Trending Video: ಶ್ವಾನಕ್ಕೆ ಮುತ್ತಿಕ್ಕಿದ ಕಾಡಿನ ರಾಜ, ವಿಡಿಯೋದಲ್ಲಿ ನೋಡಿ ಈ ಲವ್ ಸ್ಟೋರಿಯ ವಿಶಿಷ್ಟ ಕ್ಲೈಮ್ಯಾಕ್ಸ್

Lion Kissed Dog: ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಂದು ವಿಡಿಯೋ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ.ಈ ವಿಡಿಯೋವನ್ನು ನೋಡಿ ನೀವು ನಿಮ್ಮ ಕೈಯಾರೆ ನಿಮ್ಮ ತಲೆಯನ್ನು ಹಿಡಿದುಕೊಳ್ಳುವಿರಿ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಿಂಹವೊಂದು ನಾಯಿ ಕೈಗೆ ಮುತ್ತಿಕ್ಕುತ್ತಿರುವುದನ್ನು ನೀವು ನೋಡಬಹುದು.  

Written by - Nitin Tabib | Last Updated : Jul 11, 2022, 05:20 PM IST
  • ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಂದು ವಿಡಿಯೋ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ.
  • ಈ ವಿಡಿಯೋವನ್ನು ನೋಡಿ ನೀವು ನಿಮ್ಮ ಕೈಯಾರೆ ನಿಮ್ಮ ತಲೆಯನ್ನು ಹಿಡಿದುಕೊಳ್ಳುವಿರಿ.
  • ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಿಂಹವೊಂದು ನಾಯಿ ಕೈಗೆ ಮುತ್ತಿಕ್ಕುತ್ತಿರುವುದನ್ನು ನೀವು ನೋಡಬಹುದು.
Trending Video: ಶ್ವಾನಕ್ಕೆ ಮುತ್ತಿಕ್ಕಿದ ಕಾಡಿನ ರಾಜ, ವಿಡಿಯೋದಲ್ಲಿ ನೋಡಿ ಈ ಲವ್ ಸ್ಟೋರಿಯ ವಿಶಿಷ್ಟ ಕ್ಲೈಮ್ಯಾಕ್ಸ್ title=
Dog-Lion Viral Video

Unique Love Story: ಕಾಡಿನ ರಾಜ ಸಿಂಹವನ್ನು ಎಲ್ಲಾ ಪ್ರಾಣಿಗಳಲ್ಲಿ ಬಲಶಾಲಿ ಮತ್ತು ಅತ್ಯಂತ ಅಪಾಯಕಾರಿ ಮೃಗ ಎಂದು ಪರಿಗಣಿಸಲಾಗುತ್ತದೆ. ಆದರೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ನಾವು ನಿಮಗೆ ಸಿಂಹದ ಮತ್ತೊಂದು ಮುಖವನ್ನು ತೋರಿಸುತ್ತಿದ್ದೇವೆ. ಈ ವಿಡಿಯೋ ಕೂಡ ಸಾಕಷ್ಟು ಬಾರಿ ವೀಕ್ಷಣೆಗೆ ಒಳಗಾಗುತ್ತಿದೆ. ಈ ವೀಡಿಯೋದಲ್ಲಿ ಸಿಂಹ ಮತ್ತು ನಾಯಿಯ ನಂಟು ನೋಡಿ ನಿಮಗೂ ಕೂಡ ಶಾಕ್ ಜೋರಾಗಿಯೇ ಬೀಳಲಿದೆ. ಶ್ವಾನ ಮತ್ತು ಸಿಂಹದ ನಡುವೆ ಪ್ರೀತಿ ಹೇಗೆ ಸಾಧ್ಯ ಎಂಬುದು ಇಲ್ಲಿ ಯೋಚಿಸಬೇಕಾದ ಸಂಗತಿ. ಆದರೆ ಈ ವೈರಲ್ ವಿಡಿಯೋ ಅವರಿಬ್ಬರ ಸ್ನೇಹಕ್ಕೆ ಸಾಕ್ಷಿಯಾಗಿದೆ.

