ಖಾರ -ಹುಳಿ ಪಾನಿಪುರಿ ಎಲ್ಲರಿಗೂ ಇಷ್ಟ ! ಆದರೆ ಪಾನೀಪುರಿ ನೀರು ಹೇಗೆ ತಯಾರಿಸುತ್ತಾರೆ ಗೊತ್ತಾ ? ಈ ವಿಡಿಯೋ ನೋಡಿ

ನಾಲಗೆ ರುಚಿ ಹೆಚ್ಚಿಸುವ ಈ  ಪಾನೀಪುರಿ ನೀರನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಬಗ್ಗೆ ಯೋಚಿಸಿದ್ದೀರಾ?  ಪಾನೀಪುರಿ ನೀರನ್ನು ಯಾವ ರೀತಿ ತಯಾರಿಸಲಾಗುತ್ತದೆ ಎನ್ನುವ ವಿಡಿಯೋ ಇಲ್ಲಿದೆ.  

Written by - Ranjitha R K | Last Updated : Nov 3, 2023, 01:33 PM IST
  • ಪಾನೀಪುರಿ ಇಷ್ಟಪಡದವರು ಯಾರಿದ್ದಾರೆ ಹೇಳಿ?
  • ಪಾನೀಪುರಿ ನಾಲಗೆಗೆ ರುಚಿ ಎನ್ನುವುದರಲ್ಲಿ ಎರಡು ಮಾತಿಲ್ಲ.
  • ಪಾನೀಪುರಿ ನೀರನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ
ಖಾರ -ಹುಳಿ ಪಾನಿಪುರಿ ಎಲ್ಲರಿಗೂ ಇಷ್ಟ ! ಆದರೆ ಪಾನೀಪುರಿ ನೀರು ಹೇಗೆ ತಯಾರಿಸುತ್ತಾರೆ ಗೊತ್ತಾ  ? ಈ ವಿಡಿಯೋ ನೋಡಿ  title=

ಬೆಂಗಳೂರು :  ಪಾನೀಪುರಿ ಇಷ್ಟಪಡದವರು ಯಾರಿದ್ದಾರೆ ಹೇಳಿ?   ಪಾನೀಪುರಿಯ ಖಾರ -ಖಾರ ಹುಳಿ -ಹುಳಿ ನೀರಿಗಾಗಿಯೇ ಪಾನೀಪುರಿ ಮಾರುವವನ ಸುತ್ತ ರಾಶಿ ಬಿದ್ದು ಜನ ಪಾನೀಪುರಿ ಸೇವಿಸುತ್ತಾರೆ. ಹೀಗೆ ನಾವು ತಿನ್ನುವ ಪಾನೀಪುರಿ ನಾಲಗೆಗೆ ರುಚಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾಲಗೆ ರುಚಿ ಹೆಚ್ಚಿಸುವ ಈ  ಪಾನೀಪುರಿ ನೀರನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಬಗ್ಗೆ ಯೋಚಿಸಿದ್ದೀರಾ?  ಪಾನೀಪುರಿ ನೀರನ್ನು ಯಾವ ರೀತಿ ತಯಾರಿಸಲಾಗುತ್ತದೆ ಎನ್ನುವ ವಿಡಿಯೋ ಇಲ್ಲಿದೆ. ಪಾನೀಪುರಿ  ತಿನ್ನುವ ಮುನ್ನ ಈ ವಿಡಿಯೋವನ್ನು ಖಂಡಿತಾ ನೋಡಿ. 

Instagramನಲ್ಲಿ ಪಾನೀಪುರಿ ನೀರನ್ನು ಯಾವ ರೀತಿಯಲ್ಲಿ ತಯಾರಿಸಲಾಗುತ್ತದೆ ಎನ್ನುವ ವಿಡಿಯೋವನ್ನು ಶೇರ್ ಮಾಡಲಾಗಿದೆ. ಇಲ್ಲಿ ವ್ಯಕ್ತಿಯೊಬ್ಬರು ಪಾನೀಪುರಿ ನೀರನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಮೊದಲು ಹಸಿರು ಸೊಪ್ಪು ಮತ್ತು ಮೆಣಸಿನಕಾಯಿಗಳೊಂದಿಗೆ ದಪ್ಪ ಪೇಸ್ಟ್ ಅನ್ನು ತಯಾರಿಸುತ್ತಿದ್ದಾರೆ. ನಂತರ ಆ ಪೇಸ್ಟ್ ಅನ್ನು ಹದ ಮಾಡಲು ಹೆಚ್ಚಿನ ನೀರು ಸೇರಿಸುವುದನ್ನು ಕಾಣಬಹುದು. ನಂತರ  ಹುಣಸೆಹಣ್ಣು ಮತ್ತು ನೀರು ಸೇರಿಸಿ ರುಬ್ಬುವುದನ್ನು ಕೂಡಾ ಕಾಣಬಹುದು.  ಇಲ್ಲಿ ಪಾನೀಪುರಿ  ನೀರನ್ನು ತಯಾರಿಸುವ ಸಂಪೂರ್ಣ ಪ್ರಕ್ರಿಯೆ ಬರಿಗೈಯ್ಯಲ್ಲಿಯೇ ಸಾಗುತ್ತದೆ. ಈ ಎಲ್ಲಾ  ಪೇಸ್ಟ್ ಗಳನ್ನು ಜೊತೆಯಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ಟ್ಯಾಪ್ ನೀರನ್ನು ಸೇರಿಸಲಾಗುತ್ತದೆ. 

ಇದನ್ನೂ ಓದಿ : World Cup: ಪಂದ್ಯ ಆರಂಭಕ್ಕೂ ಮೊದಲು ಹರ್ಭಜನ್ ಜೊತೆ ಕೊಹ್ಲಿ ಡಾನ್ಸ್ ಹೇಗಿತ್ತು ನೋಡಿ

ಪಾನೀಪುರಿ ತಯಾರಾಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ:

 

ಇದನ್ನೂ ಓದಿ : My Name Is... ಕ್ರಿಕೆಟ್ ಮೈದಾನದಲ್ಲೇ ಸ್ಟೆಪ್ ಹಾಕಿದ ವಿರಾಟ್

@yummybites_kt ಎಂಬ ಬಳಕೆದಾರರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವೀಡಿಯೊ ಬಿಡುಗಡೆಯಾದಾಗಿನಿಂದ 1.8 ಮಿಲಿಯನ್ ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ.  ಇಲ್ಲಿ ಪಾನೀ ಪೂರಿ ನೀರನ್ನು ತಯಾರಿಸುವ ಬಗೆ ನೋಡಿ ವೀಕ್ಷಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 

ಈ ಹಿಂದೆ, ಪಾನೀಪುರಿಯ ಪೂರಿಗಳನ್ನು ಯಾವ ರೀತಿ ತಯಾರಿಸಲಾಗುತ್ತದೆ ಎನ್ನುವ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

( ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee  ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News