ಬೆಂಗಳೂರು : ಟೊಮೇಟೊ ಕೆಚೆಪ್ ಅಥವಾ ಟೊಮ್ಯಾಟೋ ಸಾಸ್ ಅನ್ನು ಮಧ್ಯಮ ವರ್ಗದ ಮನೆಗಳಿಂದ ಹಿಡಿದು ವಿವಿಐಪಿ ಮನೆಗಳವರೆಗೆ ಎಲ್ಲರೂ ಬಳಸುತ್ತಾರೆ. ಚಪಾತಿ, ದೋಸೆ, ಇಡ್ಲಿ ಹೀಗೆ ಅದೇನೇ ಇರಲಿ ಕೆಲವರಂತೂ ಚಟ್ನಿ ಬದಲು ಟೊಮ್ಯಾಟೋ ಸಾಸ್ ಅನ್ನು ಬಳಸುತ್ತಾರೆ. ಇನ್ನು ಚೈನೀಸ್ ಆಹಾರಗಳಿಗೆ ಇದು ಬೇಕೇ ಬೇಕು. ಆದರೆ ಈ ಟೊಮ್ಯಾಟೋ ಸಾಸ್ ಅನ್ನು ಹೇಗೆ ತಯಾರಿಸುತ್ತಾರೆ ಎನ್ನುವುದು ಗೊತ್ತಿದೆಯಾ ?
ಟೊಮೇಟೊ ಸಾಸ್ ತಯಾರಿಕೆಯಲ್ಲಿ ಅನೇಕ ಟೊಮೆಟೊಗಳನ್ನು ಬಳಸುತ್ತಾರೆ. ಟೊಮೇಟೊ ಸಾಸ್ ಅನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಈ ವೀಡಿಯೊದಲ್ಲಿ ನೋಡಬಹುದಾಗಿದೆ. ಟೊಮೇಟೊ ಸಾಸ್ ಮಾಡುವ ಪ್ರಕ್ರಿಯೆಯ ಈ ವೀಡಿಯೊ ಬಹಳ ಅಸಹ್ಯಕರವಾಗಿದೆ. ಈ ವಿಡಿಯೋ ನೋಡಿದ ಮೇಲೆ ಟೊಮೆಟೊ ಸಾಸ್ ಸೇವನೆಯನ್ನು ನಿಲ್ಲಿಸುವುದಂತೂ ಖಂಡಿತಾ.
ಇದನ್ನೂ ಓದಿ : Vande Sadharan ರೈಲಿನ ಒಳನೋಟ ಹೇಗಿದೆ? 'ಅಗ್ಗದ ಎಕ್ಸ್ ಪ್ರೆಸ್' ರೈಲಿನ ಮೊದಲ ವಿಡಿಯೋ ಬಹಿರಂಗ!
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ಬಳಸಿರುವ ಟೊಮೆಟೊಗಳು ಕೊಳೆತ ಟೊಮೆಟೊಗಳಾಗಿವೆ. ಈ ಟೊಮೆಟೊಗಳು ಸಂಪೂರ್ಣವಾಗಿ ಕೊಳೆತಿರುವುದನ್ನು ನಾವು ಈ ವೀಡಿಯೊದಲ್ಲಿ ನೋಡಬಹುದು. ಆ ಟೊಮೇಟೊಗಳಲ್ಲಿ ನಾವು ಅನೇಕ ಕೀಟಗಳನ್ನು ನೋಡಬಹುದು. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾರ್ಖಾನೆಯಲ್ಲಿ ಟೊಮೆಟೊ ಸಾಸ್ ತಯಾರಿಸುವ ವೀಡಿಯೊವನ್ನು ಇಲ್ಲಿ ವೀಕ್ಷಿಸಿ:
ಇದನ್ನೂ ಓದಿ : ಶಕ್ತಿಶಾಲಿ ಗೂಳಿಯನ್ನೇ ಹಿಮ್ಮೆಟ್ಟಿಸಿದ ಪುಟಾಣಿ ಮೇಕೆ, ಕಾನ್ಫಿಡೆನ್ಸ್ ಅಂದ್ರೆ ಇದಪ್ಪ ಎಂದ ನೆಟ್ಟಿಗರು!
