Viral Video : ಸದ್ದಿಲ್ಲದೆ ಮರಿಗಳ ನುಂಗಿದ ಹಾವು, ಕರುಳು ಹಿಂಡುವಂತಿದೆ ತಾಯಿ ಪಕ್ಷಿಯ ರೋಧನೆ

Viral Video : ಹಾವುಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಇಲಿ ಮರಿ, ಪುಟ್ಟ ಪ್ರಾಣಿಗಳ ಮರಿ, ಪಕ್ಷಿಯ ಮರಿಗಳನ್ನು ಆಹಾರವಾಗಿ ಸೇವಿಸುತ್ತದೆ. 

Edited by - Chetana Devarmani | Last Updated : Sep 1, 2022, 12:45 PM IST
  • ಹಾವುಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ
  • ಸದ್ದಿಲ್ಲದೆ ಮರಿಗಳ ನುಂಗಿದ ಹಾವಿನ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ
  • ಕರುಳು ಹಿಂಡುವಂತಿದೆ ತಾಯಿ ಪಕ್ಷಿಯ ರೋಧನೆ
Viral Video : ಸದ್ದಿಲ್ಲದೆ ಮರಿಗಳ ನುಂಗಿದ ಹಾವು, ಕರುಳು ಹಿಂಡುವಂತಿದೆ ತಾಯಿ ಪಕ್ಷಿಯ ರೋಧನೆ  title=
ವೈರಲ್‌ ವಿಡಿಯೋ

Viral Video : ಹಾವುಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಇಲಿ ಮರಿ, ಪುಟ್ಟ ಪ್ರಾಣಿಗಳ ಮರಿ, ಪಕ್ಷಿಯ ಮರಿಗಳನ್ನು ಆಹಾರವಾಗಿ ಸೇವಿಸುತ್ತದೆ. ಅಂತಹ ಅನೇಕ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. ಸಾಕಾಷ್ಟು ನಿಗಾ ವಹಿಸಿ, ಎಚ್ಚರಿಕೆಯಿಂದ ಪಕ್ಷಿಗಳು ತುಂಬಾ ಎತ್ತರದಲ್ಲಿ ಅತ್ಯಂತ ಸುರಕ್ಷಿತ ಜಾಗದಲ್ಲಿ ಮೊಟ್ಟೆಯಿಡುತ್ತದೆ.ಗೂಡು ಕಟ್ಟಿ, ತನ್ನ ಮಕ್ಕಳಿಗೆ ಅಲ್ಲಿ ಜನ್ಮ ನೀಡಿ ಪೋಷಿಸುತ್ತವೆ. ತನ್ನ ಮರಿಗಳು ಹಾರಲು ಕಲಿತು ಸುರಕ್ಷಿತವಾಗಿ ಬದುಕಲುಕಲಿಯುವ ವರೆಗೂ ಅವುಗಳನ್ನು ಕಾಪಾಡುತ್ತವೆ. ಆದರೆ ಪಕ್ಷಿಯ ಚಾಣಾಕ್ಷತೆಯನ್ನೂ ಮೀರಿ, ತನ್ನ ಆಹಾವನ್ನು ಬೇಟೆಯಾಡಿದ ಹಾವಿನ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಕೇವಲ ಒಂದು ಹಪ್ಪಳಕ್ಕಾಗಿ ರಣಾಂಗಣವಾಯಿತು ಮದುವೆ ಮನೆ, ಹೊಡೆದಾಟದ ವಿಡಿಯೋ ಇಲ್ಲಿದೆ

ಟೊಮೊಟೋ ಗಿಡಗಳ ಸಾಲಿನಲ್ಲಿ ಪಕಿಯೊಂದು ಗೂಡನ್ನು ಕಟ್ಟಿರುತ್ತದೆ. ಆದರೆ ಟೊಮೊಟೋ ಗಿಡಗಳು ಕೆಳಗಡೆ ಭೂಮಿಗೆ ಅಂಟಿಕೊಂಡಂತೆ ಇರುವ ಕಾರಣ, ಅಲ್ಲಿ ಗೂಡು ಕಟ್ಟಿದ್ದು ಅಷ್ಟೊಂದು ಸುರಕ್ಷಿತವಲ್ಲ. ಆದರೆ ಅದ್ಯಾವ ಕಾರಣಕ್ಕೆ ಈ ತಾಯಿ ಪಕ್ಷಿ ಇಷ್ಟು ಕೆಳಗಡೆ ಗೂಡು ಕಟ್ಟಿತೋ ಗೊತ್ತಿಲ್ಲ. ಇದೇ ಹಾವು ಮರಿಗಳನ್ನು ತಿನ್ನಲು ಸುಲಭವಾಗಿಸಿದ್ದಂತೂ ನಿಜ. 

ಮೂರು ಮರಿಗಳಿಗೆ ಜನ್ಮ ನೀಡಿದ ಆ ತಾಯಿ ಪಕ್ಷಿ, ಆಹಾರ ತರಲು ತೆರಳಿದಾಗ ಬಂದ ನಾಗರಾಜ ಸದ್ದಿಲ್ಲದೆ ಮರಿಗಳನ್ನು ನುಂಗಿ ಪರಾರಿಯಾಗಿದೆ. ತನ್ನ ಮಕ್ಕಳಿಗೆ ಆಹಾರ ಹೊತ್ತು ಬಂದ ತಾಯಿ ಪಕ್ಷಿ, ಮರಿಗಳಿಲ್ಲದಿರುವುದನ್ನು ಕಂಡು ದಂಗಾಗಿದೆ. ಪಕ್ಷಿಯ ಮೂಕ ರೋಧನೆ ಕರುಳು ಹಿಂಡುವಂತಿದೆ. ಈ ವೈರಲ್‌ ವಿಡಿಯೋ ಕಲ್ಲು ಮನಸ್ಸನ್ನು ಸಹ ಕರಗಿಸುವಂತಿದೆ. 

ಇದನ್ನೂ ಓದಿ: Viral Video : ನಾಗರ ಹಾವು - ಮುಂಗುಸಿ ಕಾದಾಟದ ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News