Viral News: ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಈ ಮೂವರ ಸಂಬಂಧ!

ಟ್ರಿಪಲ್ ರೊಮ್ಯಾನ್ಸ್: ಒಬ್ಬ ಮಹಿಳೆ ತನ್ನ ಪ್ರೇಯಸಿಯ ಜೊತೆಗೆ ಶೀಘ್ರವೇ ಮದುವೆಯಾಗುತ್ತಿದ್ದಾಳೆ. ಆದರೆ, ಅದೇ ಸಮಯದಲ್ಲಿ ಆಕೆ ತನ್ನ ಸ್ನೇಹಿತನೊಂದಿಗೆ ಜೀವನ ನಡೆಸಲು ಸಹ ಬಯಸಿದ್ದಾಳೆ. ಇದೀಗ ಈ ಮೂವರ ಸಂಬಂಧ ಈಗ ಭಾರೀ ಚರ್ಚೆಯಲ್ಲಿದೆ.

Last Updated : May 7, 2022, 09:43 PM IST
  • ಈ ಮೂವರ ಸಂಬಂಧ ಈಗ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಯಲ್ಲಿದೆ
  • ಮೂವರು ಒಟ್ಟಿಗೆ ಡೇಟಿಂಗ್ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಟ್ರಿಪಲ್ ಲವ್ ಸ್ಟೋರಿ
Viral News: ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಈ ಮೂವರ ಸಂಬಂಧ! title=
ಟ್ರಿಪಲ್ ಲವ್ ಸ್ಟೋರಿ

ನವದೆಹಲಿ: ಪ್ರೀತಿ, ಸಂಬಂಧ ಮತ್ತು ಪ್ರೇಮ ಕಥೆಯಂತಹ ಪದಗಳನ್ನು ಕೇಳಿದಾಗ ನಮ್ಮ ಮನಸ್ಸಿನಲ್ಲಿ ಇಬ್ಬರ ಚಿತ್ರಣವು ಮೂಡುತ್ತದೆ. ಆದರೆ ಇದೀಗ ಹೊಸ ವಿಷಯವೊಂದು ಬಹಿರಂಗವಾಗಿದೆ. ಏಕೆಂದರೆ ತನ್ನ ಭಾವಿ ಪತಿಯನ್ನು ಪ್ರೀತಿಸುತ್ತಿರುವ ಮತ್ತು ಶೀಘ್ರದಲ್ಲೇ ಮದುವೆಯಾಗಲಿರುವ ಮಹಿಳೆಯೊಬ್ಬಳು ತನ್ನ ಸ್ನೇಹಿತೆ ಜೊತೆಗೆ ಜೀವನಪೂರ್ತಿ ಇರಬೇಕೆಂದು ಹಾತೊರೆಯುತ್ತಿದ್ದಾಳೆ. ಈ ಮೂವರ ಸಂಬಂಧ ಈಗ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಯಲ್ಲಿದೆ.

ಟ್ರಿಪಲ್ ಲವ್ ಸ್ಟೋರಿ!

26 ವರ್ಷದ ಏಂಜೆಲ್ ಬೈಲಿ ಮತ್ತು 29 ವರ್ಷದ ಟೈಲರ್ ಹೆಡ್ಜಸ್ ಜೂನ್ 2018ರಲ್ಲಿ ಟಿಂಡರ್‌ನಲ್ಲಿ ಪರಿಚಯವಾದ ನಂತರ ಡೇಟಿಂಗ್ ಪ್ರಾರಂಭಿಸಿದರು. ಈ ದಂಪತಿ ಕಳೆದ ವರ್ಷ ಏಪ್ರಿಲ್‌ನಲ್ಲಿ ತಮ್ಮಿಬ್ಬರ ಸಂಬಂಧಕ್ಕೆ ಏಂಜಲ್ಸ್‌ನ ಹಳೆಯ ಕಾಲೇಜು ಸ್ನೇಹಿತ ಸ್ಯಾಮ್ ವಿಕ್‍ರನ್ನು ಸೇರಿಸಿಕೊಂಡರು. 23 ವರ್ಷದ ಸ್ಯಾಮ್ ಮತ್ತು ಏಂಜೆಲ್ ಕಾಲೇಜಿನಲ್ಲಿ ಭೇಟಿಯಾದಾಗ ಒಮ್ಮೆ ಕಿಸ್ ಮಾಡಿದ್ದರು. ಉತ್ಸಾಹದಲ್ಲಿ ಇಬ್ಬರಿಗೂ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಕಿಸ್ ಮಾಡಿದ್ದರಂತೆ. ನಂತರ ಆಕೆ ಟೈಲರ್ ಜೊತೆ ಸಂಬಂಧ ಹೊಂದಿದ್ದಳು.

