Video Viral : ವಿದ್ಯಾ ದೇಗುಲದ ಒಳಗೆಯೇ ಕಿಸ್ಸಿಂಗ್ - ಹಗ್ಗಿಂಗ್ ! ಅದೇನು ಪಾಠ ಕಲಿಯುತ್ತಾರೋ ಈ ವಿದ್ಯಾರ್ಥಿಗಳು !

Students Vedio Viral : ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ದೇಶ ಕೇವಲ ವಿದ್ಯಾರ್ಜನೆ ಮಾತ್ರವಲ್ಲ. ಸಮಾಜದಲ್ಲಿ ಅವರ ನಡವಳಿಕೆ ಹೇಗಿರಬೇಕು? ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿ ಕೊಡುವುದು ಕೂಡಾ ಆಗಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಅಂಥಹ ವಿದ್ಯಾಮಂದಿರದಲ್ಲಿ  ನಡೆದುಕೊಳ್ಳುವ ರೀತಿ ನಿಜಕ್ಕೂ ನಾಚಿಕೆಗೇಡು. 

Written by - Ranjitha R K | Last Updated : Feb 21, 2023, 01:06 PM IST
  • ಶಾಲೆ ಅಂದರೆ ಅದು ಜ್ಞಾನ ದೇಗುಲ.
  • ಅಲ್ಲಿ ಸಾಕ್ಷಾತ್ ಶಾರದ ಮಾತೆ ನೆಲೆಸುತ್ತಾಳೆ
  • ವಿದ್ಯಾಮಂದಿರದಲ್ಲಿನ ಈ ವಿಡಿಯೋ ಎಲ್ಲೆಡೆ ವೈರಲ್
Video Viral : ವಿದ್ಯಾ ದೇಗುಲದ ಒಳಗೆಯೇ  ಕಿಸ್ಸಿಂಗ್ - ಹಗ್ಗಿಂಗ್ !  ಅದೇನು ಪಾಠ ಕಲಿಯುತ್ತಾರೋ ಈ ವಿದ್ಯಾರ್ಥಿಗಳು ! title=

Students Vedio Viral : ಶಾಲೆ ಅಂದರೆ ಅದು ಜ್ಞಾನ ದೇಗುಲ. ಹೌದು ಅಲ್ಲಿ ಸಾಕ್ಷಾತ್ ಶಾರದ ಮಾತೆ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಮಕ್ಕಳಿಗೆ ಶಾಲಾ ಮೆಟ್ಟಿಲು ಹತ್ತುವ  ಮುನ್ನ ಕೈ ಮುಗಿದು ಒಳಗೆ ಬನ್ನಿ ಎಂದು ಹೇಳಲಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ದೇಶ ಕೇವಲ ವಿದ್ಯಾರ್ಜನೆ ಮಾತ್ರವಲ್ಲ. ಸಮಾಜದಲ್ಲಿ ಅವರ ನಡವಳಿಕೆ ಹೇಗಿರಬೇಕು? ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿ ಕೊಡುವುದು ಕೂಡಾ ಆಗಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಅಂಥಹ ವಿದ್ಯಾಮಂದಿರದಲ್ಲಿ  ನಡೆದುಕೊಳ್ಳುವ ರೀತಿ ನಿಜಕ್ಕೂ ನಾಚಿಕೆಗೇಡು. 

ಶಾಲೆಗೂ ಪಾರ್ಕ್ ಗೂ ವ್ಯತ್ಯಾಸವೇ ಇಲ್ಲ ಎನ್ನುವಂತಿದೆ ಈ ಮಕ್ಕಳ ನಡವಳಿಕೆ. ಶಾಲೆಯ ವಠಾರದಲ್ಲಿಯೇ ತಬ್ಬಿಕೊಳ್ಳುವುದು, ಮುತ್ತಿಟ್ಟುಕೊಳ್ಳುವುದು ಈ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿಷಯ ಎನ್ನುವಂತಾಗಿದೆ. ವಿದ್ಯಾರ್ಥಿಗಳ ಇಂಥಹ ವರ್ತನೆಯ ವಿಡಿಯೋವೊಂದು ವೈರಲ್ ಆಗಿದೆ. 

ಇದನ್ನೂ ಓದಿ : Trending Video : ಹುಡುಗಿ ಹಾಟ್ ಡ್ಯಾನ್ಸ್ ಕಂಡು ದಂಗಾದ ನೆಟ್ಟಿಗರು.!

ಈ ವಿಡಿಯೋದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕಾಣಬಹುದು. ಇಬ್ಬರೂ ಕೂಡಾ ಶಾಲೆಯ ಸಮವಸ್ತ್ರದಲ್ಲಿಯೇ ಇದ್ದಾರೆ. ಈ ವಿದ್ಯಾರ್ಥಿಗಳು 11  ಅಥವಾ 12 ನೇ ( ಪದವಿ ಪೂರ್ವ ) ತರಗತಿ ವಿದ್ಯಾರ್ಥಿಗಳು ಎನ್ನಲಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು, ಮುತ್ತಿಟ್ಟು ಕೊಳ್ಳುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.  ಅಲ್ಲದೆ ಅವರ ವರ್ತನೆಯನ್ನು ಎದುರಿಗಿದ್ದವರು ವಿಡಿಯೋ ಮಾಡುತ್ತಿದ್ದಾರೆ ಎಂದು ಗೊತ್ತಿದ್ದರೂ ಮತ್ತೆ ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ. 

 

ಇದನ್ನೂ ಓದಿ : viral video: ಸೋದರಳಿಯನ ಮದುವೆಯಲ್ಲಿ ನೋಟುಗಳ ಸುರಿಮಳೆ ಹರಿಸಿದ ಮಾವ

ಈ ವಿಡಿಯೋವನ್ನು shooter.vikramthakur ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.   ಈ ವಿದಿಯಿವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು,  ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News