೆ. ಆದರೆ, ಈ ನಂಬಿಕೆಗಳನ್ನೆಲ್ಲ ಹುಸಿ ಮಾಡಿ ಇಲ್ಲೊಬ್ಬ ಭಿಕ್ಷುಕ ಚಿಲ್ಲರೆ ಹಣದಿಂದ ಈ ಫೋನ್ ಖರೀದಿಸಿದ್ದಾನೆ.
ಇತ್ತೀಚಿನ ದಿನಗಳಲ್ಲಿ iPhone ಟ್ರೆಂಡ್ ಜೋರಗಿಯೇ ನಡೀತಿದೆ. ಯಾರ ಬಳಿ ನೋಡಿದ್ರು iPhone ಇದ್ದೆ ಇದೆ. ಆದರೆ ಈಗ ಇದನ್ನೆಲ್ಲ ಏಕೆ ಹೇಳುತ್ತಿದ್ದೀರಿ? ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಇದೆ, iPhone 15 ಮತ್ತು iPhone 15 Pro Max ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಶೋ ರೂಮ್‌ಗಳ ಬಳಿ ಜನ ಈ ಫೋನ್ ಅನ್ನು ಕೊಳ್ಳಲು ಜಮಾಯಿಸಿದ್ದರು. ಆದರೆ ಐಫೋನ್ ಮೇಲೆ ಹುಚ್ಚು ಹಿಡಿದಿದ್ದ ಭಿಕ್ಷುಕನೊಬ್ಬ ಚಿಲ್ಲರೆ ನಾಣ್ಯಗಳನ್ನೆಲ್ಲ ಕೂಡಿಟ್ಟು, ಆಪಲ್ ಸ್ಟೋರ್‌ಗೆ ಬಂದು ಮೊಬೈಲ್ ಫೋನ್ ಖರೀದಿಸಿದ್ದಾನೆ. ಇದೀಗ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೈ ಮೇಲೆ ಬನಿಯನ್ ಹಾಗೂ ಲುಂಗಿ ಧರಿಸಿ ಭಿಕ್ಷುಕ, ಹೈ-ಫೈ ಆಪಲ್ ಸ್ಟೋರ್ ಎಂಟ್ರಿ ಕೊಟ್ಟಿದ್ದ, ಅವನ ಭುಜದ ಮೇಲೆ ಚೀಲವನ್ನು ಹಿಡಿದುಕೊಂಡು ಆಪಲ್ ಶೋ ರೂಮ್ ಒಳಗೆ ಬಂದಿದ್ದ. ಭಿಕ್ಷಕ ಸ್ಟೋರ್‌ನೊಳಗೆ ಎಂಟ್ರಿ ಕೊಡುತ್ತಿದ್ದಂತೆ ಈತ ಏಕೆ ಆಪಲ್ ಶೋ ರೂಮ್ ಒಳಗೆ ಬರುತ್ತಿದ್ದಾನೆ ಎಂದು ಸ್ಟೋರ್‌ನ ಸಿಬ್ಬಂದಿ ಹಾಗೂ ಅಲ್ಲಿ ಇದ್ದ ಜನ ಎಲ್ಲರೂ ನೋಡಲು ಆರಂಭಿಸಿದ್ದರು. ಹೊಸದಾಗಿ ಬಿಡುಗಡೆಯಾದ iPhone 15 Pro Max ಫೋನ್ ಖರೀದಿಸಲು ಅಂಗಡಿಗೆ ಬಂದಿದ್ದೇನೆ ಎಂದು ಭಿಕ್ಷುಕ ಹೇಳಿದಾಗ, ಅಲ್ಲಿದ್ದವರೆಲ್ಲರೂ ಮೊದಲು ತಮಾಷೆ ಎಂದು ಭಾವಿಸಿ ಲೈಟ್ ಆಗಿ ತೆಗೆದುಕೊಂಡರು. ಆದರೆ ಆತ ತನ್ನ ಬ್ಯಾಗ್ ನಲ್ಲಿದ್ದ ಚಿಲ್ಲರೆ ಹಣವನ್ನೆಲ್ಲಾ ತೆಗೆದು, ಫೋನ್ ಅನ್ನು ಕೊಳ್ಳಲು ಬಂದಿದ್ದೇನೆ ಎಂದು ತಿಳಿಸಿದಾಗ ಸ್ಥಳದಲ್ಲಿದ್ದವರು ಶಾಕ್ ಆಗಿದ್ದರು.
ತಾನು ತಂದಿದ್ದ ಚೀಲಗಳಲ್ಲಿದ್ದ ಚಿಲ್ಲರೆ ನಾಣ್ಯಗಳನ್ನೆಲ್ಲ ಆಪಲ್ ಸ್ಟೋರ್ ನ ನೆಲದ ಮೇಲೆ ಸುರಿದು, ತನಗೆ iPhone 15 Pro Max ಫೋನ್ ನೀಡುವಂತೆ ಭಿಕ್ಷುಕ ಅಂಗಡಿಯ ಮಾಲಿಕನನ್ನು ಕೇಳಿಕೊಂಡ. ಇದರೊಂದಿಗೆ, ಆ ಆಪಲ್ ಸ್ಟೋರ್‌ನಲ್ಲಿನ ಎಲ್ಲಾ ಸಿಬ್ಬಂದಿ ಆ ಚಿಲ್ಲರೆ ನಾಣ್ಯಗಳನ್ನು ಎಣಿಸಲು ಪ್ರಾರಂಭಿಸಿದರು. ಅವರು ಕೆಲವು ಗಂಟೆಗಳ ಕಾಲ ಸಮಯ ತೆಗೆದುಕೊಂಡು, ಹಣವನ್ನು ಲೆಕ್ಕ ಹಾಕಿ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ರೂ.1.59 ಲಕ್ಷಕ್ಕೆ ಭಿಕ್ಷುಕನಿಗೆ ಮಾರಾಟ ಮಾಡಿದರು.
ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವ್ೃಲ್ ಆಗುತ್ತಿದೆ. ವಿಡಿಯೋ ನೋಡಿದ ನಂತರ ನೆಟ್ಟಿಗರು ಶಾಕ್ ಆಗಿದ್ದು ಅಷ್ಟೆ ಅಲ್ಲದೆ, ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಕೆಲವರು ಭಿಕ್ಷುಕನಿಗೆ ಭೇಷ್ ಎಂದರೆ ಇನ್ನೂ ಕೆಲವರು, ಈ ಹಣದಿಂದ ಬದುಕನ್ನು ಕಟ್ಟಿಕೊಳ್ಳ ಬಹುದಿತ್ತು, ಈತ ಮೂರ್ಕ ಎಂದು ಕಾಮೆಂಟ್ ಮಾಡುವ ಮೂಲಕ ಭಿನ್ನ ವಿಭಿನ್ನವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
Chillara ichi #iPhone15Pro konnadu 👍🏼pic.twitter.com/JCFY82GKP8
— R a J i V (@RajivAluri) October 9, 2023
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.