Viral Video : ಹಾವನ್ನು ಸರ ಸರನೆ ಹಿಡಿದು ಎಳೆದಾಡಿದ ಕೋತಿ.! ಕಾಳಗದಲ್ಲಿ ಗೆದ್ದವರು ಯಾರು ?

Viral Video : ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ ದಿನ ಒಂದರಿಂದ ಒಂದು ಭಿನ್ನ ಎನ್ನುವಂಥಹ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ. ಪ್ರಾಣಿಗಳ ಪೈಕಿ ಹಾವುಗಳ ವಿಡಿಯೋಗಳನ್ನು ಹೆಚ್ಚಾಗಿ ಹಂಚಿ ಕೊಳ್ಳಲಾಗುತ್ತದೆ. 

Written by - Ranjitha R K | Last Updated : Dec 1, 2022, 05:32 PM IST
  • ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ಕಾಣಸಿಗುತ್ತವೆ.
  • ಒಂದರಿಂದ ಒಂದು ಭಿನ್ನ ಎನ್ನುವಂಥಹ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ.
  • ಹಾವು ಮತ್ತು ಕೋತಿಯ ವಿಡಿಯೋ ವೈರಲ್ ಆಗುತ್ತಿದೆ.
Viral Video : ಹಾವನ್ನು ಸರ ಸರನೆ ಹಿಡಿದು ಎಳೆದಾಡಿದ ಕೋತಿ.! ಕಾಳಗದಲ್ಲಿ ಗೆದ್ದವರು ಯಾರು ?   title=
Snake Viral Video

Viral Video : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ಕಾಣಸಿಗುತ್ತವೆ. ಇಲ್ಲಿ ಪ್ರಾಣಿಗಳ ವಿಡಿಯೋಗಳನ್ನು ಹಂಚಿಕೊಂಡರೆ ಅತಿ ಹೆಚ್ಚು ಮಂದಿ ವೀಕ್ಷಿಸುತ್ತಾರೆ. ಈ ವಿಡಿಯೋಗಳಲ್ಲಿ ಪ್ರಾಣಿಗಳ ಭಾವನೆ, ಅವುಗಳ ನೋವು  ನಲಿವು, ಭಯ ಎಲ್ಲವನ್ನೂ ನೋಡಬಹುದು.  ಕೆಲವೊಂದು ವಿಡಿಯೋಗಳನ್ನು ನೋಡಿದಾಗ ಸಂತೋಷವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿದಾಗ ಭಯ ಆವರಿಸಿ ಬಿಡುತ್ತವೆ. ಇನ್ನು ಕೆಲವು ಕೆಲವು ವಿಡಿಯೋಗಳನ್ನು ನೋಡಿದಾಗ ನಕ್ಕು ನಕ್ಕು ಸಾಕಾಗುತ್ತದೆ. 

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ ದಿನ ಒಂದರಿಂದ ಒಂದು ಭಿನ್ನ ಎನ್ನುವಂಥಹ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ. ಪ್ರಾಣಿಗಳ ಪೈಕಿ ಹಾವುಗಳ ವಿಡಿಯೋಗಳನ್ನು ಹೆಚ್ಚಾಗಿ ಹಂಚಿ ಕೊಳ್ಳಲಾಗುತ್ತದೆ. ಹಾವು ಮತ್ತು ಮನುಷ್ಯರ ನಡುವಿನ ಸಂಘರ್ಷ, ಇತರ ಪ್ರಾಣಿಗಳೊಂದಿಗೆ ಹಾವಿನ ಕಾದಾಟ ಹೀಗೆ ನಾನಾ ರೀತಿಯ ವಿಡಿಯೋಗಳನ್ನು ಕಾಣಬಹುದು. 

ಇದನ್ನೂ ಓದಿ : Viral Video: ಅತ್ತಿಗೆಯ ಕೈ ಹಿಡಿದು ಡ್ಯಾನ್ಸ್ ಮಾಡಿದ ಮೈದುನ, ಮುಂದೇನಾಯ್ತು ಗೊತ್ತಾ?

ಇದೀಗ ಹಾವು ಮತ್ತು ಕೋತಿಯ ವಿಡಿಯೋವೊಂದು ವೈರಲ್ ಆಗುತ್ತಿದೆ.  ಈ ವಿಡಿಯೋದಲ್ಲಿ ಕೋತಿಯೊಂದು ಹತ್ತು ಅಡಿ ಉದ್ದದ ಹಾವಿನೊಂದಿಗೆ ಇರುವುದನ್ನು ಕಾಣಬಹುದು. ಹಾವಿನ ಮುಂದೆ ಕುಳಿತಿರುವ ಕೋತಿ ಹಾವನ್ನು ಕಂಡು ಒಂದು ಚೂರು ಭಯಗೊಂಡಂತೆ ಕಾಣುವುದಿಲ್ಲ. ಬದಲಾಗಿ ಆ ಹಾವಿನ ಬಾಲವನ್ನು ಹಿಡಿದು ಸರಸರನೇ ಎಳೆದುಕೊಂಡು ಹೋಗುತ್ತಿದೆ. ಕೋತಿ ಆ ರೀತಿ ಎಳೆದುಕೊಂಡು ಹೋಗುವಾಗ ಹಾವು ಸುಮ್ಮನಿರುವುದುಂಟೆ ? ಹಾವು ಕೂಡಾ ಕೋತಿಯ ಮೇಲೆ ದಾಳಿಗೆ ಮುಂದಾಗುತ್ತದೆ. ಒಂದೆರಡು ಬಾರಿ ಕೋತಿ ಯನ್ನು ಕಚ್ಚಲು ಮುಂದಾಗುತ್ತದೆ. ಆದರೆ ಕೋತಿ ಹೇಗೋ ತಪ್ಪಿಸಿಕೊಳ್ಳುತ್ತದೆ. 

 

ಇದನ್ನೂ ಓದಿ : Viral Video: ಚಾಮರಾಜನಗರದ ಜಮೀನಿನಲ್ಲಿ ಜೋಡಿ‌ ಹುಲಿ ಪ್ರತ್ಯಕ್ಷ- ಆತಂಕದಲ್ಲಿ ಗ್ರಾಮಸ್ಥರು

ಹಾವು ಕೋತಿ ಕಾಳಗದ ಈ ವೀಡಿಯೊವನ್ನು   beautiful_new_pixandwild_animal_pix ಎಂಬ Instagram ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಸಾವಿರಾರು ಬಾರಿ ವೀಕ್ಷಿಸಲಾಗಿದೆ. ಮಾತ್ರವಲ್ಲ ವೀಕ್ಷಿಸಿದವರು ಈ ವಿದಿಯಿಗಳನ್ನು ಲೈಕ್ ಕೂಡಾ ಮಾಡುತ್ತಿದ್ದಾರೆ.  ಅಲ್ಲದೆ, ಈ ವಿಡಿಯೋ ಬಗ್ಗೆ ಭಿನ್ನ ಭಿನ್ನವಾಗಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

Trending News