Snake Viral Video: ಗೆಳತಿ ನಾಗಿಣಿಗಾಗಿ ಚಪ್ಪಲಿ ಕಳ್ಳತನ ಮಾಡಿ ಎಸ್ಕೇಪ್ ಆದ ನಾಗಪ್ಪ!! ವಿಡಿಯೋ ನೋಡಿ

Snake Viral Video: ಹಾವುಗಳು ಇಲಿ ಮತ್ತು ಕಪ್ಪೆಗಳನ್ನು ಎತ್ತಿಕೊಂಡು ಹೋಗುವುದನ್ನು ನಾವೆಲ್ಲರು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಚಪ್ಪಲಿ ಕಳ್ಳತನ ಮಾಡುವ ಹಾವನ್ನು ಎಂದಾದರೂ ನೋಡಿದ್ದೀರಾ? ಇಲ್ಲವಾದರೆ ಇಲ್ಲೊಂದು ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ಇದರಲ್ಲಿ ಒಂದು ಹಾವು ಚಪ್ಪಲಿಯನ್ನು ಹಿಡಿದು ವೇಗವಾಗಿ ತೆವಳಿಕೊಂಡು ಹೋಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Bhavishya Shetty | Last Updated : Nov 27, 2022, 08:42 AM IST
    • ಜನಸಂದಣಿ ಇರುವ ಸಂದರ್ಭಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವ ಕೊಂಚ ವಿರಳ
    • ಹಾವು ಚಪ್ಪಲಿಯನ್ನು ಹಿಡಿದು ವೇಗವಾಗಿ ತೆವಳಿಕೊಂಡು ಹೋಗುತ್ತಿದೆ
    • ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
Snake Viral Video: ಗೆಳತಿ ನಾಗಿಣಿಗಾಗಿ ಚಪ್ಪಲಿ ಕಳ್ಳತನ ಮಾಡಿ ಎಸ್ಕೇಪ್ ಆದ ನಾಗಪ್ಪ!! ವಿಡಿಯೋ ನೋಡಿ title=
Snake Viral Video

Snake Viral Video: ಸಾಮಾನ್ಯವಾಗಿ ಹಾವುಗಳು ಇಲಿಗಳು, ಕಪ್ಪೆಗಳು ಮತ್ತು ಕೀಟಗಳನ್ನು ತಮ್ಮ ಆಹಾರನ್ನಾಗಿ ಮಾಡಿಕೊಳ್ಳುತ್ತವೆ. ಕೆಲವೊಮ್ಮೆ ಹಾಲು ಮತ್ತು ಮೊಟ್ಟೆಗಳನ್ನು ಸಹ ಸೇವಿಸುತ್ತವೆ. ಇನ್ನು ಜನಸಂದಣಿ ಇರುವ ಸಂದರ್ಭಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವ ಕೊಂಚ ವಿರಳ. ಅವುಗಳು ಭಯದಿಂದ ದೂರ ಹೋಗುತ್ತವೆ.

ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ಹಾವಿನ ಜೊತೆ ಇದೆಂಥಾ ಹುಚ್ಚಾಟ? ಆಗಿದ್ದೇನು ನೋಡಿ.!

ಹಾವುಗಳು ಇಲಿ ಮತ್ತು ಕಪ್ಪೆಗಳನ್ನು ಎತ್ತಿಕೊಂಡು ಹೋಗುವುದನ್ನು ನಾವೆಲ್ಲರು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಚಪ್ಪಲಿ ಕಳ್ಳತನ ಮಾಡುವ ಹಾವನ್ನು ಎಂದಾದರೂ ನೋಡಿದ್ದೀರಾ? ಇಲ್ಲವಾದರೆ ಇಲ್ಲೊಂದು ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ಇದರಲ್ಲಿ ಒಂದು ಹಾವು ಚಪ್ಪಲಿಯನ್ನು ಹಿಡಿದು ವೇಗವಾಗಿ ತೆವಳಿಕೊಂಡು ಹೋಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ದೊಡ್ಡ ನಾಗರಹಾವು ಇಟ್ಟಿಗೆಯ ಒಳಗಿನಿಂದ ಹೊರಬಂದು ಮನೆ ಮುಂದೆ ಇರುವ ಗಿಡಗಳತ್ತ ನುಗ್ಗಿದೆ. ಅಲ್ಲಿ ಗಿಡಗಳ ಮಧ್ಯದಲ್ಲಿದ್ದ ಹಳೆಯ ಚಪ್ಪಲಿಯನ್ನು ಬಾಯಿಯಿಂದ ಮೆತ್ಗೆ ಹೊರತೆಗೆಯುತ್ತದೆ. ಆ ಸಂದರ್ಭದಲ್ಲಿ ಚಪ್ಪಲಿ ಭಾರವನ್ನು ಸಮತೋಲನ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಅದು ಸಾಧ್ಯವಾಗದೆ ಬೀಳುತ್ತದೆ. ಹೀಗಾಗಿ ಚಪ್ಪಲಿಯನ್ನು ಬಾಯಿಂದ ಕಚ್ಚಿ ಅಲ್ಲಿಂದ ತೆವಳುತ್ತಾ ಮುಂದಕ್ಕೆ ಸಾಗುತ್ತದೆ. ಹೀಗೆ  ಚಪ್ಪಲಿ ತೆಗೆದುಕೊಂಡು ಮತ್ತೆ ಇಟ್ಟಿಗೆಯ ನಡುವೆ ಸ್ವಲ್ಪ ದೂರ ಸಾಗುತ್ತದೆ. ಮನೆಯಲ್ಲಿದ್ದವರು ಕಿರುಚಿಕೊಂಡರೂ ಹಾವು ಚಪ್ಪಲಿ ಹಿಡಿದು ಓಡಿ ಹೋಗುತ್ತದೆ.

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಾವು ಚಪ್ಪಲಿಯನ್ನು ಕದಿಯುತ್ತಿರುವ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಈ ಹಾವು ಚಪ್ಪಲಿಯನ್ನು ಏನು ಮಾಡುತ್ತಿದೆ ಎಂದು ನಾನು ಆಶ್ಚರ್ಯದಿಂದ ನೋಡುತ್ತಿದ್ದೇನೆ. ಅದಕ್ಕೆ ಕಾಲುಗಳಿಲ್ಲ. ತಲುಪಬೇಕಾದ ಸ್ಥಳವೂ ತಿಳಿದಿಲ್ಲ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Rivaba Jadeja : 'ಪತ್ನಿ ಪರ ಚುನಾವಣಾ ಪ್ರಚಾರಕ್ಕೆ ಫಿಟ್, ಟೀಂ ಇಂಡಿಯಾದಲ್ಲಿ ಆಡಲು ಅನ್‍ಫಿಟ್'

ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದವರೆಲ್ಲ ಹಾವು ಯಾಕೆ ಚಪ್ಪಲಿ ಹೊತ್ತೊಯ್ದಿದೆ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಇದೇ ಸಮಯದಲ್ಲಿ, ಕೆಲವರು ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ‘ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಡ್ತಾರಾ? ಶೂ ಜೊತೆಗೆ ಸಾಕ್ಸ್ ಬೇಕಾ? ಎಂದೆಲ್ಲಾ ನೆಟಿಜನ್ ಗಳು ಕಾಮೆಂಟ್ ಮಾಡುತ್ತಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News