ಸಿಂಹ ಮತ್ತು ನಾಯಿ
ವಿಡಿಯೋದಲ್ಲಿ ನೀಡಿರುವ ಮಾಹಿತಿ ಪ್ರಕಾರ ಒಂದು ಬಿಳಿ ಸಿಂಹ ನಾಯಿಯ ಬಳಿ ಕ್ಷಮೆ ಕೋರುತ್ತಿದೆ ಎನ್ನಲಾಗಿದೆ. ವೀಡಿಯೊದ ಆರಂಭದಲ್ಲಿ ಶ್ವಾನವನ್ನು ನೀವು ನೋಡಬಹುದಾಗಿದೆ. ಕೆಲವೇ ಸೆಕೆಂಡುಗಳ ನಂತರ ಬಿಳಿ ಸಿಂಹ ಕ್ಯಾಮೆರಾ ಕಣ್ಣಲ್ಲಿ ಸೇರೆಯಾಗುತ್ತದೆ. ಈಗ ಸಿಂಹ ಈ ನಾಯಿಗೆ ಏನು ಮಾಡಲಿದೆ ಎಂಬ ಆಶ್ಚರ್ಯ ಎಲ್ಲರಲ್ಲಿಯೂ ಮೂಡುತ್ತದೆ. ಆದರೆ, ಅಆಯಕಾರಿ ಸಿಂಹ ತನಗಿಂತ ದುರ್ಬಲ ನಾಯಿಯೊಂದಿಗೆ ಹೇಗೆ ವರ್ತಿಸಿದೆ ಎಂಬುದನ್ನು ತಿಳಿಯಲು ನೀವು ಈ ವಿಡಿಯೋ ವೀಕ್ಷಿಸಲೇಬೇಕು...

ಇದನ್ನೂ ಓದಿ-Sri Lanka Viral Video: ಶ್ರೀಲಂಕಾ ಪ್ರಧಾನಿ ಹಾಸಿಗೆಯ ಮೇಲೆ WWE ರೆಸ್ಲಿಂಗ್, ವಿಡಿಯೋ ನೋಡಿ

ಈ ರೀತಿ ಕ್ಷಮೆ ಕೋರಿದ ಕಾಡಿನ ರಾಜ
ಕಾಡಿನ ರಾಜ ಸಿಂಹ ಅತ್ಯಂತ ಪ್ರೀತಿಯಿಂದ ಶ್ವಾನದ ಕೈಯನ್ನು ತನ್ನ ಕೈ ಮೇಲೆ ತೆಗೆದುಕೊಳ್ಳುತ್ತದೆ ಮತ್ತು ಮೆಲ್ಲಗೆ ತನ್ನ ಬಾಯಿಯನ್ನು ಅದರ ಕೈಯತ್ತ ಕೊಂಡೊಯ್ಯುತ್ತದೆ. ಇದಾದ ಬಳಿಕ ನಡೆಯುವ ಸಂಗತಿಯನ್ನು ನಾವು ಎಂದಿಗೂ ಕೂಡ ಊಹಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಸಿಂಹ ಶ್ವಾನದ ಕೈಗೆ ಮೆಲ್ಲಗೆ ಮುತ್ತಿಕ್ಕುತ್ತದೆ. ತನಗೆ ಒಪ್ಪಿಗೆ ಇದೆ ಎಂಬಂತೆ ನಾಯಿ ಕೂಡ ತಲೆಯಾಡಿಸುವುದನ್ನು ನೀವು ನೋಡಬಹುದು. ವಿಡಿಯೋ ನೋಡಿದರೆ ಉಭಯ ಪ್ರಾಣಿಗಳು ಮೊದಲಿನಿಂದಲೇ ಸ್ನೇಹ ಹೊಂದಿವೆ ಎಂಬುದನ್ನು ನೀವೂ ಕೂಡ ಊಹಿಸಬಹುದು. ಸಿಂಹವನ್ನು ನೋಡಿದ ಶ್ವಾನವೂ ಕೂಡ ಹೆದರದೆ, ತನ್ನ ಸ್ಥಾನ ಬಿಟ್ಟು ಕದಲುವುದಿಲ್ಲ.

ಇದನ್ನೂ ಓದಿ-Interesting Video: ಸಸ್ಯಗಳು ಮಲಗಿ ಏಳುವುದನ್ನು ಎಂದಾದರು ನೋಡಿದ್ದೀರಾ? ಈ ವೈರಲ್ ವಿಡಿಯೋ ಒಮ್ಮೆ ನೋಡಿ ಗೊತ್ತಾಗುತ್ತದೆ

ಅಚ್ಚರಿ ಉಂಟುಮಾಡಿದ ವಿಡಿಯೋ
ಈ ಸಿಂಹದ ಹೆಸರು ಮಿಕ್ಕಿ ಹಾಗೂ ಶ್ವಾನದ ಹೆಸರು ಕ್ಯಾಮಿಲಾ ಎಂದು ಹೇಳಲಾಗುತ್ತಿದೆ. ಕೋಟ್ಯಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 1.6 ಮಿಲಿಯನ್ ಗೂ ಅಧಿಕ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಶ್ವಾನ-ಸಿಂಹದ ಈ ವಿಡಿಯೋಗೆ ಜನರು ಹಾರ್ಟ್ ಇಮೊಜಿ ನೀಡುವ ಮೂಲಕ ಕಾಮೆಂಟ್ ಮಾಡುತ್ತಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News