WATCH : ಹಲ್ಲುಗಳಿಂದ ಟ್ರಕ್ ಎಳೆದು ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ, ವಿಡಿಯೋ ನೋಡಿ

Viral Video : ಈಜಿಪ್ಟ್‌ನಲ್ಲಿ ವ್ಯಕ್ತಿಯೊಬ್ಬ 15,730 ಕೆಜಿ ತೂಕದ ಟ್ರಕ್ ಅನ್ನು ತನ್ನ ಹಲ್ಲುಗಳಿಂದ ಎಳೆದಿದ್ದಾರೆ. ಈ ವ್ಯಕ್ತಿ 'ಹಲ್ಲಿನಿಂದ ಅತ್ಯಂತ ಭಾರವಾದ ರಸ್ತೆ ವಾಹನ ಎಳೆದಿದ್ದಕ್ಕಾಗಿ' ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. 

Written by - Chetana Devarmani | Last Updated : Jan 5, 2023, 06:36 PM IST
  • ಹಲ್ಲುಗಳಿಂದ ಟ್ರಕ್ ಎಳೆದ ವ್ಯಕ್ತಿ
  • ಈಜಿಪ್ಟ್‌ನಲ್ಲಿ ಗಿನ್ನಿಸ್ ದಾಖಲೆ
  • ಮೈಜುಮ್ಮೆನ್ನಿಸುವ ವಿಡಿಯೋ ವೈರಲ್‌
WATCH : ಹಲ್ಲುಗಳಿಂದ ಟ್ರಕ್ ಎಳೆದು ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ, ವಿಡಿಯೋ ನೋಡಿ  title=

Viral Video : ಈಜಿಪ್ಟ್‌ನಲ್ಲಿ ವ್ಯಕ್ತಿಯೊಬ್ಬ 15,730 ಕೆಜಿ ತೂಕದ ಟ್ರಕ್ ಅನ್ನು ತನ್ನ ಹಲ್ಲುಗಳಿಂದ ಎಳೆದಿದ್ದಾರೆ. ಈ ವ್ಯಕ್ತಿ 'ಹಲ್ಲಿನಿಂದ ಅತ್ಯಂತ ಭಾರವಾದ ರಸ್ತೆ ವಾಹನ ಎಳೆದಿದ್ದಕ್ಕಾಗಿ' ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಈ ಕ್ಲಿಪ್ ಅನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಮೈಜುಮ್ಮೆನ್ನಿಸುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

ಇದನ್ನೂ ಓದಿ : Snake Video : ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಾವುಗಳ ಮಿಲನ ಮಹೋತ್ಸವ!

ಈಜಿಪ್ಟ್‌ನ ರಸ್ತೆಗಳಲ್ಲಿ ಒಬ್ಬ ವ್ಯಕ್ತಿ ತನ್ನ ಹಲ್ಲುಗಳಿಂದ ಟ್ರಕ್ ಅನ್ನು ಎಳೆಯುವುದನ್ನು ನೋಡಬಹುದು. ಕ್ಲಿಪ್ ನೆಟಿಜನ್‌ಗಳ ಗಮನ ಸೆಳೆದಿದೆ ಮತ್ತು ಅನೇಕರು ಅವರ ಹಲ್ಲುಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, ಅಶ್ರಫ್ ಮಹ್ರೂಸ್ ಮೊಹಮ್ಮದ್ ಸುಲಿಮಾನ್ ಅವರು 13 ಜೂನ್ 2021 ರಂದು ಈಜಿಪ್ಟ್‌ನ ಇಸ್ಮಾಯಿಲಿಯಾದಲ್ಲಿ ಈ ದಾಖಲೆಯನ್ನು ರಚಿಸಿದ್ದಾರೆ. 

 

 

ಈ ವಿಡಿಯೋವನ್ನು ಎರಡು ದಿನಗಳ ಹಿಂದೆ ಶೇರ್ ಮಾಡಲಾಗಿದ್ದು, ಇದುವರೆಗೆ 4 ಲಕ್ಷ ವೀಕ್ಷಣೆ ಪಡೆದಿದೆ. ಒಬ್ಬ ಬಳಕೆದಾರ, "ಬ್ರೋ, ಅವರ ದಂತವೈದ್ಯರು ಯಾರೆಂದು ನಾನು ಕಂಡುಹಿಡಿಯಬೇಕಾಗಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ಅದು ಸಂಪೂರ್ಣವಾಗಿ ಹುಚ್ಚುತನವಾಗಿದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ : Funny Video : ವಧುವನ್ನು ಎತ್ತಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News