ಈ ಟೊಮೆಟೊ ಸಾಸ್ ಅನ್ನು ಯಾವ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ?
ಸದ್ಯಕ್ಕೆ ಈ ಟೊಮೆಟೊ ಸಾಸ್ ಅನ್ನು ಯಾವ ಫ್ಯಾಕ್ಟರಿ ತಯಾರಿಸುತ್ತಿದೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಿಂದ ಸ್ಪಷ್ಟವಾಗಿಲ್ಲ.
ಟೊಮೇಟೊ ಸಾಸ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು:
ಇಂತಹ ಕಳಪೆ ಗುಣಮಟ್ಟದ ಟೊಮೆಟೊ ಸಾಸ್ ಅನ್ನು ಖರೀದಿಸುವ ಬದಲು ಮನೆಯಲ್ಲಿಯೇ ರುಚಿಕರ ಸಾಸ್ ಅನ್ನು ಖರೀದಿಸಬಹುದು. ಈಗ ಮನೆಯಲ್ಲಿ ಆರೋಗ್ಯಕರ ಟೊಮೆಟೊ ಸಾಸ್ ಅನ್ನು ಹೇಗೆ ತಯಾರಿಸಬೇಕೆಂದು ನೋಡೋಣ.
ಅಗತ್ಯವಿರುವ ವಸ್ತುಗಳು:
ಟೊಮೆಟೊ - ಒಂದು ಕೆಜಿ
ಮೆಣಸಿನ ಪುಡಿ - ಒಂದು ಚಮಚ
ಸಕ್ಕರೆ - 2 ಚಮಚ
ಉಪ್ಪು - ಅರ್ಧ ಚಮಚ
ಶುಂಠಿ - ಸಣ್ಣ ತುಂಡು
ಬೆಳ್ಳುಳ್ಳಿ - 3 ಎಸಳು -
ಲವಂಗ - ಒಂದು ಚಿಟಿಕೆ
ನಿಂಬೆ ರಸ - 2 ಚಮಚ
ಪಾಕವಿಧಾನ:
ಮೊದಲು ಟೊಮ್ಯಾಟೊ ಕತ್ತರಿಸಿ. ನಂತರ ಅದಕ್ಕೆ ಮೆಣಸಿನ ಪುಡಿ, ಉಪ್ಪು, ಒಂದು ಚಮಚ ಸಕ್ಕರೆ, , ಶುಂಠಿ, ಬೆಳ್ಳುಳ್ಳಿ, ಲವಂಗ ಸೇರಿಸಿ ಮತ್ತು ಕುದಿಯಲು ಬಿಡಿ. ನಂತರ ಬೇಯಿಸಿದ ಟೊಮೆಟೊಗಳನ್ನು ಪೇಸ್ಟ್ ಮಾಡಿ. ಪೇಸ್ಟ್ ಅನ್ನು ಸೋಸಿ ಬಾಣಲೆಗೆ ಹಾಕಿ. ಉಳಿದ ಸಕ್ಕರೆಯನ್ನು ಸೇರಿಸಿ ಮತ್ತು ಒಲೆಯ ಮೇಲೆ ಹಾಕಿ ಚೆನ್ನಾಗಿ ಬೆರೆಸಿ. ಈ ಪೇಸ್ಟ್ ಚೆನ್ನಾಗಿ ದಪ್ಪವಾಗುವವರೆಗೆ ಕಾಯಿಸಿ. ನಂತರ ಇದನ್ನು ಒಲೆಯಿಂದ ಕೆಳಗಿಳಿಸಿ ನಿಂಬೆ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ತಣ್ಣಗಾದ ನಂತರ, ಅದನ್ನು ಸ್ವಚ್ಛವಾದ ಗಾಜಿನ ಜಾರ್ ಗೆ ಹಾಕಿಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