ಇದನ್ನೂ ಓದಿ: Viral Video: ನೀವು ಹಿಂದೆಂದೂ ನೋಡಿರದ ಕೊರೊನಾ ಟೆಸ್ಟ್ ನ ಭಯಾನಕ ದೃಶ್ಯಗಳು ಇಲ್ಲಿವೆ!

ಮೂವರು ಒಟ್ಟಾಗಿ ನಿರ್ಧಾರ!

ಒಬ್ಬರಿಗೊಬ್ಬರ ಭಾವನೆಗಳು ಹೆಚ್ಚಾಗುತ್ತಿದ್ದಂತೆ ಮೂವರು ಜೊತೆಯಾಗಿರಲು ನಿರ್ಧರಿಸಿದರು. ಹೀಗಾಗಿ ತಾವು ಒಟ್ಟಾಗಿಯೇ ಜೀವನ ನಡೆಸೋಣವೆಂದು ತೀರ್ಮಾನಿಸಿ ತಮ್ಮ ಸಂಬಂಧ ಮುಂದುವರೆಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿಂದೆ ಮೂರು ಪ್ರತ್ಯೇಕವಾಗಿ ಡೇಟಿಂಗ್ ಮಾಡುತ್ತಿದ್ದರು. ಈಗ ಮೂವರು ಒಟ್ಟಾಗಿ ತಮ್ಮ ಸಂಬಂಧ ಮುಂದುವರಿಸಲು ಒಮ್ಮತದ ನಿರ್ಧಾರ ಮಾಡಿಕೊಂಡಿದ್ದಾರಂತೆ.

ಏಂಜೆಲ್ ಮತ್ತು ಟೈಲರ್ ಮದುವೆ

ಮೂವರು ಸಂಬಂಧ ಹೊಂದಿರುವ ಮಧ್ಯೆಯೇ ಏಂಜೆಲ್ ಮತ್ತು ಟೈಲರ್ ಮೇ  ತಿಂಗಳಿನಲ್ಲಿ ಮದುವೆಯಾಗುತ್ತಿದ್ದಾರೆ. ಇದಲ್ಲದೆ ಏಂಜೆಲ್ ಅವರು ಸ್ಯಾಮ್ ಅವರನ್ನು ಶೀಘ‍್ರವೇ ಮದುವೆಯಾಗಲಿದ್ದಾರಂತೆ. ಟ್ರಿಪಲ್ ಲವ್ ಸ್ಟೋರಿ ಬಗ್ಗೆ ಮಾತನಾಡಿರುವ ಏಂಜೆಲ್, ‘ನಾವು ಮೂವರು ಒಟ್ಟಿಗೆ ತುಂಬಾ ಸಂತೋಷವಾಗಿದ್ದೇವೆ. ಮೊದಲು ನಾವು ಪರಸ್ಪರ ಮುಕ್ತವಾಗಿ ಮಾತನಾಡಲು ಹೆದರುತ್ತಿದ್ದೆವು, ಇಬ್ಬರ ಜೀವನದಲ್ಲಿ 3ನೇ ವ್ಯಕ್ತಿಯನ್ನು ಸೇರಿಸುವುದು ಸರಿಯಲ್ಲ. ಆದರೆ, ನಾನು ಸ್ವಾರ್ಥಿಯಾಗಿದ್ದೆ. ಆ ಇಬ್ಬರನ್ನು ದೂರ ಮಾಡಲು ನನಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಮೂವರು ಒಟ್ಟಿಗಿರಲು ನಿರ್ಧರಿಸಿದೆವು. ಈಗ ನಾವು ಮೂವರೂ ಒಟ್ಟಿಗೆ ಡೇಟಿಂಗ್ ಹೋಗುತ್ತೇವೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Mother's Day 2022: 5ನೇ ವಯಸ್ಸಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಈ ಬಾಲಕಿ!

ಸದ್ಯ ಒಬ್ಬ ಪುರುಷನ ಜೊತೆಗೆ ಇಬ್ಬರು ಮಹಿಳೆಯರು ಜೊತೆ ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಈ ಟ್ರಿಪಲ್ ಜೋಡಿಯ ಲವ್ ಕಹಾನಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ಮೂವರು ಟೈಮ್ ಟೇಬಲ್ ಪ್ರಕಾರ ಒಂದೇ ಮನೆಯಲ್ಲಿ ಪ್ರತ್ಯೇಕ ಬೆಡ್‍ರೂಂನಲ್ಲಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ. ಹೊರಗೆ ಡೇಟಿಂಗ್ ಹೋದರೆ ಮೂವರು ಒಟ್ಟಿಗೆ ತೆರಳುತ್ತಾರಂತೆ. ಆದರೆ, ಜನರ ಏನು ಅಂದುಕೊಳ್ಳುತ್ತಾರೋ ಅನ್ನೋ ಭಯ ಈ ಟ್ರಿಪಲ್ ಜೋಡಿಗೆ ಇಲ್ಲವಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News